Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರಾಜ್ಯದಲ್ಲಿ ಭಾರೀ ಮಳೆಗೆ ಘೋರ ದುರಂತ : ಗಾಳಿಗೆ ಮನೆ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು.!

ಪ್ರಧಾನಿ ಮೋದಿ ಇಂದಿನಿಂದ 5 ರಾಷ್ಟ್ರಗಳ ಪ್ರವಾಸ: ಮೊದಲು ಯುಎಇಗೆ ಭೇಟಿ; ತೈಲ ಮತ್ತು ಇಂಧನ ಭದ್ರತೆ ಕುರಿತು ಮಹತ್ವದ ಚರ್ಚೆ!

ಈ ಗಿಡ ಕಂಡರೆ ಚಿನ್ನ ಸಿಕ್ಕಂತೆಯೇ! ಈ ಸೊಪ್ಪಿನಲ್ಲಿ ಅಡಗಿದೆ ನೂರಾರು ಕಾಯಿಲೆಗಳಿಗೆ ಮದ್ದು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ವಿಶೇಷಚೇತನರಿಂದ ಅರ್ಜಿ ಆಹ್ವಾನ
KARNATAKA

ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ವಿಶೇಷಚೇತನರಿಂದ ಅರ್ಜಿ ಆಹ್ವಾನ

By ಅವಿನಾಶ್‌ ಆರ್‌ ಭೀಮಸಂದ್ರ
vidhana soudha
vidhana soudha

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ 2023-24ನೇ ಸಾಲಿನ ಐದು ಫಲಾನುಭವಿ ಆಧಾರಿತ ಯೋಜನೆಗಳಡಿ ವಿವಿಧ ಸೌಲಭ್ಯ ಪಡೆಯಲು ಜಿಲ್ಲೆಯ ವಿಕಲಚೇತನರಿಂದ ಆನ್‍ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ ಅವರು ತಿಳಿಸಿದ್ದಾರೆ.
ಅರ್ಜಿಗಳನ್ನು ಸೇವಾಸಿಂಧು ಡಿ.ಬಿ.ಟಿ (ನೇರ ನಗದು ವರ್ಗಾವಣೆ) ಆನ್‍ಲೈನ್ ವೇದಿಕೆ ತಂತ್ರಾಂಶದಡಿ ಅಳವಡಿಸಲಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜ.30 ಕೊನೆಯ ದಿನವಾಗಿದೆ.
*ಯೋಜನೆಗಳು ಮತ್ತು ಬೇಕಾದ ದಾಖಲೆಗಳು:*
ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್ ಯೋಜನೆ: ಯುಡಿಐಡಿ ಕಾರ್ಡ್, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಶಾಲಾ/ಕಾಲೇಜು ದೃಢೀಕರಣ ಪತ್ರ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ವಾಸಸ್ಥಳ ಪ್ರಮಾಣ ಪತ್ರ, ಪಡಿತರ ಚೀಟಿ, ಭಾವಚಿತ್ರ, ರೂ.20 ಬಾಂಡ್‍ನಲ್ಲಿ ನೀರಪೇಕ್ಷಣಾ ಪ್ರಮಾಣ ಪತ್ರ.
ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ಯೋಜನೆ: ಯುಡಿಐಡಿ ಕಾರ್ಡ್, ಚಾಲ್ತಿಯಲ್ಲಿರುವ ಎಲ್.ಎಲ್.ಆರ್./ಡಿ.ಎಲ್ ಪ್ರಮಾಣ ಪತ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ವಾಸಸ್ಥಳ ಪ್ರಮಾಣ ಪತ್ರ, ಪಡಿತರ ಚೀಟಿ, ಭಾವಚಿತ್ರ, ರೂ.20 ಬಾಂಡ್‍ನಲ್ಲಿ ನೀರಪೇಕ್ಷಣಾ ಪ್ರಮಾಣ ಪತ್ರ, ಕೆಲಸ/ಶೈಕ್ಷಣಿಕ ಪ್ರಮಾಣ ಪತ್ರ.
ಸಾಧನೆ ಸಲಕರಣೆ ಯೋಜನೆ: ಯುಡಿಐಡಿ ಕಾರ್ಡ್, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ವಾಸಸ್ಥಳ ಪ್ರಮಾಣ ಪತ್ರ, ಪಡಿತರ ಚೀಟಿ, ಭಾವಚಿತ್ರ.
ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರ ಯೋಜನೆ: ಯುಡಿಐಡಿ ಕಾರ್ಡ್, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಶಾಲಾ/ಕಾಲೇಜು ದೃಢೀಕರಣ ಪತ್ರ, ಟೈಲರಿಂಗ್ ತರಬೇತಿ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ವಾಸಸ್ಥಳ ಪ್ರಮಾಣ ಪತ್ರ, ಪಡಿತರ ಚೀಟಿ, ಭಾವಚಿತ್ರ.
ದೃಷ್ಠಿದೋಷ ಹೊಂದಿರುವ ವಿಕಲಚೇತನರಿಗೆ ಬ್ರೈಲ್ ಕಿಟ್ ಯೋಜನೆ: ಯುಡಿಐಡಿ ಕಾರ್ಡ್, ಎಸ್.ಎಸ್.ಎಲ್.ಸಿ ಅಂಕಪಟ್ಟಿ, ಶಾಲಾ/ಕಾಲೇಜು ದೃಢೀಕರಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ.
ಮೇಲ್ಕಂಡ ಯೋಜನೆಗಳಿಗೆ ಸೇವಾಸಿಂಧು, ಗ್ರಾಮ ಒನ್, ಬಳ್ಳಾರಿ ಒನ್ ಮತ್ತು ಸೇವಾ ಕೇಂದ್ರಗಳಲ್ಲಿ ಆನ್‍ಲೈನ್ ವೆಬ್‍ಸೈಟ್ hಣಣಠಿs://sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ/Sevಚಿsiಟಿಜhu/ಏಚಿಟಿಟಿಚಿಜಚಿ ಮೂಲಕ ಅರ್ಜಿ ಸಲ್ಲಿಸಿ, ಸ್ವೀಕೃತಿಯೊಂದಿಗೆ ಹಾರ್ಡ್ ಪ್ರತಿಯನ್ನು ಆಯಾ ತಾಲ್ಲೂಕಿನ ತಾಲ್ಲೂಕು ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ನಗರದ ಎಸ್.ಪಿ.ಸರ್ಕಲ್ ಹತ್ತಿರ ದೇವಿನಗರದ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ಅಥವಾ ದೂ.08392267886 ಹಾಗೂ ಜಿಲ್ಲೆಯ ವಿವಿದ್ದೋದ್ದೇಶ ಪುನರ್ವಸತಿ ಕಾರ್ಯಕರ್ತರ ದೂರವಾಣಿ ಸಂಪರ್ಕ: ಬಳ್ಳಾರಿ-8880875620, ಕಂಪ್ಲಿ-7676038917, ಕುರುಗೋಡು-9538000887, ಸಿರುಗುಪ್ಪ-9743509698, ಸಂಡೂರು-9632052270 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Another good news for the 'yajmanis' from the state government: The decision to implement naya chit fund ರಾಜ್ಯ ಸರ್ಕಾರದಿಂದ ʻಯಾಜಮಾನಿʼ ಯರಿಗೆ ಮತ್ತೊಂದು ಗುಡ್‌ನ್ಯೂಸ್‌: ನಯಾ ಚಿಟ್‌ಫಂಡ್‌ನ್ನು ಜಾರಿ ಮಾಡಲು ನಿರ್ಧಾರ
Share. Facebook Twitter LinkedIn WhatsApp Email

Related Posts

BREAKING : ರಾಜ್ಯದಲ್ಲಿ ಭಾರೀ ಮಳೆಗೆ ಘೋರ ದುರಂತ : ಗಾಳಿಗೆ ಮನೆ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು.!

1 Min Read

ಈ ಗಿಡ ಕಂಡರೆ ಚಿನ್ನ ಸಿಕ್ಕಂತೆಯೇ! ಈ ಸೊಪ್ಪಿನಲ್ಲಿ ಅಡಗಿದೆ ನೂರಾರು ಕಾಯಿಲೆಗಳಿಗೆ ಮದ್ದು

2 Mins Read

ಬೆಂಗಳೂರು ಯುವಕನ ‘₹0 ಆಫೀಸ್’: ಉಚಿತ ವೈಫೈ, ಎಸಿ ಸೌಲಭ್ಯದ ವಿಡಿಯೋ ವೈರಲ್ | WATCH VIDEO

2 Mins Read
Recent News

BREAKING : ರಾಜ್ಯದಲ್ಲಿ ಭಾರೀ ಮಳೆಗೆ ಘೋರ ದುರಂತ : ಗಾಳಿಗೆ ಮನೆ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು.!

ಪ್ರಧಾನಿ ಮೋದಿ ಇಂದಿನಿಂದ 5 ರಾಷ್ಟ್ರಗಳ ಪ್ರವಾಸ: ಮೊದಲು ಯುಎಇಗೆ ಭೇಟಿ; ತೈಲ ಮತ್ತು ಇಂಧನ ಭದ್ರತೆ ಕುರಿತು ಮಹತ್ವದ ಚರ್ಚೆ!

ಈ ಗಿಡ ಕಂಡರೆ ಚಿನ್ನ ಸಿಕ್ಕಂತೆಯೇ! ಈ ಸೊಪ್ಪಿನಲ್ಲಿ ಅಡಗಿದೆ ನೂರಾರು ಕಾಯಿಲೆಗಳಿಗೆ ಮದ್ದು

​ಕ್ಯಾನ್ಸರ್ ರೋಗಿಗಳಿಗೆ ವರದಾನ: ಭಾರತದಲ್ಲಿ 7 ನಿಮಿಷದ ‘ಮ್ಯಾಜಿಕ್’ ಇಂಜೆಕ್ಷನ್ ಲಾಂಚ್!

State News
KARNATAKA

BREAKING : ರಾಜ್ಯದಲ್ಲಿ ಭಾರೀ ಮಳೆಗೆ ಘೋರ ದುರಂತ : ಗಾಳಿಗೆ ಮನೆ ಮೇಲ್ಚಾವಣಿ ಕುಸಿದು ಒಂದೇ ಕುಟುಂಬದ ನಾಲ್ವರು ಸಾವು.!

By kannadanewsnow57 KARNATAKA 1 Min Read

ವಿಜಯಪುರ: ಜಿಲ್ಲೆಯಲ್ಲಿ ವರುಣನ ಅಬ್ಬರಕ್ಕೆ ಘೋರ ದುರಂತವೊಂದು ಸಂಭವಿಸಿದೆ. ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ ಮನೆಯ ಮೇಲ್ಚಾವಣಿ ಕುಸಿದು…

ಈ ಗಿಡ ಕಂಡರೆ ಚಿನ್ನ ಸಿಕ್ಕಂತೆಯೇ! ಈ ಸೊಪ್ಪಿನಲ್ಲಿ ಅಡಗಿದೆ ನೂರಾರು ಕಾಯಿಲೆಗಳಿಗೆ ಮದ್ದು

ಬೆಂಗಳೂರು ಯುವಕನ ‘₹0 ಆಫೀಸ್’: ಉಚಿತ ವೈಫೈ, ಎಸಿ ಸೌಲಭ್ಯದ ವಿಡಿಯೋ ವೈರಲ್ | WATCH VIDEO

ರೈಲು ಪ್ರಯಾಣಿಕರ ಗಮನಕ್ಕೆ: ಎಷ್ಟು ದಿನಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬಹುದು? ಇಲ್ಲಿದೆ ಹೊಸ ನಿಯಮ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.