ಬೆಂಗಳೂರು: ನಗರದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಎನ್ನುವಂತೆ ನಮ್ಮ ಮೆಟ್ರೋ ಗುಲಾಬಿ ಮಾರ್ಗದಲ್ಲಿ ಪ್ರೋಟೋಟೈಪ್ ರೈಲನ್ನು ಅಂದರೆ ಚಾಲಕ ರಹಿತ ರೈಲನ್ನು ಇಂದು ಬಿ ಎಂ ಆರ್ ಸಿ ಎಲ್ ಅನಾವರಣಗೊಳಿಸಿದೆ. ಆ ಮೂಲಕ ಶೀಘ್ರದಲ್ಲೇ ಪಿಂಕ್ ಲೈನ್ ಯೋಜನೆ ಆರಂಭದ ಮುನ್ಸೂಚನೆಯನ್ನು ನೀಡಲಾಗಿದೆ.
ಇಂದು ಬೆಂಗಳೂರಿನ ಪಿಂಕ್ ಲೈನ್ ಮೂಲ ಮಾದರಿಯನ್ನು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಜೆ.ರವಿಶಂಕರ್, ಬಿಇಎಂಎಲ್ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಶಾಂತನು ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಔಪಚಾರಿಕವಾಗಿ ಅನಾವರಣಗೊಳಿಸಲಾಯಿತು.
ಬೆಂಗಳೂರಿನ ಕಾಳೇನ ಅಗ್ರಹಾರದಿಂದ ನಾಗಾವರಣವರೆಗೆ ಸುಮಾರು 21.25 ಕಿಲೋಮೀಟರ್ ಗುಲಾಬಿ ಮಾರ್ಗವು ಸಂಪರ್ಕಿಸುತ್ತದೆ. ಈ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರವು ಡಿಸೆಂಬರ್ 2023 ಅಥವಾ 2027ರಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.
ಅಂದಹಾಗೇ ನಮ್ಮ ಮೆಟ್ರೋದ ಪಿಕ್ ಲೈನ್ ರೈಲು ಚಾಲಕ ರಹಿತ ರೈಲಾಗಿದೆ. ಮೊದಲ ಹಂತದಲ್ಲಿ ಐದು ಹೊಸ ಚಾಲಕ ರಹಿತ ರೈಲನ್ನು ಓಡಿಸೋದಕ್ಕೆ ಬಿಎಂಆರ್ ಸಿಎಲ್ ಮುಂದಾಗಿದೆ. ಡಿಸೆಂಬರ್.15ರ ನಂತ್ರ ಕೊತ್ತನೂರು ಡಿಪೋಗೆ ಹೋಗಿ ಹಲವು ಪರೀಕ್ಷೆಗಳನ್ನು ಚಾಲಕ ರಹಿತ ಮೆಟ್ರೋ ರೈಲು ಪರೀಕ್ಷೆಯನ್ನು ನಡೆಸಲಾಗುತ್ತಿದೆ.
ರಾಜ್ಯದ ಸಾರಿಗೆ ಇಲಾಖೆಯಲ್ಲಿ ನಕಲಿ ದಾಖಲೆ ನೀಡಿದ್ದವರಿಗೆ ಬಿಗ್ ಶಾಕ್: ಬಡ್ತಿಗೆ ಬ್ರೇಕ್
BREAKING: ಬಾಂಗ್ಲಾದೇಶದಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್: ಫೆಬ್ರವರಿ 12, 2026ರಂದು ಎಲೆಕ್ಷನ್








