ಬೆಂಗಳೂರು: ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ನಿನ್ನೆಯಷ್ಟೇ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಾರಿಗೆ ಬಸ್ಸುಗಳ ಪ್ರಯಾಣ ದರ ಏರಿಕೆಗೂ ಅನುಮತಿ ನೀಡಲಾಗಿದೆ. ಈ ಬೆನ್ನಲ್ಲೇ ಬೆಂಗಳೂರಲ್ಲಿ ಕಾವೇರಿ ನೀರಿನ ದರ ಪರಿಷ್ಕರಣೆ ಮುಂದಾಗಿದೆ. ಈ ಮೂಲಕ ಶೀಘ್ರವೇ ನೀರಿನ ದರ ಹೆಚ್ಚಳದ ಶಾಕ್ ನೀಡಲು ಸರ್ಕಾರ ಮುಂದಾಗಿರುವ ಸುಳಿವನ್ನು ಜಲಮಂಡಳಿ ನೀಡಿದೆ.
ಬೆಂಗಳೂರಲ್ಲಿ ಕಾವೇರಿ ನೀರಿನ ದರ ಪರಿಷ್ಕರಣೆಗೆ ಸರ್ಕಾರ ಮುಂದಾಗಿ ಎನ್ನಲಾಗುತ್ತಿದೆ. ಈ ಸಂಬಂಧ ಬೆಂಗಳೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಬಿಡಬ್ಲ್ಯೂ ಎಸ್ ಎಸ್ ಬಿ ಸಭೆ ನಡೆಯೋ ಸಾಧ್ಯತೆ ಇದೆ.
ಡಿಸಿಎಂ ನೇತೃತ್ವದ ಜಲಮಂಡಳಿ ಸಭೆಯಲ್ಲಿ ಕಾವೇರಿ ನೀರಿನದ ದರ ಹೆಚ್ಚಳದ ಕುರಿತಂತೆ ಚರ್ಚಿಸಲಾಗುತ್ತಿದೆ. ಆ ಬಳಿಕ ಬೆಂಗಳೂರಲ್ಲಿ ನೀರಿನ ದರ ಪರಿಷ್ಕರಣೆ ಅಧಿಕೃತ ಆದೇಶ ಹೊರ ಬೀಳೋ ಸಾಧ್ಯತೆ ಇದೆ.
ಅಂದಹಾಗೆ ನೀರು ಸರಬರಾಜು ವೆಚ್ಚ, ವಿದ್ಯುತ್ ಬಳಕೆ ವೆಚ್ಚ ಸೇರಿದಂತೆ ಇತರೆ ವೆಚ್ಚಗಳನ್ನು ಸರಿ ದೂಗಿಸಲು ಬೆಂಗಳೂರಲ್ಲಿ ನೀರಿನ ದರ ಪರಿಷ್ಕರಣೆಗೆ ಮುಂದಾಗಿದೆ ಎನ್ನಲಾಗುತ್ತಿದೆ. ಆ ಬಗ್ಗೆ ಕಾದು ನೋಡಬೇಕಿದೆ.
ಸಿ.ಟಿ.ರವಿ ಅಶ್ಲೀಲ ಪದ ಬಳಕೆ ವಿಚಾರ: ತನಿಖಾ ತಂಡಕ್ಕೆ ಘಟನೆ ಮಾಹಿತಿ ನೀಡಿದ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್
Watch Video: ಕ್ಯಾಲಿಪೋರ್ನಿಯಾದಲ್ಲಿ ಲಘು ವಿಮಾನ ಪತನ: ಇಬ್ಬರು ಸಾವು, 19 ಮಂದಿಗೆ ಗಾಯ