ಕೋಲಂಬೋ: ಶ್ರೀಲಂಕಾದ ಅಧ್ಯಕ್ಷೀಯ ಚುನಾವಣೆಯಲ್ಲಿ ಎಡಪಂಥೀಯ ಒಲವು ಹೊಂದಿರುವ ಅನುರಾ ಕುಮಾರ ದಿಸ್ಸಾನಾಯಕೆ ಅವರು ಹಾಲಿ ಉದಾರವಾದಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಸೋಲಿಸಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಭಾನುವಾರ ವರದಿ ಮಾಡಿದೆ. ಈ ಮೂಲಕ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಅನುರಾ ಕುಮಾರ ದಿಸ್ಸಾನಾಯಕ ಆಯ್ಕೆಯಾಗಿದ್ದಾರೆ.
ಶನಿವಾರ ಮತದಾನ ನಡೆಯಿತು. ದೇಶವು ತನ್ನ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಮತ್ತು ಅದರ ಪರಿಣಾಮವಾಗಿ ರಾಜಕೀಯ ವಿಪ್ಲವದಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ಈ ಚುನಾವಣೆ ಶ್ರೀಲಂಕಾಕ್ಕೆ ನಿರ್ಣಾಯಕವಾಗಿದೆ.
Sri Lanka's Marxist leader Anura Kumara Dissanayake wins presidential election: local media
— Press Trust of India (@PTI_News) September 22, 2024
ಶ್ರೀಲಂಕಾದ ಮಾರ್ಕ್ಸ್ವಾದಿ ಒಲವುಳ್ಳ ನಾಯಕ ಅನುರಾ ಕುಮಾರ ದಿಸ್ಸಾನಾಯಕೆ ಅವರು ಸಾಲದ ಸುಳಿಯಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರದ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳನ್ನು ಉಲ್ಲೇಖಿಸಿ ಸ್ಥಳೀಯ ಟಿವಿ ಭಾನುವಾರ ತಿಳಿಸಿದೆ.
ನಿಮಗಿದು ಗೊತ್ತಾ? ಭಾರತದ ‘ನೋಟು’ಗಳಲ್ಲಿ ಈ ವಿಶೇಷಗಳಿವೆ | Indian Currency Note