ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ರೈತನ ಬಲಿಯಾಗಿದೆ. ಕಾಫಿ ತೋಟದ ಕೆಲಸ ಮುಗಿಸಿ ವಾಪಾಸ್ ಆಗುತ್ತಿದ್ದಂತ ರೈತ ಮೇಲೆ ಆನೆ ದಾಳಿ ನಡೆಸಿ ಬಲಿ ಪಡೆದಿದೆ.
ಚಿಕ್ಕಮಗಳೂರು ತಾಲ್ಲೂಕಿನ ಅಂಡವಾನೆ ಗ್ರಾಮದಲ್ಲಿ ಕಾಫಿ ತೋಟದಿಂದ ವಾಪಾಸ್ ಆಗುತ್ತಿದ್ದಾಗ ಕಾಡಾನೆಯೊಂದು ರೈತ ಸುಬ್ಬೇಗೌಡ(55) ಎಂಬಾತನ ಮೇಲೆ ದಾಳಿ ನಡೆಸಿದೆ. ಕಾಡಾನೆ ದಾಳಿಯಿಂದಾಗಿ ರೈತ ಸುಬ್ಬೇಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಚಿಕ್ಕಮಗಳೂರು ತಾಲ್ಲೂಕಿನ ಕೊಪ್ಪ ಅರಣ್ಯ ವಲಯ ವ್ಯಾಪ್ತಿಯ ಅಂಡವಾನೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾಡಾನೆ ಓಡಿಸುವಂತೆ ಅರಣ್ಯ ಇಲಾಖೆಯನ್ನು ಸ್ಥಳೀಯರು ಆಗ್ರಹಿಸಿದ್ದಾರೆ.
ಕ್ರಿಯಾಶೀಲ ಪತ್ರಕರ್ತರು ಸಮಾಜದ ಆಸ್ತಿ: ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು
ನನ್ನ, ಪ್ರಿಯಕರನ ಖಾಸಗಿ ವೀಡಿಯೋ ಪೋನಿನಲ್ಲಿವೆ ನೋಡಿ: ಆತ್ಮಹತ್ಯೆಗೆ ಶರಣಾದ ವಿವಾಹಿತೆ!