ಬೆಂಗಳೂರು : ಬಿಸಿಲಿನ ಬೇಗೆಗೆ ತತ್ತರಿಸಿರುವ ಜನಸಾಮಾನ್ಯರಿಗೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಬೇಸಿಗೆ ಬಿಸಿಲು ಹೆಚ್ಚಾದಂತೆ ಹಣ್ಣು, ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ.
ತರಕಾರಿಗಳ ಬೆಲೆ ಹೆಚ್ಚಾಗುತ್ತಿದ್ದು, ಸೌತೆ ಕಾಯಿ, ನಿಂಬೆ ಹಣ್ಣು ಸೇರಿದಂತೆ ಅಗತ್ಯ ತರಕಾರಿಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ.ದಿನದಿಂದ ದಿನಕ್ಕೆ ಬಿಸಿಲಿನ ತಾಪವು ಹೆಚ್ಚಾಗುತ್ತಿದ್ದು, ಬಿಸಿಲಿನ ಪ್ರಮಾಣ ಇದೇ ರೀತಿ ಹೆಚ್ಚಾಗುತ್ತಿದ್ದರೆ ತರಕಾರಿಯ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ನಾಟಿ ಬೀನ್ಸ್ ಕೆಜಿಗೆ 180 ರೂ.ಗೆ ಏರಿಕೆಯಾದ್ರೆ, ರಿಂಗ್ ಬೀನ್ಸ್- 140 ರೂ,ನವಿಲುಕೋಸು – 80 ರೂ, ಹೀರೆಕಾಯಿ – 80 ರೂ, ಈರುಳ್ಳಿ – 40 ರೂ, ಬೀಟ್ರೂಟ್- 80 ರೂ, ಬೆಂಡೆಕಾಯಿ – 80 ರೂ, ಟೊಮೇಟೋ – 40 ರೂ, ಆಲೂಗೆಡ್ಡೆ- 50 ರೂ, ಣಸಿನಕಾಯಿ- 90 ರೂ, ಕ್ಯಾಪ್ಸಿಕಂ- 80 ರೂ ಗೆ ಏರಿಕೆಯಾಗಿದೆ.