ಕಾರವಾರ : ರಾಜ್ಯದ ಜನತೆಗೆ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, 10ನೇ ಗ್ಯಾರಂಟಿಯಾಗಿ ಎಲ್ಲರಿಗೂ ‘ಉಚಿತ ಆರೋಗ್ಯ ಸೇವೆ’ ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ಕಾರವಾರದಲ್ಲಿ ಭಾನುವಾರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ ಉದ್ಘಾಟಿಸಿ ಮಾತಾಡಿದ ಅವರು, ಕರ್ನಾಟಕವು ಆರೋಗ್ಯ ಕ್ಷೇತ್ರದಲ್ಲಿ ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಪ್ರತಿಪಾದಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಮ್ಮ ಕಾಂಗ್ರೆಸ್ ಸರ್ಕಾರ 10 ಗ್ಯಾರ೦ಟಿಯಾಗಿ ಎಲ್ಲರಿಗೂ ಉಚಿತ ಆರೋಗ್ಯ ಸೇವೆ ನೀಡುವ ಸಂಕಲ್ಪ ಮಾಡಿದೆ ಎಂದು ಘೋಷಿಸಿದ್ದಾರೆ.
5 ಗ್ಯಾರಂಟಿ ಕೊಟ್ಟಿದ್ದೇವೆ. ನಮ್ಮ 6ನೇ ಗ್ಯಾರಂಟಿ ಬಡವರಿಗೆ ಭೂಮಿ ಕೊಡುವುದು, 7ನೇ ಗ್ಯಾರಂಟಿ ನೀರು, ನೀರಾವರಿ ಸೌಲಭ್ಯ ಒದಗಿಸು ವುದು, 8ನೇ ಗ್ಯಾರಂಟಿ ಎಲ್ಲಾ ಬಡವರಿಗೆ ಮನೆ ನೀಡುವುದು, 9ನೇ ಗ್ಯಾರಂಟಿ ಇ-ಖಾತಾ, ಬಳಿಕ ಎಲ್ಲರಿಗೂ ‘ಆರೋಗ್ಯ ಗ್ಯಾರಂಟಿ’ ನೀಡುತ್ತೇವೆ ಎಂದರು.
ಕರಾವಳಿಯ ಅಭಿವೃದ್ಧಿಗೆ ಹೊಸ ಸೇತುವೆ ಆರಂಭ!
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಸ್ಕೋಡ ಗ್ರಾಮದ ಬಳಿ, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯನ್ನು ಉದ್ಘಾಟಿಸಲಾಯಿತು.
ಅಂಕೋಲಾ ತಾಲೂಕಿನ ಮಂಜಗುಣಿ ಗ್ರಾಮದಿಂದ ಕುಮಟಾ ತಾಲೂಕಿನ ಗಂಗಾವಳಿ ಗ್ರಾಮಗಳವರೆಗೆ ನೇರ ಸಂಪರ್ಕ ಕಲ್ಪಿಸುವ ಈ ಸೇತುವೆ, ಕರಾವಳಿ ಭಾಗದ ಜನರ ದಶಕಗಳ ಕನಸಾಗಿತ್ತು. ಮಳೆಗಾಲದಲ್ಲಿ ನದಿ ತುಂಬಿ ಹರಿಯುವ ಸಂದರ್ಭದಲ್ಲಿ ಜನರು ಎದುರಿಸುತ್ತಿದ್ದ ಸಂಚಾರದ ತೊಂದರೆಗಳಿಗೆ ಈಗ ಶಾಶ್ವತ ಪರಿಹಾರ ದೊರೆತಿದೆ.
ಈ ಸೇತುವೆ ನಿರ್ಮಾಣದಿಂದ ಸ್ಥಳೀಯ ರೈತರು, ಮೀನುಗಾರರು, ವಿದ್ಯಾರ್ಥಿಗಳು ಹಾಗೂ ವ್ಯಾಪಾರಸ್ಥರಿಗೆ ಬಹಳ ಅನುಕೂಲವಾಗಲಿದೆ. ಕೃಷಿ ಉತ್ಪನ್ನಗಳು ಮತ್ತು ಮೀನುಗಾರಿಕಾ ವಸ್ತುಗಳ ಸಾಗಣೆ ವೇಗವಾಗಿ ನಡೆಯಲಿದ್ದು, ಗ್ರಾಮೀಣ ಆರ್ಥಿಕತೆಗೆ ಹೊಸ ಚೈತನ್ಯ ದೊರೆಯಲಿದೆ.
ಜನಸೇವೆಯೇ ಜನಾರ್ದನ ಸೇವೆ..
ಇಂದು ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ನಿರ್ಮಿಸಲಾದ 450 ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ, ಯಲ್ಲಾಪುರ ತಾಲ್ಲೂಕಿನ ಖಾನಾಪುರ-ತಾಳಗುಪ್ಪ ರಾಜ್ಯ ಹೆದ್ದಾರಿ-93ರ ಕಿ.ಮೀ 82.50ರಲ್ಲಿ ನಿರ್ಮಿಸಲಾದ ನೂತನ ಸೇತುವೆ, ಯಲ್ಲಾಪುರ ಪಟ್ಟಣದ ಹೊಸ ನಿರೀಕ್ಷಣಾ ಮಂದಿರ ಹಾಗೂ ಮುಂಡಗೋಡ… pic.twitter.com/TLkaKMZR5S
— DK Shivakumar (@DKShivakumar) February 22, 2026
ಕರಾವಳಿಯ ಅಭಿವೃದ್ಧಿಗೆ ಹೊಸ ಸೇತುವೆ ಆರಂಭ!
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಾಸ್ಕೋಡ ಗ್ರಾಮದ ಬಳಿ, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತದ ವತಿಯಿಂದ ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯನ್ನು ಉದ್ಘಾಟಿಸಲಾಯಿತು.
ಅಂಕೋಲಾ ತಾಲೂಕಿನ ಮಂಜಗುಣಿ ಗ್ರಾಮದಿಂದ ಕುಮಟಾ ತಾಲೂಕಿನ ಗಂಗಾವಳಿ ಗ್ರಾಮಗಳವರೆಗೆ ನೇರ… pic.twitter.com/HOgiw56NGW
— DK Shivakumar (@DKShivakumar) February 22, 2026








