ಹಾಸನ : ರಾಜ್ಯದಲ್ಲಿ ಮತ್ತೊಂದು ಭೀಕರ ಮರ್ಡರ್ ನಡೆದಿದ್ದು, ಮಗಳನ್ನು ತವರು ಮನೆಗೆ ಕರೆದೊಯ್ದಿದ್ದಕ್ಕೆ ಅತ್ತೆಯನ್ನೇ ಅಳಿಯ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ನಡೆದಿದೆ.
ರಾಮನಾಥಪುರದಲ್ಲಿ ರಸೂಲ್ ಎಂಬಾತ ಚಾಕುವಿನಿಂದ ಇರಿದು ಫೈರೋಜಾ ಬಾನು (55) ಕೊಲೆಗೈದಿದ್ದಾನೆ.9 ವರ್ಷದ ಹಿಂದೆ ರಸೂಲ್ ಸಮೀರಾ ಬಾನು ಜೊತೆಗೆ ಮದುವೆಯಾಗಿದ್ದ. ಪದೇಪದೆ ಪತ್ನಿ ಸಮೀರಾ ಬಾನುಗೆ ರಸೂಲ್ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ನಿನ್ನೆ ಮಗಳನ್ನು ತವರು ಮನೆಗೆ ಫೈರೋಜಾ ಬಾನು ಕರೆತಂದಿದ್ದರು.
ಇದರಿಂದ ಕೋಪಗೊಂಡ ರಸೂಲ್ ಅತ್ತೆಯನ್ನೇ ಕೊಲೆ ಮಾಡಿದ್ದಾನೆ. ಗಾಯಗೊಂಡ ಪತ್ನಿ ಸಮೀರಾಗೆ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಣನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.