ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ವರದಿಯಂತೆ ವೇತನ ಜಾರಿಗೊಳಿಸಲಾಗಿತ್ತು. ಅಲ್ಲದೇ ಓಪಿಎಸ್ ಜಾರಿಗೂ ವರದಿ ನೀಡುವಂತೆ ಆದೇಶಿಸಿದೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ ಎನ್ನುವಂತೆ ಮುಂಬಡ್ತಿ ಕುರಿತಂತೆ ಮಹತ್ವದ ಆದೇಶವನ್ನು ಸರ್ಕಾರ ಹೊರಡಿಸಿದೆ.
ಈ ಕುರಿತಂತೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿ ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಗಳ ಕಲ್ಯಾಣ ಸಮಿತಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕೆಲವು ಸರ್ಕಾರಿ ಅಧಿಕಾರಿ/ ನೌಕರರುಗಳು ನಿಯಮಾನುಸಾರ ಮೀಸಲಾತಿಗೆ ನಿಗಧಿಪಡಿಸಿರುವ ಪ್ರಾತಿನಿಧ್ಯ ಮುಂಬಡ್ತಿಯಲ್ಲಿ ದೊರೆಯುವಂತೆ ಸದರಿ ಸಮಿತಿಗೆ ಮನವಿಗಳನ್ನು ಸಲ್ಲಿಸಿರುತ್ತಾರೆ. ಈ ಬಗ್ಗೆ ಸದರಿ ಸಮಿತಿಯು ದಿನಾಂಕ: 20-06-2024ರ ಸಭೆಯಲ್ಲಿ ಚರ್ಚಿಸಲಾಗಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧಿಕೃತ ಜ್ಞಾಪನ ಸಂಖ್ಯೆ: ಡಿಪಿಎಆರ್ /126/ ಎಸ್‌ಸಿಆರ್/82, ದಿನಾಂಕ:26.11.1982 ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮುಂಬಡ್ತಿಯಲ್ಲಿ 5 ವರ್ಷಗಳ ಅರ್ಹತಾದಾಯಕ ಸೇವೆ ಸಲ್ಲಿಸಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಕನಿಷ್ಟ 3 ವರ್ಷ ಸೇವೆ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳನ್ನು ಮುಂಬಡ್ತಿಗೆ ಪರಿಗಣಿಸಲು ಎಲ್ಲಾ ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ತಿದ್ದುಪಡಿ ಮಾಡುವ ಬಗ್ಗೆ ಸೂಚಿಸಲಾಗಿದೆ ಎಂದಿದೆ.
ಅದರಂತೆ, ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಚಿವಾಲಯ ಇವರು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಮಾಜ ಕಲ್ಯಾಣ ಇಲಾಖೆಗೆ ತಮ್ಮ ಅರೆ ಸರ್ಕಾರಿ ಪತ್ರ ಸಂಖ್ಯೆ: ಕವಿಸಸ/ಅಜಾ-ಅಪ/04/ಅರ್ಜಿ/2024, ದಿನಾಂಕ:12-08-2024ರಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧಿಕೃತ ಜ್ಞಾಪನ ಸಂಖ್ಯೆ: ಡಿಪಿಎಆರ್/126/ಎಸ್‌ಸಿಆರ್/82, ದಿನಾಂಕ:26.11.1982 ರನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮುಂಬಡ್ತಿಯಲ್ಲಿ 5 ವರ್ಷಗಳ ಅರ್ಹತಾದಾಯಕ ಸೇವೆ ಸಲ್ಲಿಸಿದ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಕನಿಷ್ಟ 3 ವರ್ಷ ಸೇವೆ ಸಲ್ಲಿಸಿರುವ ಅರ್ಹ ಯಾವ ಯಾವ ಅಭ್ಯರ್ಥಿಗಳನ್ನು ಮುಂಬಡ್ತಿಗೆ ಪರಿಗಣಿಸುವ ಬಗ್ಗೆ ಇಲಾಖೆಗಳು ತಮ್ಮ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಈವರೆವಿಗೂ ಅಳವಡಿಸಿಕೊಂಡಿರುವುದಿಲ್ಲವೋ ಆ ಇಲಾಖೆಗಳಿಗೆ ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಸಮಿತಿಯ ನಿರ್ದೇಶನ ಮೇರೆಗೆ ಕ್ರಮವಹಿಸಲು ತಿಳಿಸಿರುತ್ತಾರೆ.
ಎಲ್ಲಾ ಸರ್ಕಾರಿ ಇಲಾಖೆಗಳು ಮತ್ತು ಅದರ ಅಧೀನದಲ್ಲಿರುವ ಸರ್ಕಾರಿ ಸಂಸ್ಥೆಗಳು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಕೃತ ಜ್ಞಾಪನ ಸಂಖ್ಯೆ: ಡಿಪಿಎಆರ್/126/ಎಸ್ಸಿಆರ್/82, DO:26.11.1982 ರನ್ವಯ ಕ್ರಮವಹಿಸಬೇಕಾಗಿದೆ. ಸದರಿ ಜ್ಞಾಪನದ ವಿವರಗಳು ಈ ಕೆಳಕಂಡಂತೆ ಇದೆ.
Sub: Promotion- Reduction of period of qualifying service for recommendation of the High Level Committee for watching implementation of Government Order regarding reservation of vacancies for Scheduled Castes and Scheduled Tribes.
OFFICIAL MEMORANDUM
No. DPAR 126 SCR 82, dated 26-11-1982
The High Level Committee constituted to watch implementation of Government Orders regarding reservation of vacancies for Scheduled Castes and Scheduled Tribes in its meeting held on 18th September, 1982 recommended, inter alia, that the Government should consider the question of reducing the period of qualifying service prescribed in the Recruitment Rules of various Departments becoming eligible for promotion to higher levels in case where adequate number of Scheduled Castes and Scheduled Tribes candidate with the requisite qualifying service are not available to fill up reservation quota. The High Level Committee recommended the Departments should take action similar to the action taken by Public Works Department.
2. In the Public Works Department the Recruitment Rules relating to the post of Executive Engineers has been modified by the introduction of the following proviso. –
“Provided that if officers who have put in a minimum service
of five years are not available, an officer who has put in three years
of service may be considered for promotion”.
It is considered necessary that similar amendment should be introduced in other Departments also where it has not been possible to fulfill the reservation quota in promotion.
3. All Departments of Government are, therefore, requested to review the existing provision in the Cadre and Recruitment Rules relating to the qualifying service prescribed for promotion to higher posts where reservation for Scheduled Castes and Scheduled Tribes in promotional posts are available and in case where adequate number of Scheduled Castes/Scheduled Tribes candidate with the prescribed qualifying service are not available in the lower cadres, suitable provision as has been done in the case of the Public Works Department should be introduced to the extent necessary to fulfil the reserved quota in promotion. In any case, the minimum should be three years of service in the lower post.
4.Necessary action in this regard should please be taken urgently and the action taken intimated to Department of Personnel and Administrative Reforms for being reported to the High Level Committee at its next meeting.
ಮೇಲ್ಕಂಡ ಅಧಿಕೃತ ಜ್ಞಾಪನದನ್ವಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮುಂಬಡ್ತಿಯಲ್ಲಿ ನಿಗದಿಪಡಿಸಲಾಗಿರುವ ಮೀಸಲಾತಿಯನ್ವಯ 5 ವರ್ಷಗಳ ಅರ್ಹತಾದಾಯಕ ಸೇವೆ ಸಲ್ಲಿಸಿದವರು ಲಭ್ಯವಿಲ್ಲದಿದ್ದಲ್ಲಿ ಕನಿಷ್ಠ 3 ವರ್ಷಗಳ ಅರ್ಹತಾದಾಯಕ ಸೇವೆಯನ್ನು ಸಲ್ಲಿಸಿರುವ ಅರ್ಹತೆ ಇರುವವರನ್ನು ಮುಂಬಡ್ತಿಗೆ ಪರಿಗಣಿಸಲು ಸರ್ಕಾರಿ ಇಲಾಖೆಗಳು ಹಾಗೂ ಆಯಾ ಇಲಾಖೆಯ ಅಧೀನದ ನಿಗಮ/ಮಂಡಳಿ/ಸಂಘ-ಸಂಸ್ಥೆ/ ಆಯೋಗ/ ವಿಶ್ವವಿದ್ಯಾಲಯಗಳು/ ಇತರೆ ಸ್ಯಾಯುತ್ತ ಸಂಸ್ಥೆಗಳ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಈಗಾಗಲೇ ಅಳವಡಿಸಿಕೊಳ್ಳದಿದ್ದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳತಕ್ಕದ್ದು ಹಾಗೂ ಅಳವಡಿಸಿಕೊಂಡಿರುವ ಬಗ್ಗೆ ಮಾಹಿತಿಯನ್ನು ಆಯುಕ್ತರು, ಸಮಾಜ ಕಲ್ಯಾಣ ಇಲಾಖೆ, ಇವರಿಗೆ ವರದಿ ಮಾಡಲು ಕೋರಿದ್ದಾರೆ.
BREAKING: ಉಡುಪಿಯಲ್ಲಿ ಧಾರುಣ ಘಟನೆ: ಬೈಕ್ ಗೆ ಲಾರಿ ಡಿಕ್ಕಿಯಾಗಿ ತಂದೆ, ಮೂವರು ಮಕ್ಕಳು ದುರ್ಮರಣ
BREAKING : ತಿರುಪತಿ ಲಡ್ಡು ವಿವಾದ : ವಿಚಾರಣೆಯನ್ನು ಅ.3ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್! | Tirupati Laddu Row