ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದ ಪ್ರಕರಣಗಳು ಮುಂದುವರೆದಿವೆ. ಜಿಲ್ಲೆಯಲ್ಲಿಂದು ಹೃದಯಾಘಾತದಿಂದ ಕುಳಿತಲ್ಲೇ 63 ವರ್ಷದ ವೃದ್ಧರೊಬ್ಬರು ಪ್ರಾಣಬಿಟ್ಟಿದ್ದಾರೆ.
ಹಾಸನದಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಮುಂದುವರೆದಿದೆ. ಹಾಸನದ ಹಗರೆ ಗ್ರಾಮದಲ್ಲಿ ಕುಳಿತಲ್ಲೇ ವೃದ್ಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಗರೆ ಗ್ರಾಮದ ನಿರ್ವಾಣಿಗೌಡ(63) ಎಂಬ ವೃದ್ಧರೊಬ್ಬರು ಕುಳಿತಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಅಡವಿಬಂಟೇನಹಳ್ಳಿಯ ನಿರ್ವಾಣಿಗೌಡ ಸಾವನ್ನಪ್ಪಿದ್ದಾರೆ.
ಅಂದಹಾಗೇ ದಿನಸಿ ತರೋದಕ್ಕೆ ಹಾಸನ ಜಿಲ್ಲೆಯ ಹಗರೆ ಗ್ರಾಮಕ್ಕೆ ವೃದ್ಧ ನಿರ್ವಾಹಣಿಗೌಡ ತೆರಳಿದ್ದರು. ಈ ವೇಳೆ ನ್ಯಾಯಬೆಲೆ ಅಂಗಡಿ ಬಳಿ ಕುಳಿತಿದ್ದಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ಕ್ರಮವಿಲ್ಲ ಏಕೆ?: ಪ್ರತಿಪಕ್ಷ ನಾಯಕ ಆರ್.ಅಶೋಕ್ ಪ್ರಶ್ನೆ
BREAKING: ಬೆಂಗಳೂರಲ್ಲಿ ಒಳಮೀಸಲಾತಿ ಸಮೀಕ್ಷೆ ವೇಳೆ ಕರ್ತವ್ಯಲೋಪ: ಇಂದು ಒಂದೇ ದಿನ ನಾಲ್ವರು ಅಧಿಕಾರಿಗಳು ಸಸ್ಪೆಂಡ್