ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಅರೆಸ್ಟ್ ಆಗಿರುವ ನಟ ದರ್ಶನ್ ವಿರುದ್ಧ ಪ್ರಶಾಂತ್ ಸಂಬರಗಿ ಮತ್ತೊಂದು ಗಂಭೀರ ಆರೋಪ ಮಾಡಿದ್ದು, ನಟ ದರ್ಶನ್ ಸ್ಟಾರ್ ಹಿರೋಬ್ಬರ ಹೆಂಡತಿಗೆ ಕರೆ ಮಾಡಿ ಆವಾಜ್ ಹಾಕಿದ್ದರು ಎಂದು ಹೇಳಿದ್ದಾರೆ.
ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಪ್ರಶಾಂತ್ ಸಂಬರಗಿ, ಮುಂದುವರಿದ ದಚ್ಚುವಿನ ಕರ್ಮ ಕಾಂಡ ಭಾಗ 3. ರೇಣುಕಾ ಸ್ವಾಮಿಗೆ ನ್ಯಾಯ ಸಿಗಲಿ. ಈ ಘಟನೆ ನಡೆದಿದ್ದು 2019 ರಲ್ಲಿ, ಈ 6 ಅಡಿ ದೈತ್ಯಾಕಾರದ ಮೃಗ ..ಸ್ನೇಹ ಮತ್ತು ಮಾನವೀಯತೆಯ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದನು. ಅವತ್ತು ಒಂದು ಕಾಲದ ಇವನ ಕುಚಿಕೋ ಸ್ಯಾಂಡಲ್ವುಡ್ star hero ಗೆಳೆಯನ ಹೆಂಡತಿಗೆ ರಾತ್ರಿಯಲ್ಲಿ ಬೆದರಿಕೆ ಮತ್ತು ಎಚ್ಚರಿಕೆ ಧ್ವನಿ( voice note) ಸಂದೇಶವನ್ನು ಕಳಿಸಿಬಿಟ್ಟು, ಅದರಲ್ಲಿ ಹೇಳ್ತಾನೆ ನಿಮ್ಮ ಸ್ಟಾರ್ ಪತಿ ಯಾವುದೇ ಕಾರಣಕ್ಕೂ ನನ್ನ ಅಭಿಮಾನಿ ಬಳಗವನ್ನು ಸಂಪರ್ಕಿಸದಂತೆ ನೋಡಿಕೋ ಇಲ್ಲ ಅಂದ್ರೆ ಪರಿಸ್ಥಿತಿ ನೆಟ್ಟಗಿರಲ್ಲ. ನಶೆನಲ್ಲಿ ಇವನ ದೊಡ್ಡ ಮೋರಿ ಬಾಯಿಗೆ ಹೆಣ್ಣು ಗಂಡು ಬೆದನೇ ಇರಲ್ಲ..ಏನ್ ಏನ್ ಕೆಟ್ಟ ಮಾತು ಹೇಳಿರ್ತಾನೋ. ತು ಇವನ ಜಾಯಮಾನನೇ ಇಷ್ಟು. ಕೀಳು ಮನಸ್ಥಿತಿಯ ಕ್ರಿಮಿ ಎಂದು ಬರೆದುಕೊಂಡಿದ್ದಾನೆ.