ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಗೃಹಲಕ್ಷ್ಮಿ ಯೋಜನೆಯ ಹಣ 2 ತಿಂಗಳ ಹಿಂದಿನ ಕಂತು ಜಮೆ ಆಗಿತ್ತು. ಆದರೆ ಇತ್ತೀಚಿನ 2 ಕಂತುಗಳ ಹಣ ಇನ್ನು ಜಮೆ ಆಗಿಲ್ಲ ಎಂಬುದು ಯಜಮಾನಿಯರ ಆರೋಪವಾಗಿದೆ. ಈ ಕುರಿತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಇನ್ನೊಂದು ವಾರ ಅಂದರೆ ಮಾರ್ಚ್ 31ರ ಬಳಿಕ 2 ಕಂತುಗಳ ಹಣ ಖಾತೆಗೆ ಜಮೆ ಆಗಲಿದೆ ಎಂದ್ ಸ್ಪಷ್ಟನೆ ನೀಡಿದ್ದಾರೆ.
ಹೌದು ಈ ಕುರಿತು ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಎರಡು ಕಂತುಗಳ ಹಣವನ್ನು ಮಾರ್ಚ್ 31ರ ಬಳಿಕ ಅಂದರೆ ಇನ್ನೊಂದು ವಾರ ಬಿಟ್ಟು ಹಾಕಲಾಗುತ್ತದೆ. ಈಗಾಗಲೇ ಹಿಂದಿನ 2 ಕಂತುಗಳ ಹಣ ಖಾತೆಗೆ ಹಾಕಲಾಗಿದೆ. ಇನ್ನು ಉಳಿದ 2 ಕಂತುಗಳ ಹಣವನ್ನು ಮಾರ್ಚ್ 31 ರ ನಂತರ ಅಕೌಂಟಿಗೆ ಹಾಕಲಾಗುತ್ತದೆ ಎಂದು ಅವರು ಸ್ಪಷ್ಟನೆ ನೀಡಿದರು.
ನಮ್ಮ ಸರ್ಕಾರದ ಅವಧಿಯಲ್ಲೆ ಅಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು 2000 ರೂಪಾಯಿ ಹೆಚ್ಚಿಸಿದೆವು. ಅದಾದ ನಂತರ ಯಾವುದೇ ಸರ್ಕಾರ ಗೌರವಧನ ಹೆಚ್ಚಿಸಿರಲಿಲ್ಲ. ಈಗ ಈ ಸಲದ ಬಜೆಟ್‌ನಲ್ಲಿ ಅಂಗವಾಡಿ ಕಾರ್ಯಕರ್ತೆಯರ ಗೌರವಧನ 1,000 ರೂಪಾಯಿ, ಅಂಗನವಾಡಿ ಸಹಾಯಕಿಯರ ಗೌರವಧನ 750 ರೂಪಾಯಿ ಹೆಚ್ಚಿಸಿದ್ದೇವೆ. ಅದನ್ನು ಏಪ್ರಿಲ್ 1 ರಿಂದ ಶುರುವಾಗುವ ಹೊಸ ಹಣಕಾಸು ವರ್ಷದಿಂದಲೇ ಜಾರಿಗೆ ತರುತ್ತೇವೆ ಎಂದು ಹೇಳಿದರು.