ಬೆಂಗಳೂರು: 01-04-2018 ರಿಂದ 31-03-2020 ರಾ ಅವಧಿಯಲ್ಲಿ ಚಾಲ್ತಿಯಲ್ಲಿರುವ ಪಾಲಿಸಿಗಳಿಗೆ ಸರಳ ಪ್ರತ್ಯಾವರ್ತಿ ಲಾಭಾಂಶ ನೀಡುವ ಬಗ್ಗೆ ಸುತ್ತೋಲೆಯನ್ನು ಹೊರಡಿಸಲಾಗಿದೆ. ಸುತ್ತೋಲೆಯಲ್ಲಿ ಈ ಕೆಳಕಂಡ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ: ಆಇ 09 ಕವಿಇ 2024, ಬೆಂಗಳೂರು, ದಿನಾಂಕ:11-07-2024. ಕರ್ನಾಟಕ ಸರ್ಕಾರವು ಉಲ್ಲೇಖ (1) ರ ನಿರ್ದೇಶನಾಲಯದ ಪುಸ್ತಾವನೆ ಮತ್ತು ವಿಮಾ ಗಣಕರ ವಿಮಾ ಮೌಲ್ಯಮಾಪನ ವರದಿಯನ್ನು ಪರಿಶೀಲಿಸಿ, ಅಂಗೀಕರಿಸಿದ ನಂತರ ದಿನಾಂಕ: 01-04-2018 ರಿಂದ 31-03-2020 ರ ದೈವಾರ್ಷಿಕ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ವಿಮಾ ಪಾಲಿಸಿಗಳಿಗೆ ಸರಳ ಪ್ರತ್ಯಾವರ್ತಿ ಲಾಭಾಂಶ ಮತ್ತು 01-04-2020 ರಿಂದ 31-03-2022 ರವರೆಗಿನ ಅವಧಿಯಲ್ಲಿ ವಿವಿಧ ಹಕ್ಕುಗಳ ರೂಪದಲ್ಲಿ ಹೊರ ಹೋಗಿರುವ ಪಾಲಿಸಿಗಳಿಗೆ ಮಧ್ಯಕಾಲೀನ ಅವಧಿಗೆ ಲಾಭಾಂಶವನ್ನು ಉಲ್ಲೇಖ (2) ರ ಆದೇಶದಲ್ಲಿ ಘೋಷಿಸಿ, ಮಂಜೂರು ಮಾಡಲಾಗಿದ್ದು, ವಿವರವನ್ನು ಈ ಕೆಳಕಂಡಂತೆ ನೀಡಲಾಗಿದೆ.
1) ದಿನಾಂಕ: 01.04.2018 ರಿಂದ 31.03.2020 ರ ದೈವಾರ್ಷಿಕ ಮೌಲ್ಯಮಾಪನ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ಪಾಲಿಸಿಗಳಿಗೆ ಹಾಗೂ ಚಾಲ್ತಿಯಲ್ಲಿದ್ದ ಪ್ರತಿ ತಿಂಗಳ ಅವಧಿಯನ್ನು ಒಳಗೊಂಡಂತೆ ಪಾಲಿಸಿಗಳ ಸ್ಥಿರಪಡಿಸಿದ ವಿಮಾ ಮೊತ್ತದ ಮೇಲೆ ಪ್ರತಿ ಸಾವಿರ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80/- ರಂತೆ ಸರಳ ಪ್ರತ್ಯಾವರ್ತಿ ಲಾಭಾಂಶವನ್ನು (Simple Reversionary Bonus) ನೀಡುವುದು;
2) ಅವಧಿಪೂರ್ಣ, ಮರಣಜನ್ಯ ಮತ್ತು ವಿಮಾ ತ್ಯಾಗ ಮೌಲ್ಯಗಳಿಂದ ದಿನಾಂಕ 01.04.2020 ರಿಂದ 31.03.2022 ರ ಅವಧಿಯಲ್ಲಿ ಹೊರ ಹೋಗಿರುವ ವಿಮಾ ಪಾಲಿಸಿಗಳಿಗೆ ಪ್ರತಿ ಸಾವಿರ ಮಧ್ಯಕಾಲೀನ ಅವಧಿಗೆ ರೂಪಾಯಿಗಳಿಗೆ ಪ್ರತಿ ವರ್ಷಕ್ಕೆ ರೂ.80-00 ರಂತೆ ಲಾಭಾಂಶವನ್ನು (Interim period Bonus) ನೀಡುವುದು;
-2- ಮೇಲ್ಕಂಡ ಆದೇಶ ಹಾಗೂ ದರಗಳನ್ವಯ ಇಲಾಖೆಯ ಎಲ್ಲಾ ಜಿಲ್ಲಾ ವಿಮಾಧಿಕಾರಿಗಳು ಅರ್ಹ ವಿಮಾದಾರರಿಗೆ ಸರಳ ಪುತಾವರ್ತಿ ಲಾಭಾಂಶ ಪಾವತಿ ಮಾಡುವ ಪ್ರಕ್ರಿಯ ಪ್ರಾರಂಭಿಸುವ ಮೊದಲು ಅಗತ್ಯವಾದ ಎಲ್ಲಾ ಪೂರ್ವಸಿದ್ಧತೆಗಳನ್ನು ಕೈಗೊಂಡು, ಪಾವತಿ ಸಂದರ್ಭದಲ್ಲಿ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವಂತೆ ಈ ಮೂಲಕ ತಿಳಿಯಪಡಿಸಿದ.
1) ಪುಸ್ತುತ ಸಾಲಿನ ಮೌಲ್ಯಮಾಪನವು 01-04-2018 ರಿಂದ 31-03-2020 ನೇ ದೈವಾರ್ಷಿಕ ಅವಧಿಯದ್ದಾಗಿದ್ದು, ವಿಮಾದಾರರ ಜನ್ಮ ದಿನಾಂಕವು 01/04/1965 ರಿಂದ 31/03/1967 ರವರೆಗಿನ ಅವಧಿಯದ್ದಾಗಿದ್ದಲ್ಲಿ ಮಾತ್ರ ಅಂತಹವರು ಪ್ರಸ್ತುತ ಲಾಭಾಂಶ ಪಾವತಿ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ. ಇದಕ್ಕೂ ಹಿಂದಿನ ಅವಧಿಗೆ ಈಗಾಗಲೇ ಲಾಭಾಂಶ ಪಾವತಿಸಲಾಗಿರುತ್ತದೆ.
2) 01-04-2022 ರ ನಂತರ ಉದ್ಭವಗೊಂಡ ಹಕ್ಕು ಪ್ರಕರಣಗಳಿಗೆ ಮುಂದೆ ಲಾಭಾಂಶ ನೀಡಬೇಕಾಗಿರುವುದರಿಂದ ಇಂತಹ ಪುಕರಣಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿಟ್ಟುಕೊಳ್ಳತಕ್ಕದ್ದು.
3) ಲಾಭಾಂಶ ನೀಡುವಾಗ ಯಾವುದೇ ರೀತಿಯ ತಪ್ಪಿನಿಂದಾಗಿ ಹಕ್ಕುದಾರರಿಗೆ ಹೆಚ್ಚುವರಿ ಪಾವತಿ ಆಗದಂತೆ ಎಲ್ಲ ಬಗೆಯ ಎಚ್ಚರವನ್ನು ವಹಿಸತಕ್ಕದ್ದು. ಫಲಪುದ ಹಕ್ಕು, ಇತ್ಯರ್ಥದ ಸಂದರ್ಭದಲ್ಲಿ ರದ್ದುಗೊಂಡ ಪಾಲಿಸಿಗಳ ಬಗ್ಗೆ ತೀವ್ರ ನಿಗಾ ವಹಿಸಿ ಅಂತಹ ಪಾಲಿಸಿಗಳ ವಿಮಾಮೊತ್ತಕ್ಕೆ ಲಾಭಾಂಶ ಗಣನೆಯಾಗದಂತೆ ನೋಡಿಕೊಳ್ಳತಕ್ಕದ್ದು, ತಪ್ಪಿದಲ್ಲಿ ಅಂತಹ ಪಾವತಿಗಳಿಗೆ ಸಂಬಂಧಪಟ್ಟ ವಿಷಯ ನಿರ್ವಾಹಕರು / ಅಧೀಕ್ಷಕರು ಜಿಲ್ಲಾ ವಿಮಾಧಿಕಾರಿಗಳೇ ಹೊಣೆಗಾರರಾಗುತ್ತಾರೆ. ಆದ್ದರಿಂದ ಪುತಿಯೊಂದು ಪುಕರಣವನ್ನು ಕೂಲಂಕುಶವಾಗಿ ಪರಿಶೀಲಿಸತಕ್ಕದ್ದು.
4) ಹಕ್ಕು ಇತ್ಯರ್ಥಗೊಂಡ ಪ್ರಕರಣಗಳಿಗೆ ಪ್ರಸ್ತುತದ ಲಾಭಾಂಶ ನೀಡುವ ಮುನ್ನ ಅಂತಹ ಕಡತಗಳು ಆಂತರಿಕ ತಪಾಸಣೆ (Audit) ಮಾಡಲ್ಪಟ್ಟಿದೆ ಎಂಬುದನ್ನು ಖಾತರಿಪಡಿಸಿಕೊಂಡು ತನ್ಮೂಲಕ ಹೆಚ್ಚುವರಿ ಮತ್ತು ಕಡಿಮೆ ಪಾವತಿಗಳನ್ನು
ಸರಿಪಡಿಸಿಕೊಳ್ಳತಕ್ಕದ್ದು.
5) ದಿನಾಂಕ 01/04/2018 ಮತ್ತು ನಂತರದ ಹೊಣೆಯ ದಿನಾಂಕ ಹೊಂದಿದ ಪಾಲಿಸಿಗಳು ದಿನಾಂಕ 31/03/2020 ರ ಒಳಗಾಗಿ ಮರಣಜನ ಅಥವಾ ವಿಮಾ ತ್ಯಾಗ ಮೌಲ್ಯ ಹಕ್ಕಿನ ರೂಪದಲ್ಲಿ ಇತ್ಯರ್ಥಗೊಂಡಿದ್ದಲ್ಲಿ ಸದರಿ ಪಾಲಿಸಿಗಳು ಎರಡು ಮೌಲ್ಯ ಮಾಪನ ಅವಧಿಯ ನಡುವೆ ಚಾಲ್ತಿಯಲ್ಲಿರದ ಕಾರಣ [Non-participation in inter-valuation period) ಅಂತಹ ಪಾಲಿಸಿಗಳಿಗೆ ನಿಯಮಾನುಸಾರ ಯಾವುದೇ ಲಾಭಾಂಶ ಪಾವತಿಸಲು ಅವಕಾಶವಿಲ್ಲವಾದ್ದರಿಂದ ಇಂತಹ ಪ್ರಕರಣಗಳನ್ನು ಜಿಲ್ಲಾ ವಿಮಾಧಿಕಾರಿಗಳು ಜಾಗರೂಕತೆಯಿಂದ ಪರಿಶೀಲಿಸಿ ಲಾಭಾಂಶ ಪಾವತಿ ಆಗದಂತೆ ಎಚ್ಚರವಹಿಸುವುದು.
-3-
6) ದಿನಾಂಕ 01/04/2018 ಮತ್ತು ನಂತರದ ಹೊಣೆಯ ದಿನಾಂಕ ಹೊಂದಿದ ಪಾಲಿಸಿಗಳು ದಿನಾಂಕ 01/04/2020 ರ ನಂತರ ಮರಣಜನ್ಯ ಅಥವಾ ವಿಮಾ ತ್ಯಾಗ ಮೌಲ್ಯ ಹಕ್ಕಿನ ರೂಪದಲ್ಲಿ ಇತ್ಯರ್ಥಗೊಂಡಿದ್ದಲ್ಲಿ ಸದರಿ ಪಾಲಿಸಿಗಳು ಎರಡು ಮೌಲ್ಯ ಮಾಪನ ಅವಧಿಯ ನಡುವೆ ಚಾಲ್ತಿಯಲ್ಲಿರುವುದರಿಂದ [Participated in valuation period) ಅಂತಹ ಪಾಲಿಸಿಗಳು 2018-20 ನೇ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ತಿಂಗಳುಗಳಿಗೆ ಮಾತ್ರ ಲಾಭಾಂಶ ಲಭ್ಯವಾಗುವ ಕಾರಣ ಇಂತಹ ಪ್ರಕರಣಗಳನ್ನು ಜಾಗರೂಕತೆಯಿಂದ ಪರಿಶೀಲಿಸಿ ಲಭ್ಯವಿರುವ ಅವಧಿಗೆ ಮಾತ್ರ ಮಧ್ಯಕಾಲೀನ ಅವಧಿಗೆ ಲಾಭಾಂಶವನ್ನು ಪಾವತಿಸತಕ್ಕದ್ದು.
7) ಆನ್‌ಲೈನ್ ನಲ್ಲಿ ಇತ್ಯರ್ಥಗೊಂಡ ಫಲವುದ ಪಾಲಿಸಿಗಳ ನಿವ್ವಳ ಮೊತ್ತವು ಋಣಾತ್ಮಕವಾಗಿ ಕಂಡುಬಂದಲ್ಲಿ ಅಂತಹ ಪ್ರಕರಣಗಳನ್ನು ಸರಿಯಾಗಿ ಪರಿಶೀಲಿಸಿ, ಪ್ರಸ್ತುತ ಲಾಭಾಂಶ ಲೆಕ್ಕಾಚಾರದಿಂದ ಋಣಾತ್ಮಕ ಮೊತ್ತವನ್ನು ಕಡಿತಗೊಳಿಸಿದ ನಂತರ ಲಾಭಾಂಶ ಮೊತ್ತವನ್ನು ಪಾವತಿಸತಕ್ಕದ್ದು.
8) ಆಡಿಟ್ ಆಗಿಲ್ಲದ ಕಡತಗಳಿಗೆ ಲಾಭಾಂಶ ನೀಡಬೇಕಾದ ಅನಿವಾರ್ಯ ಸಂದರ್ಭ ಬಂದಲ್ಲಿ ಅಂತಹ ಕಡತಗಳನ್ನು ಜಿಲ್ಲಾ ವಿಮಾಧಿಕಾರಿಗಳು ಮತ್ತು ಅಧೀಕ್ಷಕರು ಪೂರ್ಣವಾಗಿ ಪುನರಾವಲೋಕನ ಮಾಡಿ (review) ದೃಢೀಕರಣ ಸಹಿ ಮಾಡಿದ ನಂತರವೇ ಪಾವತಿಸತಕ್ಕದ್ದು.
9) ಲಾಭಾಂಶ ಪಾವತಿಯನ್ನು ಆನ್‌ಲೈನ್ ಮೂಲಕವೇ ಈ ಕೆಳಗಿನ ಕ್ರಮದಲ್ಲಿ ವರ್ಷಾವಾರು ಕ್ರಮಾನುಗತವಾಗಿ ಇತ್ಯರ್ಥಪಡಿಸಲು ಸೂಚಿಸಲಾಗಿದೆ; ಮೇಲ್ಕಂಡ ಎಲ್ಲಾ ಅಂಶಗಳನ್ನು ಪರಿಗಣಿಸಿ, ಆನ್‌ಲೈನ್‌ನಲ್ಲಿಯೇ ಇತ್ಯರ್ಥಪಡಿಸಿರುವ ಹಕ್ಕುಪಕರಣಗಳ ಅವಧಿಯು ದಿನಾಂಕ 01-04-2020 ರಿಂದ 31-03-2022 ರೊಳಗಾಗಿದ್ದಲ್ಲಿ ಅಂತಹ ಪ್ರಕರಣಗಳನ್ನೂ ಸಹ ಆಡಿಟ್ ಮಾಡಿಸಿ, ಲಾಭಾಂಶ ಪಾವತಿ ಕಾರ್ಯವನ್ನು ದಿನಾಂಕ 22-07-2024 ರಿಂದ ಪ್ರಾರಂಭಿಸಿ ಆನ್‌ಲೈನ್‌ನಲ್ಲಿಯೇ ಹದಿನೈದು ದಿನಗಳೊಳಗಾಗಿ ಮುಕ್ತಾಯಗೊಳಿಸತಕ್ಕದ್ದು. ಆನ್‌ಲೈನ್ ನ ಲಾಭಾಂಶ ಪಾವತಿ ಪ್ರಕ್ರಿಯೆ ಬಗ್ಗೆ SOP ಹಾಗೂ ಸದರಿ process ಬಗ್ಗೆ Demo ಅನ್ನು ಗಣಕ ಶಾಖೆಯಿಂದ ಎಲ್ಲಾ ಜಿಲ್ಲೆಗಳಿಗೆ ನೀಡಲಾಗುವುದು. ಅಲ್ಲದೇ, ಹಕ್ಕುಪಕರಣಗಳ ಮೇಲಿನ ಲಾಭಾಂಶ ಪಾವತಿ ಕುರಿತು ದಿನಾಂಕ 15-07-2024 ರಂದು ಪೂರ್ವಾಹ್ನ 10.30 ಗಂಟೆಗೆ ನಡೆದ ಆನ್‌ಲೈನ್ ಸಭೆಯಲ್ಲಿ ಎಲ್ಲಾ ಜಿಲ್ಲಾ ವಿಮಾಧಿಕಾರಿಗಳಿಗೆ ಲಾಭಾಂಶ ಲೆಕ್ಕಚಾರದ ಬಗ್ಗೆ ಸೃಷ್ಟಿಕರಣವನ್ನು ನೀಡಲಾಗಿದ್ದು, ಈ ಬಗ್ಗೆ ಯಾವುದೇ ಸಂದೇಹಗಳಿದ್ದಲ್ಲಿ ಸಂಬಂಧಪಟ್ಟ ಉಪನಿರ್ದೇಶಕರನ್ನು ಸಂಪರ್ಕಿಸಬಹುದಾಗಿದೆ ಅಂಥ ತಿಳಿಸಿದೆ.