ಶಿವಮೊಗ್ಗ: ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವಂತ ಆತನ ಚಿಕಿತ್ಸೆಗಾಗಿ ಇಡೀ ಕುಟುಂಬವೇ ಹಣವನ್ನು ಹೊಂದಿಸೋದಕ್ಕೆ ಪರದಾಡುತ್ತಿದೆ. ಸಾರ್ವಜನಿಕರ ಸಹಾಯದ ಹಸ್ತ ಚಾಚುವಂತೆ ಕನ್ನಡ ನ್ಯೂಸ್ ನೌ ಮೂಲಕ ಕೋರಿದೆ.
ಕೂಲಿ ಕೆಲಸ ಮಾಡುತ್ತಿದ್ದಂತ ರಮೇಶ್ ಎಂಬುವರು, ಕೆಲಸ ಮುಗಿಸಿ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದಂತ ವೇಳೆಯಲ್ಲಿ ಹಿಂಬದಿಯಿಂದ ಬಂದಂತ ಬೈಕ್ ಒಂದು ಡಿಕ್ಕಿಯಾಗಿತ್ತು. ಈ ಅಪಘಾತದಲ್ಲಿ ಗಾಯಗೊಂಡಿದ್ದಂತ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮನೆಗೆ ದುಡಿಯುವ ವ್ಯಕ್ತಿಯಾಗಿದ್ದಂತ ರಮೇಶ್ ಈಗ ಸ್ಪೈನಲ್ ಕಾರ್ಡ್ ಸಮಸ್ಯೆಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಯಸ್ಸಾದ ತಾಯಿ, ಮತ್ತೊಬ್ಬ ತಂಗಿಯ ಜೀವನ ನಿರ್ವಹಣೆಯು ರಮೇಶ್ ದುಡಿಮೆಯ ಮೇಲೆಯೇ ನಿಂತಿದೆ. ಅಲ್ಲದೇ ತಂಗಿಯ ಇಬ್ಬರು ಮಕ್ಕಳ ಹೊಣೆಹೊತ್ತಿದ್ದರು.
ಸಾಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಂತ ರಮೇಶ್ ಗೆ ಆರ್ಥಿಕ ಸಹಾಯ ಬೇಕಿದೆ. ಚಿಕಿತ್ಸೆಗಾಗಿ ಹಣಕಾಸಿನ ನೆರವು ಬೇಕಿದೆ. ನೀವು ಸಹಾಯ ಮಾಡುವುದಾದರೇ ಫೋನ್ ನಂಬರ್ 7259609476 ನಂಬರ್ ಗೆ ಪೋನ್ ಪೇ, ಜಿ ಪೇ ಮಾಡಬಹುದಾಗಿದೆ. ಇದು ರಮೇಶ್ ಅವರ ಸಹೋದರಿ ಇಂದಿರಾ ಎಂಬುವರ ನಂಬರ್ ಆಗಿದೆ. ಹೆಚ್ಚಿನ ಮಾಹಿತಿಗೂ ಇದೇ ಸಂಖ್ಯೆಗೆ ಸಂಪರ್ಕಿಸಲು ಕುಟುಂಬಸ್ಥರು ಕೋರಿದ್ದಾರೆ.
ಶಿವಮೊಗ್ಗ: ಸಾಗರದ ‘ಉಳ್ಳೂರು ಅರಣ್ಯ ವ್ಯಾಪ್ತಿ’ಯಲ್ಲಿ ಸಾಗುವಾನಿ ಕಡಿತಲೆ ಮಾಡಿದ್ದ ನಾಟ ಸೀಜ್, ಆರೋಪಿ ಅರೆಸ್ಟ್
BIG NEWS : ಕಾಂಗ್ರೆಸ್ ಪಕ್ಷದಲ್ಲಿ ಯಾವ ಗೊಂದಲವೂ ಇಲ್ಲ : ಗೃಹ ಸಚಿವ ಡಾ. ಜಿ. ಪರಮೇಶ್ವರ ಸ್ಪಷ್ಟನೆ