ಕರ್ನಾಟಕ ವಿಶ್ವವಿದ್ಯಾಲಯದ ಮುಖ್ಯ ಆವರಣದಲ್ಲಿ, ಸ್ನಾತಕೋತ್ತರ ಕೇಂದ್ರಗಳಲ್ಲಿ ಮತ್ತು ಅಧೀನ ಮಹಾವಿದ್ಯಾಲಯಗಳಲ್ಲಿ ಸನ್ 2025-26ನೇ ಸಾಲಿಗೆ ಸ್ನಾತಕೋತ್ತರ ಪದವಿ ಕೋರ್ಸಗಳಿಗೆ ಖಾಲಿ ಹುದ್ದೆ ಅಥವಾ ಹೆಚ್ಚುವರಿ, ಸ್ವ-ಆರ್ಥಿಕ ಪದವಿ, ವಿಷಯಗಳ ಕಾರ್ಯಭಾರದ ಅಗತ್ಯತೆಗೆ ಅನುಗುಣವಾಗಿ ಬೋಧನೆ ಮಾಡಲು ಪೂರ್ಣಾವಧಿ, ಅರೆಕಾಲಿಕ ಅತಿಥಿ ಉಪನ್ಯಾಸಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತಿಯುಳ್ಳ ಅಭ್ಯರ್ಥಿಗಳು ಸೆಪ್ಟೆಂಬರ 20, 2025 ರೊಳಗಾಗಿ ಅರ್ಜಿ ಸಲ್ಲಿಸಬೇಕು. ಈ ಮೂ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ವಿಭಾಗಗಳ ಅಧ್ಯಕ್ಷರುಗಳು, ಆಡಳಿತಾಧಿಕಾರಿಗಳು, ಪ್ರಾಚಾರ್ಯರುಗಳನ್ನು ಖುದ್ದಾಗಿ ಅಥವಾ ಕ.ವಿ.ವಿ. ಅಂರ್ತಜಾಲ www.kud.ac.in ಮುಂಖಾತರ ಪಡೆಯಬಹುದು ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.