ಶಿವಮೊಗ್ಗ : ಶಿವಮೊಗ್ಗ ರಂಗಾಯಣವು ಪ್ರತಿ ವರ್ಷದಂತೆ ಈ ಬಾರಿಯೂ ಮಕ್ಕಳಿಗಾಗಿ ರಂಗತರಬೇತಿ ಶಿಬಿರ ‘ಚಿಣ್ಣರ ಸಿಹಿಮೊಗೆ-2026’ ಎಂಬ ಹೆಸರಿನಲ್ಲಿ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಏಪ್ರಿಲ್ 14 ರಿಂದ ಮೇ 03 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆವರೆಗೆ ಬೇಸಿಗೆ ಶಿಬಿರವನ್ನು ಏರ್ಪಡಿಸಿದೆ.
ಶಿಬಿರದಲ್ಲಿ ಅನುಭವವಿರುವ ಕರ್ನಾಟಕದ ಕ್ರೀಯಾಶೀಲ ರಂಗನಿರ್ದೇಶಕರು, ರಂಗಭೂಮಿಯ ನೇಪಥ್ಯ ಕೆಲಸಗಳಲ್ಲಿ ಪರಿಣಿತರಾಗಿರುವ ಸಾಧಕರು, ವಿವಿಧ ಕಲಾಕ್ಷೇತ್ರಗಳಲ್ಲಿ ಪರಿಣಿತ ಹೊಂದಿರುವ ರಾಜ್ಯದ ಕಲಾವಿದರು ಸಂಪನ್ಮೂಲ ವ್ಯಕ್ತಿಗಳಾಗಿ ಕೆಲಸ ನಿರ್ವಹಿಸಲಿದ್ದಾರೆ.
ನಾಟಕ, ಹೋಳಿ, ರಂಗಾಟ, ರಂಗಗೀತೆ, ಜನಪದ ಆಟ, ಮಣ್ಣಿನ ಆಟ, ಮ್ಯಾಜಿಕ್ ಷೋ, ಮಕ್ಕಳ ಸಂತೆ, ರಂಗಜಾಥಾ, ಮುಖವಾಡ ತಯಾರಿ, ಚಿತ್ರಕಲೆ, ಮಕ್ಕಳ ಸಿನಿಮಾ, ನಾಟಕ ವೀಕ್ಷಣೆ, ಪ್ರವಾಸ, ಮಡಿಕೆ ತಯಾರಿ, ಪರಿಸರದ ಜೊತೆ ಒಡನಾಟ, ಹೊರಸಂಚಾರ ಹೀಗೆ ಹಲವು ಮಜಲುಗಳನ್ನು ಪ್ರಾಯೋಗಿಕವಾಗಿ ಅಭ್ಯಾಸ ಮಾಡಿಸುತ್ತಾ ನಾಟಕಕ್ಕೆ ಸಂಬAಧಿತ ಪೂರಕ ಕಲೆಗಳನ್ನು ಶಿಬಿರದಲ್ಲಿ ಕಲಿಸಲಾಗುವುದು.
ಶಿಬಿರದ ಕೊನೆಯ ಎರಡು ದಿನಗಳು ಮೇ 02 ಮತ್ತು 03 ರಂದು ಶಿಬಿರದಲ್ಲಿ ಕಲಿಸಿದ ನಾಟಕಗಳನ್ನು, ಕಲೆಗಳನ್ನು ರಂಗಾಯಣದ ‘ಚಿಣ್ಣರ ಸಿಹಿಮೊಗೆ’ ರಂಗೋತ್ಸವದಲ್ಲಿ ಪ್ರದರ್ಶಿಸಲಾಗುವುದು. ಒಟ್ಟು 150 ಮಕ್ಕಳಿಗೆ ಈ ಶಿಬಿರದಲ್ಲಿ ಭಾಗವಹಿಸಲು ಅವಕಾಶವಿದೆ ಮೊದಲು ಬಂದವರಿಗೆ ಮೊದಲ ಆದ್ಯತೆ.
ಮೊದಲು ಟೋಕನ್ ಪಡೆದವರು ಅರ್ಜಿಯನ್ನು ಏಪ್ರಿಲ್ 09 ರಂದು ಶಿವಮೊಗ್ಗದ ರಂಗಾಯಣ ಕಚೇರಿಯಲ್ಲಿ ಪಡೆದು, ತಕ್ಷಣವೇ ಭರ್ತಿ ಮಾಡಿ ಸ್ಥಳದಲ್ಲಿಯೇ ಅರ್ಜಿ ಮತ್ತು ಪ್ರವೇಶ ಶುಲ್ಕ ರೂ. 3 ಸಾವಿರ ಗಳನ್ನು ನಗದು ರೂಪದಲ್ಲಿ ಪಾವತಿಸಿ ಪ್ರವೇಶ ಪ್ರಕ್ರಿಯೆಯನ್ನು ಮುಗಿಸಿ ಅದಕ್ಕೆ ರಶೀದಿ ಪಡೆಯಬೇಕು. ಪ್ರವೇಶ ಪಡೆಯಲು 02 ಪಾಸ್‌ಪೋರ್ಟ್ ಅಳತೆಯ ಫೋಟೋ ಮತ್ತು ಜನನ ಪ್ರಮಾಣ ಪತ್ರ ಅಥವಾ ಆಧಾರ್ ಕಾರ್ಡ್ ಪ್ರತಿ ಕಡ್ಡಾಯವಾಗಿದ್ದು ಮಕ್ಕಳ ವಯೋಮಿತಿ 08 ರಿಂದ 13 ವರ್ಷದೊಳಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ರಂಗಾಯಣ ಕಚೇರಿ, ಸುವರ್ಣ ಸಂಸ್ಕೃತಿ ಭವನ, ಹೆಲಿಪ್ಯಾಡ್ ಹತ್ತಿರ, ಅಶೋಕನಗರ, ಶಿವಮೊಗ್ಗ ಇವರನ್ನು ಅಥವಾ ಕಚೇರಿ ದೂ. ಸಂ: 08182-256353 ನ್ನು ಸಂಪರ್ಕಿಸಬಹುದಾಗಿದೆ ಎಂದು ರಂಗಾಯಣ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ದಾವಣಗೆರೆ, ಬಾಗಲಕೋಟೆ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳ ಗೆಲುವು ಖಚಿತ: ಸಚಿವ ಚಲುವರಾಯಸ್ವಾಮಿ
BIG Alert: ‘ಆನ್‌ಲೈನ್’ನಲ್ಲಿ ‘IPL ಟಿಕೆಟ್’ ಖರೀದಿಗಾಗಿ ಹುಡುಕುತ್ತಿದ್ದೀರಾ? ಅದಕ್ಕೂ ಮುನ್ನ ಈ ಸುದ್ದಿ ಓದಿ.!








