ಹಾಸನ: ಜಿಲ್ಲೆಯಲ್ಲಿ ಕಾಡಾನೆ ದಾಳಿಯಿಂದಾಗಿ ಮತ್ತೊಂದು ಬಲಿಯಾಗಿದೆ. ಕಾಡಾನೆಯೊಂದು ಸೊಂಡಿಲಿನಿಂದ ತಿವಿದು, ಎತ್ತಿ ಬಿಸಾಕಿ ತುಳಿದ ಪರಿಣಾಮ ಸ್ಥಳದಲ್ಲೇ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.
ಹಾಸನದ ಬೇಲೂರು ತಾಲ್ಲೂಕಿನ ಕೋಗೋಡು ಗ್ರಾಮದಲ್ಲಿ ಕಾಡಾನೆ ದಾಳಿಯಿಂದಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಕಾಫಿ ತೋಟದಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ದಿಢೀರ್ ಕಾಡಾನೆಯೊಂದು ದಾಳಿ ಮಾಡಿದೆ. ಈ ವೇಳೆಯಲ್ಲಿ ಸುಶೀಲಮ್ಮ ಕಾಡಾನೆ ದಾಳಿಗೆ ಸಿಕ್ಕಿದ್ದಾರೆ. ಕೋಪಗೊಂಡ ಕಾಡಾನೆ ಸೊಂಡಿನಿಂದ ಎತ್ತಿ ಬಿಸಾಡಿ, ತಲೆ ಭಾಗವನ್ನು ತುಳಿದು ಸಾಯಿಸಿದೆ.
ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಅರಣ್ಯ ಇಲಾಖೆ ಅಧಿಕಾರಿಗಳು, ಅರೇಹಳ್ಳಿ ಠಾಣೆಯ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಘಟನೆಯನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಇದು ಕಳೆದ 2 ತಿಂಗಳಿನಲ್ಲಿ ನಾಲ್ಕನೇ ಸಾವಾಗಿದ್ದು, ಕಾಡಾನೆ ಹಿಡಿದು, ಸುರಕ್ಷಿತ ಸ್ಥಳಕ್ಕೆ ಬಿಡುವಂತೆ ಆಗ್ರಹಿಸಿದರು.
BREAKING NEWS: ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನೆ ಪ್ರಮಾಣ ವಚನ ಸ್ವೀಕಾರ | Mark Carney Sworn
‘ಇ-ಖಾತಾ’ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ: ಶೀಘ್ರವೇ ‘ಅಕ್ರಮ ನಿವೇಶನ, ಮನೆ ಸಕ್ರಮ’