ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳಿಗಾಗಿ ಉಚಿತವಾಗಿ ನೀಡಲು ನಿರ್ಧರಿಸಿದೆ. ಈ ಮೂಲಕ ರಾಜ್ಯದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ನೀಡಲಾಗಿದೆ.
ತುರ್ತು ಅಲ್ಲದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳಿಗೆ 2ನೇ ವೈದ್ಯಕೀಯ ಅಭಿಪ್ರಾಯ ಪಡೆಯಬಹುದು. ಎರಡನೆಯ ಅಭಿಪ್ರಾಯವು ರೋಗಿಗಳಿಗೆ ಅವರ ರೋಗನಿರ್ಣಯ ಮತ್ತು ಚಿಕಿತ್ಸಾ ಆಯ್ಕೆಗಳ ಕುರಿತು ಹೆಚ್ಚುವರಿ ದೃಷ್ಟಿಕೋನವನ್ನು ಒದಗಿಸುತ್ತದೆ. ಸಂಪೂರ್ಣ ಮಾಹಿತಿಯ ಆಧಾರದ ಮೇಲೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
ಕ್ಲಿಷ್ಟಕರ ಪ್ರಕರಣಗಳಲ್ಲಿ ಮತ್ತೊಬ್ಬ ವೈದ್ಯರು/ಶಸ್ತ್ರಚಿಕಿತ್ಸಕರು ರೋಗನಿರ್ಣಯವನ್ನು ದೃಡೀಕರಿಸಬಹುದು ಅಥವಾ ನಿರಾಕರಿಸಬಹುದು ಹಾಗೂ ಪರ್ಯಾಯ ಚಿಕಿತ್ಸಾ ವಿಧಾನವನ್ನು ಸೂಚಿಸಬಹುದು. ಶಸ್ತ್ರಚಿಕಿತ್ಸೆಗೆ ಸಂಬಂಧಿಸಿದ ಅಪಾಯಗಳ ಬಗ್ಗೆ ಶಸ್ತ್ರಚಿಕಿತ್ಸಕರು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರಬಹುದು, ಇದು ರೋಗಿಗಳಿಗೆ ಶಸ್ತ್ರಚಿಕಿತ್ಸೆಯಿಂದ ಉಂಟಾಗುವ ತೊಡಕುಗಳು ಮತ್ತು ಚೇತರಿಕೆಯ ಸವಾಲುಗಳನ್ನು ಪೂರ್ಣ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಎರಡನೇ ಅಭಿಪ್ರಾಯವು ಶಸ್ತ್ರಚಿಕಿತ್ಸೆಯಲ್ಲದ ಇತರೆ ಚಿಕಿತ್ಸಾ ವಿಧಾನಗಳನ್ನು ಸೂಚಿಸಬಹುದು. ಕ್ಲಿಷ್ಟಕರವಾದ ಶಸ್ತ್ರಚಿಕಿತ್ಸೆಗಳು ಸಾಮಾನ್ಯವಾಗಿ ವಿಭಿನ್ನ ಅಥವಾ ಹೆಚ್ಚು ವಿಶೇಷ ಗಮನವನ್ನು ಹೊಂದಿರುವ ತಜ್ಞ ವೈದ್ಯರುಗಳಿಂದ ಸುಧಾರಿತ ಹೊಸ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿರುತ್ತದೆ.
ರೋಗ ನಿರ್ಣಯ ಮತ್ತು ಚಿಕಿತ್ಸಾ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳುವುದರಿಂದ ರೋಗಿಗೆ ಹಾಗೂ ಅವರ ಕುಟುಂಬಕ್ಕೆ ಶಸ್ತ್ರಚಿಕಿತ್ಸೆಯ ಕುರಿತು ಆತಂಕ ಹಾಗೂ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮನಸ್ಸಿಗೆ ಶಾಂತಿ ನೀಡುತ್ತದೆ. ಶಸ್ತ್ರಚಿಕಿತ್ಸೆಗಾಗಿ ತಯಾರಿ, ಚೇತರಿಕೆಯ ಸಮಯ ಮತ್ತು ಶಸ್ತ್ರಚಿಕಿತ್ಸೆಯ ನಂತರದ ಪುನರ್‌ವಸತಿ ಬಗ್ಗೆ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಈ ಅಂಶಗಳು ರೋಗಿಗಳಿಗೆ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಪರಿಗಣಿಸುವಾಗ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಹಾಗೂ ರೋಗಿಯ ವಿಶ್ವಾಸವನ್ನು ಹೆಚ್ಚಿಸುತ್ತದೆ.
ಪ್ರಾಥಮಿಕ ಹಂತದಲ್ಲಿ TKR/THR ಚಿಕಿತ್ಸಾ ವಿಧಾನಗಳಿಗೆ ಎರಡನೇ ಅಭಿಪ್ರಾಯ ಪಡೆಯಲು ಯೋಜಿಸಲಾಗಿದೆ.
ಸಂಧಿವಾತ, ವಯಸ್ಸಿಗೆ ಸಂಬಂಧಿಸಿದ ಕೀಲುಗಳ ಕ್ಷೀಣತೆ ಮತ್ತು ಗಾಯಗಳ ಹರಡುವಿಕೆಯಿಂದಾಗಿ ಮೊಣಕಾಲು ಬದಲಿ ಮತ್ತು ಸೊಂಟ (Hip) ಬದಲಿಗಳಂತಹ ಶಸ್ತ್ರಚಿಕಿತ್ಸೆಗಳು ಹೆಚ್ಚಾಗುತ್ತಿವೆ. ಇಂತಹ ತೊಂದರೆಗಳನ್ನು ಅನುಭವಿಸುತ್ತಿರುವ ರೋಗಿಗಳಿಗೆ ಸಾಮಾನ್ಯವಾಗಿ ಚಿಕಿತ್ಸೆಯ ಕುರಿತು ನಿರ್ಧಾರ ಕೈಗೊಳ್ಳಲು ಸೂಕ್ತವಾದ ಮಾಹಿತಿ ಲಭ್ಯವಿಲ್ಲದೆ ಗೊಂದಲಕ್ಕೀಡಾಗುತ್ತಾರೆ. ಆದ್ದರಿಂದ ರೋಗಿಗಳಿಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನ ನೀಡುವ ಸಲುವಾಗಿ ಸಾರ್ವಜನಿಕರಿಗೆ ಉಚಿತ ಸಹಾಯವಾಣಿಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಲ್ಲಿ ತೆರೆಯಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕರ್ನಾಟಕದಲ್ಲಿ ಕೀಲು ಬದಲಿ ಶಸ್ತ್ರಚಿಕಿತ್ಸೆಗಳ ಕುರಿತು ಎರಡನೇ ಅಭಿಪ್ರಾಯಕ್ಕಾಗಿ AB-PMJAY-CMs-ArK ಯೋಜನೆಗಾಗಿ SAST ಅಡಿಯಲ್ಲಿ ಮೀಸಲಾದ ಸಹಾಯವಾಣಿಯನ್ನು 18004258330 (24*7 ಕಾರ್ಯನಿರ್ವಹಿಸುತ್ತದೆ) ಪ್ರಾರಂಭಿಸಲು ಹೆಮ್ಮೆಪಡುತ್ತದೆ. ಈ ಉಪಕ್ರಮವು ಕರ್ನಾಟಕದಲ್ಲಿ ಆರೋಗ್ಯ ಸೇವೆಯನ್ನು ಸುಧಾರಿಸುವಲ್ಲಿ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಪ್ರತಿಯೊಬ್ಬ ನಾಗರೀಕನು ಕೀಲು ಶಸ್ತ್ರಚಿಕಿತ್ಸೆಗಳಿಗೆ ಸಂಬಂಧಿತ ಸಮಸ್ಯೆಗಳನ್ನು ನಿರ್ವಹಿಸಲು ಸಮಗ್ರ ಮತ್ತು ವೈಯಕ್ತೀಕರಿಸಿದ ವೈದ್ಯಕೀಯ ಸಲಹೆಯನ್ನು ಪಡೆಯುವುದನ್ನು ಖಾತ್ರಿಪಡಿಸುತ್ತದೆ.
ಈ ಮೀಸಲಾದ ಸಹಾಯವಾಣಿ ಸೇವೆಯು ಪ್ರಾಥಮಿಕ ಹಂತದಲ್ಲಿ ಕೀಲು ಬದಲಿ ಶಸ್ತ್ರಚಿಕಿತ್ಸೆಗಳ ಕುರಿತು ಎರಡನೇ ಅಭಿಪ್ರಾಯವನ್ನು ಪಡೆಯುವ ವ್ಯಕ್ತಿಗಳಿಗೆ ಸಹಾಯ ಮಾಡುವುದು. ಸಹಾಯವಾಣಿಯು ಮೊಣಕಾಲು ಮತ್ತು ಸೊಂಟ (Hip) ಸಮಸ್ಯೆಗಳನ್ನು ಹೊಂದಿರುವ ರೋಗಿಗಳಿಗೆ ಸಾಕ್ಷ್ಯ ಆಧಾರಿತ ಮಾರ್ಗದರ್ಶನವನ್ನು ಒದಗಿಸುವ ಗುರಿಯನ್ನು ಹೊಂದಿದೆ ಮತ್ತು ಲಭ್ಯವಿರುವ ಅತ್ಯುತ್ತಮ ಚಿಕಿತ್ಸಾ ಆಯ್ಕೆಯ ಬಗ್ಗೆ ಪ್ರಬುದ್ಧ ನಿರ್ಧಾರವನ್ನು ತೆಗೆದುಕೊಳ್ಳಲು ಅವರಿಗೆ ಮಾರ್ಗದರ್ಶನವನ್ನು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ನೀಡಲಾಗುತ್ತದೆ.
ರೋಗಿಗಳು/ಸಾರ್ವಜನಿಕರು ಪರಿಣಿತ ಕೀಲು. ಬದಲಿ ಶಸ್ತ್ರಚಿಕಿತ್ಸಕರೊಂದಿಗೆ ಸಂಪರ್ಕ ಸಾಧಿಸಬಹುದು, ಪ್ರಶ್ನೆಗಳನ್ನು ಕೇಳಬಹುದು, ಚಿಕಿತ್ಸಾ ಯೋಜನೆಗಳ ಕುರಿತು ಎರಡನೇ ಅಭಿಪ್ರಾಯವನ್ನು ಪಡೆಯಬಹುದು, ರೋಗ ಮತ್ತು ಚಿಕಿತ್ಸೆ, ಶಸ್ತ್ರಚಿಕಿತ್ಸಾ ಆಯ್ಕೆಗಳು ಮತ್ತು ಪುನರ್ವಸತಿ ಬಗ್ಗೆ ಖಾತ್ರಿಪಡಿಸಿಕೊಳ್ಳಬಹುದು.
ಶಸ್ತ್ರಚಿಕಿತ್ಸೆಯ ಬದಲು ಯಾವುದೇ ಪರ್ಯಾಯ ಚಿಕಿತ್ಸೆಗಳ ಬಗ್ಗೆ ಹಾಗೂ ಕೀಲು ಬದಲಿ ಶಸ್ತ್ರಚಿಕಿತ್ಸೆಯಿಂದ ಆಗಬಹುದಾದ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಮಾಹಿತಿ ನೀಡಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡಲಾಗುವುದು.
ಕೀಲು ಸಮಸ್ಯೆಯನ್ನು ಈ ಕೆಳಗಿನಂತೆ ನಾಲ್ಕು ಹಂತಗಳಾಗಿ ವಿಂಗಡಿಸಲಾಗಿದೆ. 1 ಮತ್ತು 2 ನೇ ಹಂತದ ಸಮಸ್ಯೆಗಳಿಗೆ ಶಸ್ತ್ರ ಚಿಕಿತ್ತೆಯ ಅವಶ್ಯಕತೆಯಿರುವುದಿಲ್ಲ 3 ಮತ್ತು 4 ನೇ ಹಂತದ ಸಮಸ್ಯೆಗಳಿಗೆ ಶಸ್ತ್ರ ಚಿಕಿತ್ತೆಯ ಅವಶ್ಯಕತೆಯಿರುತ್ತದೆ.
ಈ ಸಹಾಯವಾಣಿಯು ನುರಿತ ಶಸ್ತ್ರಚಿಕಿತ್ಸಾ ತಜ್ಞರಿಂದ ಎರಡನೇ ಅಭಿಪ್ರಾಯವನ್ನುನೀಡುವ ಮೂಲಕ ರೋಗಿಯ ಆತಂಕವನ್ನು ನಿವಾರಿಸಲು ಹಾಗೂ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ.
ಇಲ್ಲಿದೆ ಇಂದಿನ ‘ಮದ್ಯ ಮಾರಾಟಗಾರ’ರ ಜೊತೆಗಿನ ‘ಸಿಎಂ ಸಿದ್ಧರಾಮಯ್ಯ ಸಭೆ’ಯ ಪ್ರಮುಖ ಹೈಲೈಟ್ಸ್
ಕಾಂಗ್ರೆಸ್ ನಲ್ಲೂ ‘ಕಿಂಡರ್ ಗಾರ್ಡನ್’ ಪದ್ಧತಿ ಇದೆ : ಸಚಿವ ಸ್ಥಾನದ ಕುರಿತು ಶಾಸಕ ನರೇಂದ್ರ ಸ್ವಾಮಿ ಅಸಮಾಧಾನ