ಬೆಂಗಳೂರು: ನಗರದಲ್ಲಿ ರೋಡ್ ರೇಜ್ ಕೇಸ್ ತಡೆಗಟ್ಟುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ನಿನ್ನೆಯಷ್ಟೇ ಖಡಕ್ ಸೂಚನೆ ನೀಡಿದ್ದರು. ಆದರೇ ಅದಕ್ಕೂ ಕ್ಯಾರೆ ಎನ್ನದಂತೆ ಇಂದು ಬೈಕ್ ಸವಾರನೊಬ್ಬ ರಸ್ತೆ ಬಿಡು ಅಂತ ಹಾರನ್ ಮಾಡಿದ್ದಕ್ಕೆ ಕಾರು ಚಾಲಕನ ಮೇಲೆ ದಾದಾಗಿರಿ ನಡೆಸಿ, ಅವಾಜ್ ಹಾಕಿರುವಂತ ಘಟನೆ ಬಾಗಲಗುಂಟೆಯಲ್ಲಿ ನಡೆದಿದೆ.
ಬೆಂಗಳೂರಿನ ಟಿ.ದಾಸರಹಳ್ಳಿಯಲ್ಲಿ ರೋಡ್ ರೇಜ್ ಕೇಸ್ ನಡೆದಿದೆ. ಕಾರಿಗೆ ಸೈಡ್ ಬಿಡದೇ ರಸ್ತೆ ಮಧ್ಯದಲ್ಲಿ ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದಿದ್ದಕ್ಕೆ ಸೈಡ್ ಬಿಡುವಂತೆ ಕಾರು ಚಾಲಕ ಹಾರನ್ ಮಾಡಿದ್ದಾನೆ. ಇಷ್ಟಕ್ಕೇ ಕುಪಿತಗೊಂಡ ಬೈಕ್ ಸವಾರ, ರಸ್ತೆ ಮಧ್ಯದಲ್ಲೇ ಬೈಕ್ ನಿಲ್ಲಿಸಿ ಕಾರು ಚಾಲಕನ ಮೇಲೆ ದಾದಾಗಿರಿ ಪ್ರದರ್ಶನ ಮಾಡಿರುವುದಾಗಿ ತಿಳಿದು ಬಂದಿದೆ.
ನಾನು ಲೋಕಸ್ ನನಗೆ ಹಾರನ್ ಹೊಡಿತೀಯ ಅಂತ ಅವಾಜ್ ಹಾಕಿರುವಂತ ಪುಂಡ, ರಸ್ತೆಗೆ ಅಡ್ಡಲಾಗಿ ಬೈಕ್ ನಿಲ್ಲಿಸಿ, ಟ್ರಾಫಿಕ್ ಜಾಮ್ ಕೂಡ ಮಾಡಿ ದಾದಾಗಿರಿ ಮೆರೆದಿದ್ದಾನೆ. ಇದರಿಂದ ಬೇಸತ್ತಂತ ಜನರು ಬಾಗಲಗುಂಟೆ ಠಾಣೆಗೆ ಕೆರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಾಗಲಗುಂಟೆ ಠಾಣೆಯ ಪೊಲೀಸರು ಬರುತ್ತಿದ್ದಂತೆ, ಬೈಕ್ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.
ಬೈಕ್ ಚಾಲಕನ ರೋಡ್ ರೇಜ್ ಬಗ್ಗೆ ಬಾಗಲಗುಂಟೆ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ರೋಡ್ ರೇಜ್ ಮಾಡಿದಂತ ಯುವಕನ ಪತ್ತೆಗೆ ಬಾಗಲಗುಂಟೆ ಠಾಣೆಯ ಪೊಲೀಸರು ಬಲೆ ಬೀಸಿದ್ದಾರೆ.
ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೆ ನಾವು ವಿರಮಿಸುವುದಿಲ್ಲ: BJP MLC ಛಲವಾದಿ ನಾರಾಯಣಸ್ವಾಮಿ
ಲೋಕಾಯುಕ್ತಕ್ಕಿಂತ ‘CBI’ ಅಧಿಕಾರಿಗಳೇ ಎಷ್ಟೋ ವಾಸಿ :ವಿಚಾರಣೆ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ