Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಫ್ಲೈಯಿಂಗ್ ಕಿಸ್, ಕಣ್ಣು ಹೊಡೆವುದು ಕೂಡಾ ಲೈಂಗಿಕ ಕಿರುಕುಳ : ಕೋರ್ಟ್ ಮಹತ್ವದ ತೀರ್ಪು

05/02/2026 5:50 AM

ರಾತ್ರೋ ರಾತ್ರಿ ಕೋಟ್ಯಧಿಪತಿ : ಮಿತ್ರನ ಜತೆ ಸೇರಿ ಬರೋಬ್ಬರಿ 49 ಕೋಟಿ ಲಾಟರಿ ಗೆದ್ದ ಉಡುಪಿ ಯುವಕ!

05/02/2026 5:46 AM

BREAKING : ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜುಗಳಲ್ಲಿ 2000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಅಸ್ತು

05/02/2026 5:39 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಮತ್ತೊಂದು ಮೈಲುಗಲ್ಲು: ನಾಳೆಯಿಂದ ‘ಗರುಡಾಕ್ಷಿ ಆನ್ ಲೈನ್ FIR ವ್ಯವಸ್ಥೆ’ ಜಾರಿ
KARNATAKA

BIG NEWS: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಮತ್ತೊಂದು ಮೈಲುಗಲ್ಲು: ನಾಳೆಯಿಂದ ‘ಗರುಡಾಕ್ಷಿ ಆನ್ ಲೈನ್ FIR ವ್ಯವಸ್ಥೆ’ ಜಾರಿ

By kannadanewsnow0906/01/2025 2:53 PM

ಬೆಂಗಳೂರು: ರಾಜ್ಯದಲ್ಲಿ ಈವರೆಗೆ ಪೊಲೀಸ್ ಇಲಾಖೆಯಂತೆ ಅರಣ್ಯ ಇಲಾಖೆಯಿಂದ ಅರಣ್ಯ ಅಪರಾಧಗಳ ಸಂಬಂಧ ಆನ್ ಲೈನ್ ಎಫ್ಐಆರ್ ವ್ಯವಸ್ಥೆ ಇರಲಿಲ್ಲ. ಕೇವಲ ಮ್ಯಾನುಯೆಲ್ ಆಗಿ ಹಾಕಲಾಗುತ್ತಿತ್ತು. ಈಗ ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಮತ್ತೊಂದು ಮೈಲುಗಲ್ಲು ಎನ್ನುವಂತೆ ಅರಣ್ಯ ಅಪರಾಧಗಳ ಆನ್ ಲೈನ್ ಎಫ್ಐಆರ್ ಗಾಗಿ ಗರುಡಾಕ್ಷಿ ಎನ್ನುವಂತ ವ್ಯವಸ್ಥೆ ನಾಳೆ ಲೋಕಾರ್ಪಣೆಗೊಳಲ್ಲಿದೆ. ಆ ಮೂಲಕ ಕರ್ನಾಟಕದಲ್ಲಿ ನಾಳೆಯಿಂದ ಗರುಡಾಕ್ಷಿ ಆನ್ ಲೈನ್ ಎಫ್ಐಆರ್ ವ್ಯವಸ್ಥೆ ಜಾರಿಗೊಳ್ಳಲಿದೆ.

ಅರಣ್ಯ ಮತ್ತು ವನ್ಯಜೀವಿ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ಕಾನೂನು ಚೌಕಟ್ಟನ್ನು ಬಲಪಡಿಸಲು “ಗರುಡಾಕ್ಷಿ” ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆ ಅಭಿವೃದ್ಧಿಪಡಿಸಿದ್ದು, ಜ.7ರಂದು ವಿಧಾನಸೌಧದಲ್ಲಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಉದ್ಘಾಟಿಲಿದ್ದಾರೆ.

ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾನೂನುಗಳ ಅಡಿಯಲ್ಲಿ ಅರಣ್ಯ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು ಮತ್ತು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಈ ತಂತ್ರಾಂಶವು ಸಹಕಾರಿಯಾಗಲಿದೆ.

ಈಗಾಗಲೇ ರಾಜ್ಯ ಪೊಲೀಸ್‌ ಇಲಾಖೆಯಲ್ಲಿರುವಂತೆ ಅರಣ್ಯ ಇಲಾಖೆಯಲ್ಲಿ ಸಹ ಪ್ರಥಮ ವರ್ತಮಾನ ವರದಿಯನ್ನು (FIR) ಗಳನ್ನು ಆನ್‌ಲೈನ್‌ ನಲ್ಲಿ/ ಡಿಜಿಟಲ್ ಸ್ವರೂಪಕ್ಕೆ ಪರಿವರ್ತಿಸುವಂತೆ ಈಶ್ವರ ಖಂಡ್ರೆ ಅವರು ಸೂಚಿಸಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ Wild Life Trust of India (WTI) ಸಹಯೋಗದೊಂದಿಗೆ ಗರುಡಾಕ್ಷಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ.

ಪ್ರಾಯೋಗಿಕವಾಗಿ 5 ವಿಭಾಗದಲ್ಲಿ ಜಾರಿ:

ಗರುಡಾಕ್ಷಿ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಬೆಂಗಳೂರು ನಗರ ವಿಭಾಗ, ಬೆಂಗಳೂರು ಅರಣ್ಯ ಸಂಚಾರಿ ದಳ ವಿಭಾಗ, ಭದ್ರಾವತಿ ವಿಭಾಗ, ಶಿರಸಿ ವಿಭಾಗ ಮತ್ತು ಮಲೈ ಮಹದೇಶ್ವರ ವನ್ಯ ಜೀವಿ ವಿಭಾಗಗಳಲ್ಲಿ ಪ್ರಾಯೋಗಿಕವಾಗಿ (Pilot) ಜಾರಿಗೊಳಿಸಲಾಗತ್ತದೆ. ನಂತರ ಇದನ್ನು ಹಂತ ಹಂತವಾಗಿ ಎಲ್ಲ ವಿಭಾಗಕ್ಕೂ ವಿಸ್ತರಿಸಲಾಗುವುದು.

ಗರುಡಾಕ್ಷಿ ಆನ್ ಲೈನ್ ಎಫ್..ಆರ್. ವ್ಯವಸ್ಥೆ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳ ನಿರ್ವಹಣೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದ್ದು, ಪಾರದರ್ಶಕ, ಸುವ್ಯವಸ್ಥಿತ, ಪರಿಹಾರವಾಗಿ ಅರಣ್ಯ ಅಪರಾಧ ತಡೆಯಲು ಇಲಾಖೆಗೆ ಬಲ ತುಂಬಲಿದೆ.

ಏನಿದು ಗರುಡಾಕ್ಷಿ

ಅರಣ್ಯ ಇಲಾಖೆಯ ಅರಣ್ಯ ಅಪರಾಧಗಳ ನಿಗ್ರಹಕ್ಕಾಗಿ ಆನ್ ಲೈನ್ ಎಫ್ಐಆರ್ ವ್ಯವಸ್ಥೆಯೇ ಗರುಡಾಕ್ಷಿ ಎಂಬುದಾಗಿದೆ. ಈವರೆಗೆ ಪೆನ್ನು, ಪೇಪರ್ ಮೂಲಕ ಸಲ್ಲಿಕೆಯಾಗುತ್ತಿದ್ದಂತ ಎಫ್ಐಆರ್, ಆನ್ ಲೈನ್ ಮೂಲಕ ಹಾಕುವಂತ ವ್ಯವಸ್ಥೆ ಜಾರಿಯಾಗಲಿದೆ.

ಜನವರಿ.7ರಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಗರುಡಾಕ್ಷಿ ಆನ್ ಲೈನ್ ಎಫ್ಐಆರ್ ವ್ಯವಸ್ಥೆಗೆ ಚಾಲನೆ ನೀಡಿದ ಬಳಿಕ, ಅರಣ್ಯ ಅಪರಾಧಗಳ ನಿಗ್ರಹಕ್ಕಾಗಿ ಎಲ್ಲಾ ಎಫ್ಐಆರ್ ಗಳನ್ನು ಆನ್ ಲೈನ್ ಮೂಲಕವೇ ದಾಖಲಿಸುವ ವ್ಯವಸ್ಥೆ ಆರಂಭಗೊಳ್ಳಲಿದೆ.

ರಾಜ್ಯದಲ್ಲಿ ಅರಣ್ಯ ಅಪರಾಧಗಳಿಗೆ ಸಂಬಂಧಿಸಿದಂತೆ ಎಲ್ಲಾ ದೂರಿನ ನಂತ್ರ ಎಫ್ಐಆರ್ ಗಳು ಗರುಡಾಕ್ಷಿ ಎನ್ನುವಂತ ಆನ್ ಲೈನ್ ಮೂಲಕ ದಾಖಲಿಸುವುದು ಕಡ್ಡಾಯವಾಗುತ್ತದೆ. ಸೀಜ್ ರಿಪೋರ್ಟ್, ಮಹಜರ್, ತನಿಖೆ, ಕೇಸ್ ಸ್ಥಿತಿಗತಿ ಏನು? ಒಂದು ಪ್ರಕರಣವನ್ನು ಮುಕ್ತಾಯ ಗೊಳಿಸಲು ಕಾಲಮಿತಿ ಕೂಡ ನಿಗದಿಯಾಗಲಿದೆ. ಈ ಕಾಲಮಿತಿಯಲ್ಲಿ ಕ್ಲೋಸ್ ಮಾಡದೇ ಇದ್ದರೇ ಅಂತಹ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳುವ ವ್ಯವಸ್ಥೆ ಜಾರಿಗೊಳ್ಳಲಿದೆ. ಆ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳ ಕಳ್ಳಾಟಕ್ಕೂ ಬ್ರೇಕ್ ಬೀಳಲಿದೆ.

ವರದಿ: ವಸಂತ ಬಿ ಈಶ್ವರಗೆರೆ

BREAKING: ರಾಜ್ಯದಲ್ಲಿ ‘HMPV ವೈರಸ್’ನ 2 ಕೇಸ್ ಪತ್ತೆ: ಸೋಂಕು ಹರಡದಂತೆ ಸರ್ಕಾರ ಮುಂಜಾಗ್ರತಾ ಕ್ರಮ: ಸಿಎಂ ಸಿದ್ಧರಾಮಯ್ಯ

BIG UPDATE : ಕರ್ನಾಟಕದಲ್ಲಿ 2 ‘HMPV’ ಸೋಂಕು ಧೃಡ : ‘ICMR’ ಸ್ಪಷ್ಟನೆ | HMPV VIRUS

Share. Facebook Twitter LinkedIn WhatsApp Email

Related Posts

ರಾತ್ರೋ ರಾತ್ರಿ ಕೋಟ್ಯಧಿಪತಿ : ಮಿತ್ರನ ಜತೆ ಸೇರಿ ಬರೋಬ್ಬರಿ 49 ಕೋಟಿ ಲಾಟರಿ ಗೆದ್ದ ಉಡುಪಿ ಯುವಕ!

05/02/2026 5:46 AM1 Min Read

BREAKING : ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜುಗಳಲ್ಲಿ 2000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಅಸ್ತು

05/02/2026 5:39 AM1 Min Read

BREAKING : ನಮ್ಮ ಮೆಟ್ರೋ ಪ್ರಯಾಣದ ದರ ಹೆಚ್ಚಳ : ಫೆ.9ರಿಂದ ಶೇ. 5ರಷ್ಟು ದರ ಏರಿಕೆ ಅನ್ವಯ, ಇಲ್ಲಿದೆ ಹೊಸ ದರಪಟ್ಟಿ!

05/02/2026 5:26 AM1 Min Read
Recent News

BIG NEWS : ಫ್ಲೈಯಿಂಗ್ ಕಿಸ್, ಕಣ್ಣು ಹೊಡೆವುದು ಕೂಡಾ ಲೈಂಗಿಕ ಕಿರುಕುಳ : ಕೋರ್ಟ್ ಮಹತ್ವದ ತೀರ್ಪು

05/02/2026 5:50 AM

ರಾತ್ರೋ ರಾತ್ರಿ ಕೋಟ್ಯಧಿಪತಿ : ಮಿತ್ರನ ಜತೆ ಸೇರಿ ಬರೋಬ್ಬರಿ 49 ಕೋಟಿ ಲಾಟರಿ ಗೆದ್ದ ಉಡುಪಿ ಯುವಕ!

05/02/2026 5:46 AM

BREAKING : ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜುಗಳಲ್ಲಿ 2000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಅಸ್ತು

05/02/2026 5:39 AM

BREAKING : ನಮ್ಮ ಮೆಟ್ರೋ ಪ್ರಯಾಣದ ದರ ಹೆಚ್ಚಳ : ಫೆ.9ರಿಂದ ಶೇ. 5ರಷ್ಟು ದರ ಏರಿಕೆ ಅನ್ವಯ, ಇಲ್ಲಿದೆ ಹೊಸ ದರಪಟ್ಟಿ!

05/02/2026 5:26 AM
State News
KARNATAKA

ರಾತ್ರೋ ರಾತ್ರಿ ಕೋಟ್ಯಧಿಪತಿ : ಮಿತ್ರನ ಜತೆ ಸೇರಿ ಬರೋಬ್ಬರಿ 49 ಕೋಟಿ ಲಾಟರಿ ಗೆದ್ದ ಉಡುಪಿ ಯುವಕ!

By kannadanewsnow0505/02/2026 5:46 AM KARNATAKA 1 Min Read

ಉಡುಪಿ : ಯಾರಿಗೆ ಯಾವಾಗ ಅದೃಷ್ಟ ಖುಲಾಯಿಸುತ್ತೆ ಅಂತ ಹೇಳೋಕಾಗಲ್ಲ. ಇದೀಗ ದುಬೈನ ಮಸ್ಕತ್‌ನಲ್ಲಿ ಉದ್ಯೋಗದಲ್ಲಿರುವ ಕರ್ನಾಟಕದ ಉಡುಪಿ ಜಿಲ್ಲೆಯ…

BREAKING : ರಾಜ್ಯದ ಸರ್ಕಾರಿ ಪಾಲಿಟೆಕ್ನಿಕ್, ಎಂಜಿನಿಯರಿಂಗ್ ಕಾಲೇಜುಗಳಲ್ಲಿ 2000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಅಸ್ತು

05/02/2026 5:39 AM

BREAKING : ನಮ್ಮ ಮೆಟ್ರೋ ಪ್ರಯಾಣದ ದರ ಹೆಚ್ಚಳ : ಫೆ.9ರಿಂದ ಶೇ. 5ರಷ್ಟು ದರ ಏರಿಕೆ ಅನ್ವಯ, ಇಲ್ಲಿದೆ ಹೊಸ ದರಪಟ್ಟಿ!

05/02/2026 5:26 AM

BREAKING : ವಿಧಾನಸಭೆಯಲ್ಲಿ ವಿಪಕ್ಷಗಳ ಸಭಾತ್ಯಾಗದ ನಡುವೆ ‘ವಿಬಿ-ಜಿ ರಾಮ್ ಜಿ’ ಕಾಯ್ದೆಯ ವಿರುದ್ಧದ ನಿರ್ಣಯ ಅಂಗೀಕಾರ

05/02/2026 5:21 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.