ಬೆಂಗಳೂರು: ರಾಜ್ಯ ಸರ್ಕಾರದಿಂದ ದಂತಭಾಗ್ಯ ಯೋಜನೆಯಲ್ಲಿ ಸಂಪೂರ್ಣ ದಂತಪಕ್ತಿಗಳ ದರ ಹೆಚ್ಚಿಸಿ ಆದೇಶಿಸಿದೆ. ಈ ಮೂಲಕ ರಾಜ್ಯದ ಜನತೆಗೆ ಮತ್ತೊಂದು ಶಾಕ್ ನೀಡಲಾಗಿದೆ.
ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದ್ದು, ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರೀಕರಿಗೆ ಉಚಿತವಾಗಿ ದಂತ ಪಂಕ್ತಿ ನೀಡುವ ಉದ್ದೇಶದಿಂದ ದಂತ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲು ಅನುಷ್ಠಾನ ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ.
ದಂತ ಭಾಗ್ಯ ಯೋಜನೆ ಸೌಲಭ್ಯ ಪಡೆಯಲು ಹಿರಿಯ ನಾಗರಿಕರ ವಯೋಮಿತಿಯನ್ನು 60 ವರ್ಷದಿಂದ 45 ವರ್ಷಕ್ಕೆ ಇಳಿಸಲಾಗಿದೆ ಹಾಗೂ ಆಸ್ಪತ್ರೆ/ಕಾಲೇಜಿಗೆ ಗುಣಮಟ್ಟದ ದಂತ ಪಂಕ್ತಿಯನ್ನು ನೀಡಲು ಪ್ರತಿ ರೋಗಿಗೆ ರೂ.500.00 ರಿಂದ ರೂ.750.00 ಹೆಚ್ಚಿಸಲಾಗಿದೆ.
ಪ್ರತಿ ಸಂಪೂರ್ಣ ದಂತ ಪಂಕ್ತಿಗೆ ರೂ.750.00 ರಿಂದ ರೂ.2000.00 ಗಳಿಗೆ ಹಾಗೂ ಭಾಗಶಃ ದಂತ ಪಂಕ್ತಿಗೆ ರೂ.300.00 ರಿಂದ 1000,00 ಗಳಿಗೆ ಹೆಚ್ಚಿಸುವುದರೊಂದಿಗೆ ಇನ್ನಿತರ ಮಾರ್ವಡುಗಳೊಂದಿಗೆ ಆದೇಶ ಹೊರಡಿಸಲಾಗಿರುತ್ತದೆ.
ಎಂಡಿ ಎನ್‌ಹೆಚ್‌ಎಂ ಇವರ ಏಕಕಡತದಲ್ಲಿ ದಂತಭಾಗ್ಯ ಯೋಜನೆಯಲ್ಲಿ ದಂತ ಪಂಕ್ತಿಗಳನ್ನು ತಯಾರಿಸುವ ಸಾಮಾಗ್ರಿಗಳು, ಕನ್ಸೂಮಬಲ್ಸ್ ಮತ್ತು ಇತರ ತಯಾರಿಕ ವೆಚ್ಚಗಳು ಹೆಚ್ಚಾಗುತ್ತಿರುವುದರಿಂದ ಪ್ರಸ್ತುತ ದರಗಳನ್ನು ಪರಿಷ್ಕರಿಸಬೇಕಾಗುತ್ತದೆ. ಆದುದರಿಂದ ದಂತಭಾಗ್ಯ ಯೋಜನೆಯಡಿ ಸಂಪೂರ್ಣ ದಂತಪಂಕ್ತಿಗೆ ನೀಡಲಾಗುತ್ತಿರುವ ರೂ. 2000/- ಗಳನ್ನು ರೂ. 3000/- ಗಳಿಗೆ ಹೆಚ್ಚಿಸಲು ರೂ. 50.00 ಲಕ್ಷಗಳ ಹೆಚ್ಚುವರಿ ದಂತಭಾಗ್ಯದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕೋರಲಾಗಿದೆ.
ಆರ್ಥಿಕ ಇಲಾಖೆ ಹಿಂಬರಹದಲ್ಲಿ ದಂತ ಭಾಗ್ಯ ಯೋಜನೆಯ ದಂತಪಂಕ್ತಿಗಳ ಯೂನಿಟ್ ದರಗಳ ಹೆಚ್ಚಳದಿಂದ ಉಂಟಾಗುವ ಹೆಚ್ಚುವರಿ ಮೊತ್ತವನ್ನು ಪುಸಕ್ತ ಸಾಲಿನ ಆಯವ್ಯಯದಲ್ಲಿ ಇಲಾಖೆಗೆ ಒದಗಿಸಲಾದ ಅನುದಾನಕ್ಕೆ ಸೀಮಿತಗೊಳಿಸಿ ವೆಚ್ಚ ಭರಿಸುವ ಷರತ್ತಿಗೊಳಪಟ್ಟು ಸಹಮತಿ ನೀಡಲಾಗಿದೆ.
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಂತಭಾಗ್ಯ ಯೋಜನೆಯಲ್ಲಿ ಸಂಪೂರ್ಣ ದಂತಪಂಕ್ತಿಗದರವನ್ನು ರೂ. 2000/- ದಿಂದ ರೂ. 3000/- ಗಳಿಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳದಿಂದ ಉಂಟಾಗುವ ಹೆಚ್ಚುವರಿ ಮೊತ್ತವನ್ನು ಪುಸಕ್ತ ಸಾಲಿನಲ್ಲಿ ಇಲಾಖೆಗೆ ಒದಗಿಸಲಾದ ಆಯವ್ಯಯದಲ್ಲಿ ಭರಿಸತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ದಿನಾಂಕ:17.07.2025ರಲ್ಲಿ ನೀಡಿರುವ ಸಹಮತಿಯನ್ವಯ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಮದ್ದೂರು ಪಟ್ಟಣದಲ್ಲಿ 100 ಅಡಿ ರಸ್ತೆಗೆ ಸರ್ಕಾರ ಒಪ್ಪಿಗೆ: ಸಿಎಂ ಸಿದ್ಧರಾಮಯ್ಯ ಘೋಷಣೆ
ಯಾವುದೇ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ: ನಟಿ ರಮ್ಯಾ ಪರ ನಿಂತ ನಟ ವಿನಯ್ ರಾಜ್ ಕುಮಾರ್