ಶಿವಮೊಗ್ಗ: ಸಾಗರ ತಾಲ್ಲೂಕಿನ ಮಂಕೋಡು ಸರ್ವೆ ನಂ.12ರಲ್ಲಿ ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಠಿಸಿ ಭೂಗಳ್ಳರ ಪಾಲಾಗುವಂತೆ ಸರ್ಕಾರಿ ಅಧಿಕಾರಿಗಳೇ ಕೃತ್ಯವೆಸಗಿದ್ದರು. ಈ ಕೃತ್ಯವೆಸಗಿರುವಂತ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾಗರ ಉಪ ವಿಭಾಗೀಯ ಅಧಿಕಾರಿಗಳಿಗೆ ಸೂರನಗದ್ದೆಯ ಶ್ರೀ ಬೀರೇಶ್ವರ ಸೇವಾ ಸಮಿತಿ ಮನವಿ ಮಾಡಿದೆ.
ಇಂದು ಸಾಗರ ನಗರದ ಎಸಿ ಕಚೇಯ ಮುಂದೆ ಪ್ರತಿಭಟನೆ ನಡೆಸಿದಂತ ಶ್ರೀ ಬೀರೇಶ್ವರ ಸೇವಾ ಸಮಿತಿಯ ಸದಸ್ಯರು, ಮಂಕೋಡು ಗ್ರಾಮದ ಸರ್ವೆ ನಂ.12ರಲ್ಲಿನ ಸರ್ಕಾರಿ ಭೂಮಿಗೆ ನಕಲಿ ದಾಖಲೆ ಸೃಷ್ಠಿ ಮಾಡಲಾಗಿದೆ. ಆ ಮೂಲಕ ಭೂಗಳ್ಳರ ಪಾಲಾಗುವಂತೆ ತಾಲ್ಲೂಕು ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ನೆರವಾಗಿದ್ದಾರೆ ಎಂಬುದಾಗಿ ಆರೋಪಿಸಿದರು.
ಸಾಗರ ತಾಲ್ಲೂಕಿನ ಭೀಮನೇರಿ ಗ್ರಾಮದ ಮಜರೆ ಸೂರನಗದ್ದೆಯ ಮಂಕೋಡು ಗ್ರಾಮದ ಸರ್ವೆ ನಂ.12ರಲ್ಲಿ 59 ಎಕರೆ 35 ಗುಂಟೆ ಸರ್ಕಾರಿ ಭೂಮಿ ಇದೆ. ಈ ಭೂಮಿಯನ್ನು ಅನಾಮಧೇಯ ವ್ಯಕ್ತಿಗಳಿಗೆ ಸರ್ಕಾರಿ ಅಧಿಕಾರಿಗಳೇ ಶಾಮೀಲಾಗಿ ನಕಲಿ ಹಕ್ಕು ಪತ್ರ ಸೃಷ್ಠಿಸಿರೋ ಬಗ್ಗೆ ತನಿಖೆ ನಡೆಸುವಂತೆ ಸಾಗರ ಉಪ ವಿಭಾಗೀಯ ಅಧಿಕಾರಿ ಯತೀಶ್ ಅವರಿಗೆ ಮನವಿ ಮಾಡಿದರು.
ಮಂಕೋಡು ಸರ್ವೆ ನಂಬರ್ 12 ರಲ್ಲಿ 59 ಎಕರೆ 35 ಗುಂಟೆ ಜಾಗವನ್ನು ಅನಾಮಧೇಯ ವ್ಯಕ್ತಿಗಳಾದ ಫಕೀರಪ್ಪ ಬಿನ್ ನಾಗಪ್ಪ ಹಾಗೂ ಸುಬ್ಬಪ್ಪ ಬಿನ್ ನೀಲಾನಾಯ್ಕ ಇವರ ಹೆಸರಿನಲ್ಲಿ ನಕಲಿ ಹಕ್ಕು ಪತ್ರ ಸೃಷ್ಟಿಸಿ, ಖಾಸಗಿ ವ್ಯಕ್ತಿಗಳು ಕಬಳಿಸುವಂತ ಹುನ್ನಾರ ಮಾಡಿದ್ದಾರೆ. ಇದನ್ನು ತಡೆಯಬೇಕು. ಈ ಅಕ್ರಮ ನಡೆಸಲು ಅವಕಾಶ ಮಾಡಿಕೊಟ್ಟಿರೋದೇ ಸರ್ಕಾರಿ ಅಧಿಕಾರಿಗಳಾಗಿದ್ದಾರೆ. ಆ ಬಗ್ಗೆ ತನಿಖೆ ನಡೆಸಿ, ತಪ್ಪಿ ತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ಬೀರೇಶ್ವರ ಸೇವಾ ಸಮಿತಿಯ ಅಧ್ಯಕ್ಷ ಉಮೇಶ್ ಸೂರನಗದ್ದೆ, ಉಪಾಧ್ಯಕ್ಷ ಕನ್ನಪ್ಪ, ಕಾರ್ಯದರ್ಶಿ ಹರೀಶ್, ಖಜಾಂಚಿ ಮೈಲಪ್ಪ, ಸದಸ್ಯರಾದಂತ ನಾರಾಯಣಪ್ಪ, ಗಲ್ಲಿ ವೆಂಕಟೇಶ್, ಭೀಮನೇರಿ ಆನಂದ, ಹರಟೆ ಮಂಜಪ್ಪ, ಸೂರನಗದ್ದೆ ಮಂಜಪ್ಪ, ನಾಗರಾಜ ಬರಮನೆ, ಹುಚ್ಚಪ್ಪ, ಶಿವಪ್ಪ ಸೇರಿದಂತೆ ಇತರೆ ಗ್ರಾಮಸ್ಥರು ಹಾಜರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ
NHM ಗುತ್ತಿಗೆ ಸಿಬ್ಬಂದಿಯ ಸಾಮಾಜಿಕ ಭದ್ರತೆಗೆ ನಮ್ಮ ಸರ್ಕಾರ ಸದಾ ಸಿದ್ದ: ಸಚಿವ ದಿನೇಶ್ ಗುಂಡೂರಾವ್
BREAKING : ಪಾಕ್ ತಂಡಕ್ಕೆ ಮತ್ತೊಂದು ಶಾಕ್ : `ಚಾಂಪಿಯನ್ಸ್ ಟ್ರೋಫಿ’ಯಿಂದ `ಫಖರ್ ಜಮಾನ್’ ಔಟ್.!