ಬೆಂಗಳೂರು: ಸಿಲಿಕಾನ್ ಸಿಟಿ ಜನತೆಗೆ ಮತ್ತೊಂದು ತೆರಿಗೆ ಶಾಕ್ ನೀಡೋದಕ್ಕೆ ಬಿಬಿಎಂಪಿ ಮುಂದಾಗಿದೆ.ಅದೇ ಆಸ್ತಿ ತೆರಿಗೆ ಜೊತೆಗೆ ಘನತ್ಯಾಜ್ಯ ಸಂಗ್ರಹಣ ಶುಲ್ಕ ಸಂಗ್ರಹಕ್ಕೂ ಬಿಬಿಎಂಪಿ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ.
ಹೌದು ಬೆಂಗಳೂರಿನ ಜನತೆಗೆ ಶೀಘ್ರವೇ ಪ್ರತಿ ಮನೆಗೂ ಘನತ್ಯಾಜ್ಯ ಶುಲ್ಕ ಕಟ್ಟೋದು ಖಚಿತವಾಗಿದೆ. ರಾಜ್ಯ ಸರ್ಕಾರಕ್ಕೆ ಬಿಬಿಎಂಪಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ.
ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಸಲ್ಲಿಸಿದಂತ ಪ್ರಸ್ತಾವನೆಯಲ್ಲಿ ವಸತಿ ಕಟ್ಟಡಗಳಿಗೆ ಮಾಸಿಕ 100 ರೂ, ವಾಣಿಜ್ಯ ಕಟ್ಟಡಗಳಿಗೆ 200ರೂ ದರ ನಿಗದಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದು ಕಟ್ಟಡದಲ್ಲಿ 10 ಮನೆ ಇದ್ರೆ, ಪ್ರತಿ ಮನೆಗೂ ಆಸ್ತಿ ತೆರಿಗೆ ಮೂಲಕ ಮಾಸಿಕ 100 ರೂ. ಸಂಗ್ರಹ ಮಾಡಲು ಅನುಮತಿ ನೀಡುವಂತೆ ಕೋರಿದೆ.
ಇದಲ್ಲದೇ ಆಸ್ತಿ ತೆರಿಗೆ ಮೂಲಕ ಸಂಗ್ರಹವಾದ ಹಣವನ್ನ ಬಿಬಿಎಂಪಿ ಕಂಪನಿಗೆ ವರ್ಗಾವಣೆ ಮಾಡಲು ತಯಾರಿ ನಡೆಯುತ್ತಿದೆ. ದರ ನಿಗದಿಯಾದ್ರೆ ವಾರ್ಷಿಕ 800 ಕೋಟಿ ಘನತ್ಯಾಜ್ಯ ಕಂಪನಿಗೆ ಆದಾಯ ಬರಲಿದೆ. ಅಂದುಕೊಂಡಂತೆ ಆದ್ರೆ ಮುಂದಿನ ದಿನಗಳಲ್ಲಿ ಘನತ್ಯಾಜ್ಯ ಸೇವಾ ಶುಲ್ಕ ಗ್ಯಾರಂಟಿ ಎನ್ನಲಾಗುತ್ತಿದೆ. ಇನ್ನು ಕಸ ಸಂಗ್ರಹಕ್ಕೆ 100 ರೂಪಾಯಿ ನಿಗದಿ ವಿಚಾರ 2016ರ ರೂಲ್ ಪ್ರಕಾರ ನೋಟಿಫಿಕೇಷನ್ ಆಗಿದೆ.
‘ದೊಡ್ಮನೆ’ಯಲ್ಲಿ ಮೊದಲ ‘ಡಿವೋರ್ಸ್’: ನಟ ಯುವ ರಾಜ್ ಕುಮಾರ್-ಶ್ರೀದೇವಿ ‘ವಿಚ್ಛೇದನ’ಕ್ಕೆ ಕಾರಣವೇನು?
BREAKING : ನಟ ಯುವರಾಜ್ ಕುಮಾರ್ ದಾಂಪತ್ಯದಲ್ಲಿ ಬಿರುಕು : ವಿಚ್ಚೇದನ ಕೋರಿ ಕೋರ್ಟ್ ಗೆ ಅರ್ಜಿ