Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ ಕರ್ನಾಟಕದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಂಪರ್ಕ ವಿವರಗಳ ಪಟ್ಟಿ.!

ರಾಜ್ಯದ ಜನತೆಗೆ ಮತ್ತೊಂದು ಶಾಕ್ : `ಭೂದಾಖಲೆಗಳ ನಕಲು ಶುಲ್ಕ’ಹೆಚ್ಚಳ ಮಾಡಿ ಸರ್ಕಾರ ಆದೇಶ | Land record fee Hike

ತೈಲ ಅಭಾವವಿಲ್ಲ, ಆದರೆ ದಿನಕ್ಕೆ ₹1,000 ಕೋಟಿ ನಷ್ಟ! ಪೆಟ್ರೋಲ್ ಬೆಲೆ ಸ್ಥಿರವಾಗಿರಲು ಇದೇ ಕಾರಣ: ಕೇಂದ್ರದ ಸ್ಪಷ್ಟನೆ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಜನತೆಗೆ ಮತ್ತೊಂದು ಶಾಕ್ : `ಭೂದಾಖಲೆಗಳ ನಕಲು ಶುಲ್ಕ’ಹೆಚ್ಚಳ ಮಾಡಿ ಸರ್ಕಾರ ಆದೇಶ | Land record fee Hike
KARNATAKA

ರಾಜ್ಯದ ಜನತೆಗೆ ಮತ್ತೊಂದು ಶಾಕ್ : `ಭೂದಾಖಲೆಗಳ ನಕಲು ಶುಲ್ಕ’ಹೆಚ್ಚಳ ಮಾಡಿ ಸರ್ಕಾರ ಆದೇಶ | Land record fee Hike

By kannadanewsnow57

ಬೆಂಗಳೂರು: ಕರ್ನಾಟಕ ಸರ್ಕಾರದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯು ವಿವಿಧ ಭೂದಾಖಲೆಗಳ ನಕಲು ಪ್ರತಿಗಳನ್ನು ಪಡೆಯಲು ನೀಡಬೇಕಾದ ಶುಲ್ಕವನ್ನು ಪರಿಷ್ಕರಿಸಿದೆ. ಇಲಾಖೆಯ ದಾಖಲೆಗಳ ವಿತರಣೆಯಲ್ಲಿ ಪಾರದರ್ಶಕತೆ ಮತ್ತು ಏಕರೂಪತೆಯನ್ನು ತರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಹೊಸ ದರಪಟ್ಟಿ ತಕ್ಷಣದಿಂದಲೇ ಜಾರಿಗೆ ಬರಲಿದೆ.

ಈ ಕುರಿತು ಆಯುಕ್ತರ ಕಚೇರಿಯಿಂದ ಹೊರಡಿಸಲಾದ ಸುತ್ತೋಲೆಯಲ್ಲಿ (ಸಂಖ್ಯೆ: ತಾಂ.ಆ.ಸುತ್ತೋಲೆ.8/2001-2022), ಇಲಾಖೆಯ ಅಧೀನ ಕಚೇರಿಗಳಲ್ಲಿ ಉಂಟಾಗುತ್ತಿದ್ದ ಗೊಂದಲಗಳನ್ನು ನಿವಾರಿಸಲು ಏಕರೂಪದ ಪರಿಷ್ಕೃತ ಶುಲ್ಕವನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ಪ್ರಮುಖ ದಾಖಲೆಗಳ ಪರಿಷ್ಕೃತ ದರ ಪಟ್ಟಿ ಹೀಗಿದೆ:

ಕ್ರಮ ಸಂಖ್ಯೆ ದಾಖಲೆಯ ವಿವರ ಪರಿಷ್ಕೃತ ಶುಲ್ಕ (ರೂ.ಗಳಲ್ಲಿ)
1. ಪ್ರತಿ ಸರ್ವೆ ನಂ/ಹಿಸ್ಸಾ ನಂಬರಿನ ಟಿಪ್ಪಣಿ ಅಥವಾ ಅಟ್ಲಾಸ್ ನಕಲು 35.00
2. ಕರಡು ಉತಾರ/ಖರಾಬು ಉತಾರ/ನೀರಿನ ಆಶ್ರಯದ ವಿವರದ ನಕಲು 35.00
3. ನಕಾಶೆಯಲ್ಲಿ ಹೊರಡಿಸಲಾದ ಪ್ರತಿ ಸರ್ವೆ ನಂಬರಿನ ನಕಲಿಗೆ 10.00
4. ಪ್ರತಿ ಹಿಸ್ಸಾ ನಂಬರಿನ ‘ಬಾಬು’ ತಯಾರಿಸಿದ ಆಕಾರಬಂದ್ ನಕಲು 35.00
5. ನೋಟಿಸ್ ಕಾಪಿ / ಅರ್ಜಿಯ ನಕಲು / ಮಹಜರು ಕಾಪಿ (ಪ್ರತಿ ಪುಟಕ್ಕೆ) 10.00
6. ಪ್ರತಿ ಸರ್ವೆ ನಂ/ಹಿಸ್ಸಾ ನಂಬರಿನ ಆಕಾರಬಂದು ನಕಲಿಗೆ 20.00
7. ಹದ್ದುಬಸ್ತು ಸ್ಕೆಚ್ ಅಥವಾ ಪಿ.ಟಿ. ಶೀಟ್ ನಕಲು 35.00
8. ಆದೇಶದ ನಕಲು (ಮೊದಲ 100 ಪದಗಳಿಗೆ) 10.00
9. ಪಿ.ಆರ್. ಕಾರ್ಡ್ ನಕಲು (ಪ್ರತಿ ಕಾರ್ಡ್‌ಗೆ) 30.00

ಆದೇಶದ ನಕಲು: ಮೊದಲ 100 ಪದಗಳ ನಂತರದ ಪ್ರತಿ 100 ಪದಗಳಿಗೆ ಹೆಚ್ಚುವರಿ ರೂ. 10.00 ಶುಲ್ಕ ವಿಧಿಸಲಾಗುತ್ತದೆ.

ನಕ್ಷೆಯ ವಿಸ್ತೀರ್ಣ: ಗ್ರಾಮ ನಕಾಶೆಯ ನಕಲಿನ ವಿಸ್ತೀರ್ಣವು 500 ಚದರ ಇಂಚು ಮೀರಿದಲ್ಲಿ, ಹಳೆಯ ನಿಯಮಗಳಂತೆ (ಸುತ್ತೋಲೆ ಸಂ: ಎಂಪಿಜಿ.58/91-92) ದ್ವಿಗುಣ ಶುಲ್ಕವನ್ನು ವಸೂಲಿ ಮಾಡಲಾಗುವುದು.

ವಿಚಾರಣಾ ರಿಜಿಸ್ಟರ್: ವಿಚಾರಣಾ ರಿಜಿಸ್ಟರ್‌ನ ಪ್ರತಿ ಎಂಟ್ರಿಗೆ ರೂ. 30.00 ಶುಲ್ಕ ನಿಗದಿಪಡಿಸಲಾಗಿದೆ.

ಸಾರ್ವಜನಿಕರು ಇನ್ನು ಮುಂದೆ ನಿಗದಿತ ಹೊಸ ದರಗಳನ್ನು ಪಾವತಿಸಿ ತಮ್ಮ ಭೂ ದಾಖಲೆಗಳ ಅಧಿಕೃತ ನಕಲು ಪ್ರತಿಗಳನ್ನು ಪಡೆಯಬಹುದಾಗಿದೆ. ಈ ಕ್ರಮದಿಂದಾಗಿ ಕಚೇರಿಗಳಲ್ಲಿ ಹೆಚ್ಚಿನ ಶುಲ್ಕ ವಸೂಲಿ ಮಾಡುವ ದೂರುಗಳಿಗೆ ಅಂತಿಮ ತೆರೆ ಬೀಳಲಿದೆ ಎಂದು ನಿರೀಕ್ಷಿಸಲಾಗಿದೆ.

Share. Facebook Twitter LinkedIn WhatsApp Email

Related Posts

ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ ಕರ್ನಾಟಕದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಂಪರ್ಕ ವಿವರಗಳ ಪಟ್ಟಿ.!

2 Mins Read

ರಾಜ್ಯದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ : ಶೇ. 10ರಿಂದ 12.5ರಷ್ಟು ವೇತನ ಹೆಚ್ಚಳಕ್ಕೆ ಅಸ್ತು? Salary Hike

1 Min Read

GOOD NEWS : ಯಜಮಾನಿಯರಿಗೆ ಗುಡ್ ನ್ಯೂಸ್ : ಖಾತೆಗೆ ಎರಡು ತಿಂಗಳ `ಗೃಹಲಕ್ಷ್ಮಿ’ ಹಣ ಜಮಾ | Grihalakshmi

1 Min Read
Recent News

ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ ಕರ್ನಾಟಕದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಂಪರ್ಕ ವಿವರಗಳ ಪಟ್ಟಿ.!

ರಾಜ್ಯದ ಜನತೆಗೆ ಮತ್ತೊಂದು ಶಾಕ್ : `ಭೂದಾಖಲೆಗಳ ನಕಲು ಶುಲ್ಕ’ಹೆಚ್ಚಳ ಮಾಡಿ ಸರ್ಕಾರ ಆದೇಶ | Land record fee Hike

ತೈಲ ಅಭಾವವಿಲ್ಲ, ಆದರೆ ದಿನಕ್ಕೆ ₹1,000 ಕೋಟಿ ನಷ್ಟ! ಪೆಟ್ರೋಲ್ ಬೆಲೆ ಸ್ಥಿರವಾಗಿರಲು ಇದೇ ಕಾರಣ: ಕೇಂದ್ರದ ಸ್ಪಷ್ಟನೆ

​’ಆಪರೇಷನ್ ಸಿಂದೂರ್’ ವಾರ್ಷಿಕೋತ್ಸವ: ಪಾಕಿಸ್ತಾನದ ಸುಳ್ಳುಗಳನ್ನು ಬಯಲು ಮಾಡಿದ ಅಮೆರಿಕದ ದಾಖಲೆಗಳು; ಅಸಿಮ್ ಮುನೀರ್‌ಗೆ ಮುಖಭಂಗ!

State News
KARNATAKA

ರಾಜ್ಯದ ಜನತೆಯ ಗಮನಕ್ಕೆ : ಇಲ್ಲಿದೆ ಕರ್ನಾಟಕದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಂಪರ್ಕ ವಿವರಗಳ ಪಟ್ಟಿ.!

By kannadanewsnow57 KARNATAKA 2 Mins Read

ಬೆಂಗಳೂರು: ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಜಿಲ್ಲಾ ಮಟ್ಟದ ಮಾಹಿತಿ ಮತ್ತು ದೂರುಗಳ ಸಲ್ಲಿಕೆಗೆ ಅನುಕೂಲವಾಗುವಂತೆ ಕರ್ನಾಟಕದ ಎಲ್ಲಾ 31…

ರಾಜ್ಯದ ಜನತೆಗೆ ಮತ್ತೊಂದು ಶಾಕ್ : `ಭೂದಾಖಲೆಗಳ ನಕಲು ಶುಲ್ಕ’ಹೆಚ್ಚಳ ಮಾಡಿ ಸರ್ಕಾರ ಆದೇಶ | Land record fee Hike

ರಾಜ್ಯದ ಸಾರಿಗೆ ನೌಕರರಿಗೆ ಗುಡ್ ನ್ಯೂಸ್ : ಶೇ. 10ರಿಂದ 12.5ರಷ್ಟು ವೇತನ ಹೆಚ್ಚಳಕ್ಕೆ ಅಸ್ತು? Salary Hike

GOOD NEWS : ಯಜಮಾನಿಯರಿಗೆ ಗುಡ್ ನ್ಯೂಸ್ : ಖಾತೆಗೆ ಎರಡು ತಿಂಗಳ `ಗೃಹಲಕ್ಷ್ಮಿ’ ಹಣ ಜಮಾ | Grihalakshmi

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.