ಬೆಂಗಳೂರು: ಸಿಲಿಕಾನ್ ಸಿಟಿಯ ನಗರ ಕಬ್ಬನ್ ಪೇಟೆ ಮುಖ್ಯರಸ್ತೆಯಲ್ಲಿರುವಂತ ಹಜ್ರತ್ ಹಮೀದ್ ಷಾ ಮತ್ತು ಹಜ್ರತ್ ಮುಹಿಬ್ ಶಾ ಖಾದ್ರಿ ವಕ್ಸ್ ಇನ್ನೂಷನ್ ನಲ್ಲಿ ಭಾರೀ ಹಗರಣ ನಡೆದಿದೆ. ಈ ಸಂಬಂಧ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಆಲಮ್ ಪಾಷಾ ಎಂಬುವರು ದೂರು ನೀಡಿದ್ದಾರೆ. ಈ ದೂರು ಆಧರಿಸಿ ಜಿ.ಎ ಬಾವ ಸೇರಿದಂತೆ ಇತರರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.
ಈ ಕುರಿತಂತೆ ಆಲಮ್ ಪಾಷಾ ಎಂಬುವರು ಹಲಸೂರುಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅವರು ನೀಡಿರುವಂತ ದೂರಿನಲ್ಲಿ ಬೆಂಗಳೂರು ನಗರ ಕಬ್ಬನ್ ಪೇಟೆ ಮುಖ್ಯರಸ್ತೆ, ಹಜ್ರತ್ ಹಮೀದ್ ಷಾ ಮತ್ತು ಹಜ್ರತ್ ಮುಹಿಬ್ ಶಾ ಖಾದ್ರಿ ವಕ್ಸ್ ಇನ್ನೂಷನ್ ಸರ್ಕಾರದ ವಕ್ಸ್ ಬೋರ್ಡ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಇದರ ಅಧ್ಯಕ್ಷರು ಮತ್ತು ಅಡಳಿತಾಧಿಕಾರಿಯಾಗಿ ಜಿ.ಎ. ಬಾವಾ, ನಿವೃತ್ತ ಡಿ,ಸಿ,ಪಿ ಸುಮಾರು 8 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಜಂಟಿ ಕಾರ್ಯಧರ್ಶಿಯಾಗಿ ಸೈಯದ್ ರಶೀರ್ ಅಹಮ್ಮದ್ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಜಿಯಾವುಲ್ಲಾ, ಷರೀಫ್ ನಿವೃತ್ತ ಅಧ್ಯಕ್ಷರು, ಸಿ.ಎಂ.ಎ (ಸೆಂಟ್ರಲ್ ಮುಸ್ಲಿ ಅಸೋಯೇಷನಫ್ ಕರ್ನಾಟಕ)ರಲ್ಲಿ, ಕಾರ್ಯ ನಿರ್ವಹಿಸುತ್ತಿರುತ್ತಾರೆ. ಉಪಾಧ್ಯಕ್ಷರಾಗಿ ರಶೀದ್ ಅಹಮ್ಮದ್ ರವರು ಹಾಲಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ ಎಂದಿದ್ದಾರೆ.
ಹಜ್ರತ್ ಹಮೀದ್ ಷಾ, ಮತ್ತು ಹಜತ್ರ ಮುಹಿಬ್ ಶಾ ಶಾದ್ರಿ ವಕ್ಸ್, ಇನ್ ಸ್ಪೂಷನ್ ಅಧೀನದಲ್ಲಿ 128 ವಾಣಿಜ್ಯೋಧ್ಯಮ ಅಂಗಡಿಗಳು, ಸಹಕಾರಿ ಬ್ಯಾಂಕ್, ಕಾಲೇಜ್ ಕಟ್ಟಡ, ಪಾರ್ಕಿಗ್ ಸ್ಥಳ, ಮಸೀದಿ ದರ್ಗಾ ಮತ್ತು ಗುಂಬಾಸ್ ಇರುತ್ತವೆ. ವಕ್ಸ್, ಇನ್ನೂಎಷನ್ ನಿಂದ ಒಂದು ವರ್ಷಕ್ಕೆ ಒಂದು ಕೋಟಿ ರೂ ಅಧಿಕ ವರಮಾನ ಇರುತ್ತದೆ. ವರಮಾನದಲ್ಲಿ ಶೇಕಡಾ 7% ರಷ್ಟು ಆದಾಯವನ್ನು ಸರ್ಕಾರದ ವಕ್ಸ್ ಬೋರ್ಡಗೆ ಸಂದಾಯ ಮಾಡಬೇಕಾಗಿರುತ್ತದೆ ಎಂದು ತಿಳಿಸಿದ್ದಾರೆ.
2018-2019ನೇ ಸಾಲಿನಿಂದ ಇಲ್ಲಿಯವರೆಗೆ ಎಂ.ಪಿ.ಎಲ್.ಎ,ಡಿ ಪಂಡ್ ನಿಂದ 1,73,492/- ರೂ ಹಣ ಹಜ್ರತ್ ಹಮೀದ್ ಷಾ, ಮತ್ತು ಹಜತ್ರ ಮುಹಿಬ್ ಶಾ ಶಾದ್ರಿ ವಕ್ಸ್ ಇನ್ನೂಷನ್ ಗೆ ಬಿಡುಗಡೆಯಾಗಿದ್ದು, ಈ ಹಣವನ್ನು ಜಿ.ವಿ, ಬಾವಾ, ರಶೀದ್ ಅಹಮ್ಮದ್, ಮತ್ತು ಇತರೆ ಸದಸ್ಯರು ಸ್ವಂತಕ್ಕೆ ಬಳಸಿಕೊಂಡು ಮೋಸ ಮಾಡಿರುತ್ತಾರೆ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ.
2023 ನೇ ಸಾಲಿನಲ್ಲಿ ಸದರಿ ಇನ್ಸ್ ಸ್ಮಷನ್ ಅಧ್ಯಕ್ಷರು ಮತ್ತು ಸದಸ್ಯರು ಜಂಟಿ ಕಾರ್ಯದರ್ಶಿ ಸೈಯದ್ ರಶೀದ್ ಅಹಮ್ಮದ್ ರವರು ಹೆಸರಿಗೆ 38,28,438/-ರೂ ಮೌಲ್ಯದ ಚೆಕ್ ಅನ್ನು ನಗದು ಮಾಡಿಕೊಳ್ಳಲು ನೀಡಿದ್ದು, ಈ ಹಣವನ್ನು ಸಹ ಉಲ್ಲಂಘನೆ ಮಾಡಿ ಹಣವನ್ನು ದುರುಪಯೋಗವನ್ನು ಮಾಡಿಕೊಂಡಿರುತ್ತಾರೆ, ಇ.ಪಿ.ಎಫ್ ಆಗಿ 3,29,808/- ರೂ ಹಣ ಸಂದಾಯ ಮಾಡಬೇಕಾಗಿದ್ದು, ಈ ಹಣವನ್ನು ಜಿ.ಎ ಬಾವಾ ಮತ್ತು ಇತರರು ಸ್ವಂತಕ್ಕೆ ಬಳಸಿಕೊಂಡು ಮೋಸ ಮಾಡಿರುತ್ತಾರೆ ಎಂಬುದಾಗಿ ತಿಳಿಸಿದ್ದಾರೆ.
ಅಬ್ಬಾಸ್ ಖಾನ್ ಫಾರ್ ವುಮೆನ್ಸ್ ಕಾಲೇಜ್ ಅನ್ನು ನಡೆಸಲು ದಿನಾಂಕ:-30/10/2020 ರವರೆಗೆ ಪ್ರತಿ ವರ್ಷಕ್ಕೆ 60,000/-ರೂ ಹಣ ಕಟ್ಟಬೇಕಾಗಿರುತ್ತದೆ. ಅದರಂತೆ ಸೆಂಟ್ರಲ್ ಮುಸ್ಲಿಂ ಅಸೋಯೇಷನ್ ಸಂಸ್ಥೆ ನಡೆಸುತ್ತಿದ್ದರು. ಅಧ್ಯಕ್ಷರಾದ ಜಿಯಾವುಲ್ಲಾ, ಷರೀಫ್ ಮತ್ತು ಉಪಾಧ್ಯಕ್ಷರಾದ ಜಾವೀದ್ ಪಾಟೀಲ್ ರವರು ಸೇರಿಸಿಕೊಂಡು ಹಜ್ರತ್ ಹಮೀದ್ ಷಾ, ಮತ್ತು ಹಜತ್ರ ಮುಹಿಬ್ ಶಾ ಶಾದ್ರಿ ವಕ್ಸ್ ಇನ್ನೂಷನ್ ಗೆ ಸರ್ಕಾರ ನಿಗದಿಪಡಿಸಿರುವ 2,65,70,841/-ರೂ ಹಣವನ್ನು ಕಟ್ಟದೇ ಸ್ವಂತಕ್ಕೆ ದುರುಪಯೋಗ ಪಡಿಸಿಕೊಂಡಿರುತ್ತಾರೆ, ಸರ್ಕಾರಕ್ಕೆ ಶೇಕಡಾ 7% ರಂತೆ 18,59,959/- ರೂ ಹಣವನ್ನು ಕಟ್ಟದೇ ಮೋಸ ಮಾಡಿರುತ್ತಾರೆ ಎಂಬುದಾಗಿ ಗಂಭೀರ ಆರೋಪ ಮಾಡಿದ್ದಾರೆ.
2021ನೇ ಹಮೀದ್ ಷಾ ಕಾಂಪ್ಲೆಕ್ ನಲ್ಲಿ, ವಾಣಿಜ್ಯೋದ್ಯಮ ಅಂಗಡಿಗಳಿಂದ ಬಾಡಿಗೆಯಾಗಿ 40,50,761/-ರೂ ಹಣವನ್ನು ಬಾಡಿಗೆ ಮಾಲೀಕರಿಂದ ಕಟ್ಟಿಸದೇ ಮತ್ತು ಸೂಕ್ತ ಕ್ರಮವಹಿಸದೇ ಬಾಡಿಗೆ ರೂಪದಲ್ಲಿ ಹಣವನ್ನು ಪಡೆದುಕೊಂಡು ಸ್ವಂತಕ್ಕೆ ದುರುಪಯೋಗ ಪಡಿಸಿಕೊಂಡಿರುತ್ತಾರೆ, ಮತ್ತು ಸರ್ಕಾರಕ್ಕೆ ಶೇಕಡಾ 7% ರಂತೆ 2,83,553/- ರೂ ಹಣವನ್ನು ಕಟ್ಟದೇ ಮೋಸ ಮಾಡಿರುತ್ತಾರೆ ಎಂದಿದ್ದಾರೆ.
ಹಜ್ರತ್ ಹಮೀದ್ ಷಾ, ಮತ್ತು ಹಜತ್ರ ಮುಹಿಬ್ ಶಾ ಶಾದ್ರಿ ವಕ್ಸ್, ಇನ್ನೂಎಷನ್ 158 ಮಳಿಗೆಗಳಿಂದ ದಿನಾಂಕ:-30.04.2023 ರವರೆಗೆ ಬಾಡಿಗೆಯಾಗಿ ಒಟ್ಟು 1,70,11,959/-ರೂ ರೂ ವಸೂಲಿ ಮಾಡಿಸದೇ ವಕ್ಸ್ ಬೋರ್ಡ ಇನ್ನೂಷನ್ ಮತ್ತು ಸರ್ಕಾರಕ್ಕೆ ಮೋಸ ಮಾಡಿರುತ್ತಾರೆ ಎಂದು ಹೇಳಿದ್ದಾರೆ.
ಹಜ್ರತ್ ಹಮೀದ್ ಷಾ, ಮತ್ತು ಹಜತ್ರ ಮುಹಿಬ್ ಶಾ ಶಾದ್ರಿ ವಕ್ಸ್, ಇನ್ನೂಏಷನ್ ನ ಪಾರ್ಕಿಂಗ್ ಸ್ಥಳದ ಶುಲ್ಕವನ್ನು ಪಡೆಯಲು ಮೊಹಮ್ಮದ್ ಯುನಾಸ್ ರವರಿಗೆ ಟೆಂಡರ್ ಮಂಜೂರು ಆಗಿದ್ದು, 2. 62,500/- ರೂ ಹಣವನ್ನು 2020ನೇ ಮಾರ್ಚ ತಿಂಗಳವರೆಗೆ ಸಂಗ್ರಹಣೆ ಮಾಡಿದ್ದು, ಈ ಹಣದಲ್ಲಿ 21,98,500 ರೂ ಹಣವನ್ನು ಕಟ್ಟಿಸದೇ ಮತ್ತು ಸರ್ಕಾರಕ್ಕೆ 1,53,895/- ರೂ ಕಟ್ಟಿಸದೇ ಮತ್ತು ದಿನಾಂಕ:-23/11/2021ರಂದು ಉಮರ್ ಸಿದ್ದಿಕ್ ರವರಿಗೆ ತಿಂಗಳಿಗೆ 1,26,000/-ರೂ ನಂತೆ ಆದೇಶ ಮಾಡಿದ್ದು, ಈ ಹಣವನ್ನು ಸಹ ಶ್ರೀ ಜಿ.ವಿಬಾವ ಮತ್ತು ಜಂಟಿ ಕಾರ್ಯದರ್ಶಿ ರಶೀದ್ ಅಹಮ್ಮದ್ ಮತ್ತು ಕಮಿಟಿ ಸದಸ್ಯರುಗಳು ಸೇರಿಕೊಂಡು ಅಧಿಕಾರವನ್ನು ದುರುಪಯೋಗವನ್ನು ಮಾಡಿಕೊಂಡು ಒಳಸಂಚು ರೂಪಿಸಿ ವೈಯಕ್ತಿಕ ಲಾಭವುಂಟು ಮಾಡಿ ವಕ್ಸ್, ಇನ್ನೂಷನ್ ಮತ್ತು ಸರ್ಕಾರಕ್ಕೆ ಮೋಸ ಮಾಡಿರುತ್ತಾರೆ ಎಂದು ಆರೋಪಿಸಿದ್ದಾರೆ.
ಜಿ,ಏಬಾವ ಮತ್ತು ಜಂಟಿ ಕಾರ್ಯದರ್ಶಿ ರಶೀದ್ ಅಹಮ್ಮದ್ ಮತ್ತು ಕಮಿಟಿ ಸದಸ್ಯರುಗಳು ಸೇರಿಕೊಂಡು ರಾಜಕೀಯ ವ್ಯಕ್ತಿಗಳೊಂದಿಗೆ ಫೋಟೋಗಳನ್ನು ಮತ್ತು ವೈಯಕ್ತಿಕ ಜಾಹಿರಾತಿಗಾಗಿ ಹಜ್ರತ್ ಹಮೀದ್ ಷಾ, ಮತ್ತು ಹಜತ್ರ ಮುಹಿಬ್ ಶಾ ಶಾದ್ರಿ ವಕ್ಸ್ ಇನ್ನೂಪನಿಂದ ಬರುವ ಹಣದಲ್ಲಿ,, 5,80,170/-ರೂ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿರುತ್ತಾರೆ. ದರ್ಗಾದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಸಿವಿಲ್ ಟೆಂಡರ್ ಕರೆಯದೆ ಕೊಟೇಷನ್ ಮಾಡಿಸದೇ ಮತ್ತು ಕೆ.ಟಿ.ಪಿ.ಪಿ ಆಕ್ಟ್ ಉಲ್ಲಂಘನೆ ಮಾಡಿ 71,98,117/-ರೂ ಹಣವನ್ನು ಸಿವಿಲ್ ಕೆಲಸಕ್ಕಾಗಿ ಬಿಡುಗಡೆ ಮಾಡಿಕೊಂಡು ಮತ್ತು ಸಿವಿಲ್ ಕೆಲಸದ ಸಾಮಾನುಗಳನ್ನು ಖರೀದಿ ಮಾಡದೇ 44,81,398/- ರೂಗಳನ್ನು ಸ್ವಂತಕ್ಕೆ ಬಿಡುಗಡೆ ಮಾಡಿಕೊಂಡು ದುರುಪಯೋಗಪಡಿಸಿಕೊಂಡು ಮೋಸ ಮಾಡಿದ್ದಾರೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಆದೇಶದಂತೆ ಸಂಸ್ಥೆಗೆ ದಿನಾಂಕ:-07/06/1965ರಲ್ಲಿ ಯಲಹಂಕ ಮೇಡಿ ಆಗ್ರಹಾರ ಗ್ರಾಮ ಸರ್ವೇ ನಂ. 03, 11, 20, 22, 24, 25, 26, 27, 29, 3005 358 2 11 , ಬೇರೆಯವರಿಗೆ ಮಾಡಲು ವಕ್ಸ್ ಮಂಡಳಿಗೆ ಅಪಾಯವುಂಟು ಮಾಡಿರುತ್ತಾರೆ. ವಕ್ಸ್ ಇನ್ನೂಷನ್ ವಾಣಿಜ್ಯ ಕಟ್ಟಡವನ್ನು ಇಂಡಿಯಾನ್ ಬ್ಯಾಂಕ್ ಕಬ್ಬನ್ ಪೇಟೆ ಬ್ರಾಂಚ್ 10 ವರ್ಷಗಳ ಕಾಲ ಲೀಸ್ ಗೆ ನೀಡಿದ್ದು, 3 ವರ್ಷಗಳ ಕಾಲ ಮಾತ್ರ ಕಾಲಾವಕಾಶವಿದ್ದು, ಹೆಚ್ಚು ಅವಧಿಗೆ ಲೀಸ್ ನೀಡಿ ಅಧಿಕಾರ ದುರುಪಯೋಗ ಮಾಡಿಕೊಂಡಿರುತ್ತಾರೆ ಎಂದು ಆರೋಪಿಸಿದ್ದಾರೆ.
2021-2022ನೇ ಸಾಲಿನಲ್ಲಿ, ವಕ್ಸ್, ಇನ್ನೂಷನ್ ಕೊಹಿನೂರ್ ಗ್ರಾನೈಟ್ ಮತ್ತು ಮಾರ್ಬಲ್, ಮಸೀದಿಯಲ್ಲಿ ಮಾರ್ಬಲ್ ಹಾಕಿಸಲು ಒಟ್ಟು 8,82,669/-ರೂ ಟಿ.ಡಿ.ಎಸ್. ಅನ್ನು ಕಟ್ಟ ಮಾಡಿದ್ದು, ಇದರ ಪ್ರಕಾರ 80,00,000/- ರೂಗಳ ಮೌಲ್ಯದ ಮಾಲುಗಳನ್ನು ಖರೀದಿ ಮಾಡಬೇಕಾಗಿರುತ್ತದೆ. ಆದರೇ ಸದರಿಯವರು ಯಾವುದೇ ರೀತಿಯ ಗ್ರಾನೈಟ್ ಮತ್ತು ಮಾರ್ಬಲ್ ಗಳನ್ನು ಖರೀದಿ ಮಾಡದೇ ಮಾಡಿರುವುದಾಗಿ ತೋರಿಸಿ ಹಣವನ್ನು ದುರುಪಯೋಗ ಪಡಿಸಿಕೊಂಡಿರುತ್ತಾರೆ, 2018-2022ನೇ ಸಾಲಿನವರೆಗೆ ಸೀಲ್ ಸ್ಯಾರೀಸ್, ಬಿರಿಯಾನಿ, ಡ್ರೈ ಪೂಟ್ಸ್ ಗಳನ್ನು ಖರೀದಿ ಮಾಡಿರುವುದಾಗಿ ತಿಳಿಸಿ, 4,48,180/-ರೂಗಳನ್ನು ಖರ್ಚು ಮಾಡಿಕೊಂಡು ವಕ್ಸ್, ಇನ್ನೆಷನ್ಸ್ ಗೆ ಮೋಸ ಮಾಡಿರುತ್ತಾರೆ ಎಂದು ಹೇಳಿದ್ದಾರೆ.
ಆದ್ದರಿಂದ ಹಜ್ರತ್ ಹಮೀದ್ ಷಾ ಮತ್ತು ಹಜ್ರತ್ ಮುಹಿಬ್ ಶಾ ಖಾದ್ರಿ ವಕ್ಸ್ ಇನ್ನೂಷನ್ ಸರ್ಕಾರದ ವಕ್ಸ್ ಬೋರ್ಡ ಅಧೀನದಲ್ಲಿ, ಕಾರ್ಯ ನಿರ್ವಹಿಸುತ್ತಿರುವ ಅಧ್ಯಕ್ಷರು ಮತ್ತು ಅಡಳಿತಾಧಿಕಾರಿಯಾಗಿ ಜಿ.ಎ.ಬಾವಾ, ನಿವೃತ್ತ ಡಿ,ಸಿ,ಪಿ ಮತ್ತು ಜಂಟಿ ಕಾರ್ಯದರ್ಶಿ ಯಾಗಿರುವ ಸೈಯದ್ ರಶೀದ್ ಅಹಮ್ಮದ್, ಸೆಂಟ್ರಲ್ ಮುಸ್ಲಿಂ ಅಸೋಯೇಷನ್ ನ ಮಾಜಿ ಅಧ್ಯಕ್ಷರಾದ ಜಿಯಾವುಲಾ, ಷರೀಫ್ ಮತ್ತು ಹಾಲಿ ಉಪಾಧ್ಯಕ್ಷರಾದ ಜಾವೀದ್ ಪಾಟೀಲ್ ರವರು ಸೇರಿಸಿಕೊಂಡು ಒಳಸಂಚು ರೂಪಿಸಿ, ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಮೇಲ್ಕಂಡಂತೆ ತಿಳಿಸಿರುವ ಕೋಟ್ಯಾಂತರ ಹಣವನ್ನು ಸ್ವಂತಕ್ಕೆ ಬಳಸಿಕೊಂಡು ವಕ್ಸ್ ಅಸೋಯೇಷನ್ ಗೆ ಮತ್ತು ಸೆಂಟ್ರಲ್ ಮುಸ್ಲಿಂ ಅಸೋಸೀಯೇಷನ್ ಗೆ ಮೋಸ ಮಾಡಿರುವ ಅಸಾಮಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ದೂರಿನ ಆಧಾರದಲ್ಲಿ ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ 2023 (U/s-3(5), 316(2), 316(4), 318 (4) ಹಾಗೂ 61(2) ಕಲಂನಡಿ ಎಫ್ಐಆರ್ ದಾಖಲಿಸಲಾಗಿದೆ.
ಶಿವಮೊಗ್ಗ: ಜಿಲ್ಲೆಯಲ್ಲಿ 5ನೇ ದಿನಕ್ಕೆ ಕಾಲಿಟ್ಟ ಗ್ರಾಮ ಪಂಚಾಯ್ತಿ ನೌಕರರ ಅನಿರ್ಧಿಷ್ಟಾವಧಿ ಮುಷ್ಕರ
ಉಡುಪಿ:ಎಟಿಎಂ ಕಾರ್ಡ್ ಬದಲಾಯಿಸಿ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು
Good News: ದಸರಾ ಹಬ್ಬದ ಪ್ರಯುಕ್ತ ಅರಸೀಕೆರೆ-ಮೈಸೂರು ನಡುವೆ ಡೆಮು ವಿಶೇಷ ರೈಲು ಸಂಚಾರ