ಶಿವಮೊಗ್ಗ: ಜಿಲ್ಲೆಯಲ್ಲಿ ಸುದ್ದಿ ಸಾಗರ ಎನ್ನುವಂತ ವೆಬ್ ಸೈಟ್, ವಾಟ್ಸ್ ಆಪ್ ಗ್ರೂಪ್ ಮೂಲಕ ಚಿರ ಪರಿಚಿತರಾದಂತ ಪತ್ರಕರ್ತ, ಇದೀಗ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಚಿಕಿತ್ಸೆಗಾಗಿ ಈಗಾಗಲೇ ಲಕ್ಷಾಂತರ ವ್ಯಹಿಸಲಾಗಿದ್ದು, ಇನ್ನಷ್ಟು ಚಿಕಿತ್ಸೆಗೆ ಖರ್ಚಾಗಲಿದೆ ಎಂಬುದಾಗಿ ವೈದ್ಯರ ಮಾತು. ಹೀಗಾಗಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದಂತ ಪತ್ರಕರ್ತನ ನೆರವಿಗಾಗಿ ಕುಟುಂಬಸ್ಥರು ಮನವಿ ಮಾಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಟೈಮ್ಸ್ ಆಫ್ ಕರ್ನಾಟಕ ಪತ್ರಿಕೆಯ ತಾಲ್ಲೂಕು ವರದಿಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಂತವರು ಉಮೇಶ್ ಮೊಗವೀರ. ಇದಷ್ಟೇ ಅಲ್ಲದೇ ಸುದ್ದಿ ಸಾಗರದ ಮೂಲಕವೂ ತಾಲ್ಲೂಕಿನ ಜನತೆಯಲ್ಲಿ ಉಮೇಶ್ ಮೊಗವೀರ ಪ್ರಸಿದ್ಧ ಪತ್ರಕರ್ತರು. ಯಾವುದೇ ಮುಲಾಜಿಗೆ ಒಳಗಾಗದೇ ತಮ್ಮ ಪತ್ರಿಕೋದ್ಯಮ ನಿರ್ವಹಿಸುತ್ತಿದ್ದಂತ ಅವರು, ನೇರ, ನಿಷ್ಠೂರ ಪತ್ರಕರ್ತರೆಂದೇ ಗುರುತಿಸಿಕೊಂಡವರು.
ಕಳೆದ ಜನವರಿ 23, 2025ರಂದು ದಿಢೀರ್ ರಕ್ತದೊತ್ತಡ ಹೆಚ್ಚಾಗಿ ಕುಸಿದು ಬಿದ್ದಂತ ಅವರಿಗೆ ಬ್ರೈನ್ ಹ್ಯಾಮರೇಜ್ ಆಗಿತ್ತು. ಕೋಮಾದಲ್ಲಿದ್ದಂತ ಉಮೇಶ್ ಮೊಗವೀರ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಅವರ ಮೆದುಳಿನಲ್ಲಿ ರಕ್ತಸ್ತ್ರಾವವಾಗಿದ್ದನ್ನು ಶಸ್ತ್ರ ಚಿಕಿತ್ಸೆ ಮೂಲಕ ಸರಿ ಪಡಿಸಿದ್ದಾರೆ. ಸದ್ಯ ಕೋಮಾದಲ್ಲೇ ಇರುವಂತ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದೆ.
ಆರ್ಥಿಕವಾಗಿ ಅಷ್ಟೇನೂ ಸಬಲರಲ್ಲದಂತ ಪತ್ರಕರ್ತ ಉಮೇಶ್ ಮೊಗವೀರ ಅವರ ಕುಟುಂಬ ಚಿಕಿತ್ಸೆಗಾಗಿ ದಾನಿಗಳ ನೆರವಿನಿಂದ ಆರ್ಥಿಕ ಸಹಾಯದ ನಿರೀಕ್ಷೆಯಲ್ಲಿದೆ. ಓದುಗರಾದಂತ ನೀವುಗಳು ನಿಮ್ಮ ಕೈಲಾದ ಸಹಾಯವನ್ನು ಪತ್ರಕರ್ತ ಉಮೇಶ್ ಮೊಗವೀರ ಅವರ ಚಿಕಿತ್ಸೆಗಾಗಿ ಮಾಡುವಂತೆ ಕೋರಿದೆ.
ನಿಮ್ಮ ನೆರವಿನ ಸಹಾಯವನ್ನು ಉಮೇಶ್ ಮೊಗವೀರ ಅವರ ಸಂಬಂಧಿಯಾದಂತ ನಿತಿನ್.ಟಿ ಅವರ ಪೋನ್ ಪೇ, ಜಿ ಪೇ ಸಂಖ್ಯೆ 7411797384ಗೆ ಮಾಡಬಹುದಾಗಿದೆ. ಇಲ್ಲವೇ ಮಮತಾ ( MAMATHA) ಅವರ ಬ್ಯಾಂಕ್ ಆಫ್ ಬರೋಡ A/C No: 81920100001455. Branch: Nada, IFSC Code: BARBOVJNADA, MICR Code: 576012208 ಗೆ ಸಂದಾಯ ಮಾಡಲು ವಿನಂತಿಸಲಾಗಿದೆ. ಈ ಕೆಳಗಿನ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿಯೂ ನಿಮ್ಮ ಕೈಲಾದ ಸಹಾಯ ಮಾಡಿ.
ಸುಡಾನ್ ನಲ್ಲಿ ಆಸ್ಪತ್ರೆ ಮೇಲೆ ದಾಳಿ: 70 ಮಂದಿ ಸಾವು | Attack on Hospital
BREAKING : ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆಯ ದಿನಾಂಕ ಬದಲಾವಣೆ : ಫೆ.15ರ ಬದಲು 17ಕ್ಕೆ ಫಿಕ್ಸ್