Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

06/02/2026 10:18 PM

‘ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ’ : ಪ್ರಧಾನಿ ‘ಶೆಹಬಾಜ್ ಷರೀಫ್’ ಉದ್ಧಟತನ

06/02/2026 10:13 PM

ನಕಾರಾತ್ಮಕ ಜನರಿಂದ ದೂರವಿರಿ, ಪ್ರತಿದಿನ ಒಂದು ಗಂಟೆ ಪರಿಷ್ಕರಿಸಿ, 7 ಗಂಟೆ ನಿದ್ರೆ ಮಾಡಿ ; ‘ವಿದ್ಯಾರ್ಥಿಗಳಿಗೆ’ ಪ್ರಧಾನಿ ಮೋದಿ ವಿಶೇಷ ಸಲಹೆ

06/02/2026 10:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಕ್ರಮ –ಸಕ್ರಮ : ರಾಜ್ಯ ಸರ್ಕಾರದಿಂದ ರೈತರಿಗೆ ಮತ್ತೊಂದು ಗುಡ್ ನ್ಯೂಸ್
KARNATAKA

ಅಕ್ರಮ –ಸಕ್ರಮ : ರಾಜ್ಯ ಸರ್ಕಾರದಿಂದ ರೈತರಿಗೆ ಮತ್ತೊಂದು ಗುಡ್ ನ್ಯೂಸ್

By kannadanewsnow5731/08/2024 6:52 AM

ಬೆಂಗಳೂರು : ಸೆಪ್ಟೆಂಬರ್‌ 2 ರಿಂದ 1-5 ನಮೂನೆ ಪೋಡಿ ದುರಸ್ಥಿ ಕಾರ್ಯವನ್ನು ಅಭಿಯಾನ ಮಾದರಿಯಲ್ಲಿ ರಾಜ್ಯಾದ್ಯಂತ ಜಾರಿಗೊಳಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ದಶಕಗಳಿಂದ ಬಾಕಿ ಉಳಿದಿರುವ ಪೋಡಿ ದುರಸ್ಥಿ ಕಾರ್ಯಕ್ಕೆ ಚುರುಕು ನೀಡುವ ಸಂಬಂಧ ವಿಕಾಸಸೌಧದಲ್ಲಿ ಶುಕ್ರವಾರ ಎಲ್ಲಾ ಜಿಲ್ಲಾಧಿಕಾರಿಗಳು, ತಹಶೀಲ್ದಾರರು, ಕಂದಾಯ ನಿರೀಕ್ಷಕರೂ ಸೇರಿ ಇಲಾಖೆಯ ಎಲ್ಲಾ ಅಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಚಿವ ಕೃಷ್ಣ ಬೈರೇಗೌಡ ಅವರು ಸಭೆ ನಡೆಸಿದರು.

“ರಾಜ್ಯದಲ್ಲಿ ಸುಮಾರು 10 ಲಕ್ಷ ರೈತರಿಗೆ ಹತ್ತಾರು ವರ್ಷಗಳ ಹಿಂದೆ ಸರ್ಕಾರಿ ಜಮೀನು ಅಕ್ರಮ ಸಕ್ರಮದಡಿ ಮಂಜೂರಾಗಿದ್ದರೂ ಸಹ, ಪೋಡಿ ದುರಸ್ಥಿ ಆಗದೆ ಬಾಕಿ ಉಳಿದಿದೆ. ಲಕ್ಷಾಂತರ ರೈತರು ಅನೇಕ ವರ್ಷಗಳಿಂದ ಪ್ರಯತ್ನ ಮಾಡುತ್ತಿದ್ದರೂ ಸಹ, ಕೆಲವೇ ಕೆಲವರಿಗೆ ಮಾತ್ರ ಪೋಡಿ ದುರಸ್ಥಿಯಾಗಿದ್ದು ಬಹುತೇಕರಿಗೆ ಆಗಿರುವುದಿಲ್ಲ. ಇದರಿಂದಾಗಿ ಹಲವು ರೈತರು ತೀವ್ರ ತೊಂದರೆಗೆ ಸಿಲುಕಿದ್ದು, ಅಧಿಕಾರಿಗಳು ಸೆಪ್ಟೆಂಬರ್‌ 2 ರಿಂದ ಅಭಿಯಾನ ಮಾದರಿಯಲ್ಲಿ 1-5 ನಮೂನೆ ಪೋಡಿ ದುರಸ್ಥಿ ಕೆಲಸಕ್ಕೆ ಮುಂದಾಗಬೇಕು, ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು” ಎಂದು ಸೂಚಿಸಿದರು.

ಮುಂದುವರೆದು, “ಜಮೀನು ಮಂಜೂರಾಗಿದ್ದರೂ ಪೋಡಿಯಾಗಿ ಆರ್.ಟಿ.ಸಿ ಆಗದೆ ಇರುವುದರಿಂದ, ಅಂತಹ ರೈತರ ಪರಿಸ್ಥಿತಿ ತ್ರಿಶಂಕುವಿನಂತೆ ಆಗಿದೆ. ತಾಲ್ಲೂಕು ಕಛೇರಿ, ಸರ್ವೆ ಕಛೇರಿಗಳಿಗೆ ಅಲೆದು ಅಲೆದು ಪ್ರಯೋಜನವಾಗದೆ ತೀವ್ರ ತೊಂದರೆಗೆ ತುತ್ತಾಗಿದ್ದಾರೆ. ಈ ಬಗ್ಗೆ ಬಹಳ ವರ್ಷಗಳಿಂದ ಚರ್ಚೆಗಳು, ಪ್ರಯತ್ನಗಳು ಆಗುತ್ತಿದ್ದರೂ ಸರಿಯಾದ ಪರಿಹಾರ ದೊರೆತಿರುವುದಿಲ್ಲ.

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಈ ಸಮಸ್ಯೆಯನ್ನು ಪರಿಹರಿಸಲು, ಸೂಕ್ತ ಪರಿಹಾರ ಕ್ರಮಕೈಗೊಳ್ಳಲು ಸೂಚಿಸಿದ ಹಿನ್ನೆಲೆಯಲ್ಲಿ, ಕಂದಾಯ ಇಲಾಖೆ ದುರಸ್ಥಿಗೆ ಬಾಕಿಯಿರುವ ಪ್ರಕರಣಗಳ ವಿಲೆಗೆ ವ್ಯವಸ್ಥಿತವಾದ ಯೋಜನೆ ಆರಂಭಿಸಿದೆ” ಎಂದು ಮಾಹಿತಿ ನೀಡಿದರು.

“ಈ ಹಿಂದೆ ಪೋಡಿ ದುರಸ್ಥಿ ಮಾಡಲು ಅವಶ್ಯವಿರುವ 1-5 ನಮೂನೆಗಳನ್ನು ತಯಾರಿಸಲು ಕಾಗದದ ಕಡತಗಳನ್ನು ತಯಾರಿಸಲು ಪ್ರಯತ್ನಿಸಲಾಗಿತ್ತು. ಆದರೆ, ಆ ಕೆಲಸವೂ ಸಮರ್ಪಕವಾಗಿ ಆಗಿರುವುದಿಲ್ಲ. ಆದ ಕೆಲವು ಕಡತಗಳು ಕಾಣೆಯಾಗಿವೆ ಅಥವಾ ಕೈಗೆ ಸಿಗುವುದಿಲ್ಲ. ಇದರಿಂದ ಕಡತಗಳು ಇದ್ದರೂ ಅನೇಕರಿಗೆ ಅದರ ಪ್ರಯೋಜನ ಸಿಗುತ್ತಿಲ್ಲ. ಈ ಸಮಸ್ಯೆಗಳಿಂದ ಕಂದಾಯ ಇಲಾಖೆ ಪೋಡಿ ದುರಸ್ಥಿ 1-5 ಕಡತಗಳನ್ನು ಕಂಪ್ಯೂಟರ್ಗಳನ್ನು ಬಳಸಿ ಗಣಕೀಕರಿಸಿದ (ಡಿಜಿಟಲ್‌) 1-5 ಕಡತಗಳನ್ನು ತಯಾರಿಸಲು ಆರಂಭಿಸಿದೆ.

ಡಿಜಿಟಲ್‌ ಆ್ಯಪ್ ಮುಖಾಂತರ ಮಾಡುವುದರಿಂದ ಸರಳ, ವೇಗವಾಗಿ ಕಡತಗಳನ್ನು ತಯಾರಿಸಬಹುದು. ಯಾರ ಬಳಿ ವಿಳಂಬವಾಗಿದೆ ಎಂಬುದು ಪಾರದರ್ಶಕವಿರುವುದರಿಂದ, ವೇಗವಾಗಿ ಕೆಲಸವಾಗಬಹುದು. ಮೂಲ ಮಂಜೂರಿ ದಾಖಲೆಗಳನ್ನು ಸುರಕ್ಷಿತವಾಗಿಡಬಹುದು. ಮುಂದೆ ತಿದ್ದಲು, ನಕಲು ಮಾಡಲು ಸಾಧ್ಯವಿಲ್ಲ. ಒಬ್ಬ ರೈತನಿಗೆ ತಯಾರು ಮಾಡಿದ 1-5 (ನಮೂನೆ)ಕಡತ, ಆ ಸರ್ವೆ ನಂಬರಿನ ಎಲ್ಲಾ ರೈತರಿಗೂ ಅದೇ ಕಡತ ಅನುಕೂಲವಾಗುತ್ತದೆ. 1-5(ನಮೂನೆ)ಕಡತ ಕಾಣೆಯಾಗಲು ಅಥವಾ ಕಳೆದು ಹೋಗಲು ಸಾಧ್ಯವಿಲ್ಲ” ಎಂದು ತಿಳಿಸಿದರು.

ಮುಂದುವರೆದು, “ಈ ಅಭಿಯಾನವನ್ನು ಸೆಪ್ಟೆಂಬರ್‌ 02 ರಿಂದ ರಾಜ್ಯಾದ್ಯಂತ ಆರಂಭಿಸುತ್ತಿದ್ದೇವೆ. ರಾಜ್ಯದಲ್ಲಿ ಎಲ್ಲೆಲ್ಲಿ ರೈತರಿಗೆ ಮಂಜೂರಾಗಿರುವ ಜಮೀನುಗಳ ದುರಸ್ಥಿಯಾಗದೆ ಬಾಕಿ ಉಳಿದಿದೆ ಅಂತಹ ಪ್ರತಿಯೊಂದು ಕಡೆಯಲ್ಲೂ ಡಿಜಿಟಲಾಗಿ 1-5(ನಮೂನೆ)ಕಡತ ಸೆಪ್ಟೆಂಬರ್‌ 02 ರಿಂದ ತಯಾರಿ ಮಾಡಲಾಗುವುದು. 1-5(ನಮೂನೆ)ಕಡತ ಎಲ್ಲಾ ಸರ್ಕಾರಿ ಜಮೀನಿಗೆ (ರೈತರಿಗೆ ಮಂಜೂರಾಗಿರುವ), ರೈತರ ಅರ್ಜಿಗೆ ಕಾಯದೆ ಕಂದಾಯ ಇಲಾಖೆ ಸ್ವಯಂ ಕಡತಗಳನ್ನು ತಯಾರಿಸಲಿದೆ.

1-5ನಮೂನೆ ಪ್ರಕಾರ ತಯಾರಾದ ಕಡತಗಳನ್ನು ಮುಂದೆ 6-10 ಮಾಡಿ ಅವರಿಗೆ ಸರ್ವೆಯೊಂದಿಗೆ ದುರಸ್ಥಿ ಮಾಡಿದ ನಂತರ ಹೊಸ ಸರ್ವೆ ನಂಬರ್ ಪಹಣಿಯೊಂದಿಗೆ ಸಂಪೂರ್ಣ ದಾಖಲೆ ಮಾಡಿಕೊಡಲಾಗುವುದು. ಇದನ್ನು ಅಭಿಯಾನ ಮಾದರಿಯಲ್ಲಿ ಅನುಷ್ಟಾನ ಮಾಡಲಾಗುವುದು. ಇದೊಂದು ದೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಿ ರೈತರಿಗೆ ನೆಮ್ಮದಿಯನ್ನು ನೀಡುವ ಅಭಿಯಾನವಾಗಲಿದೆ. ಹೀಗಾಗಿ ಎಲ್ಲಾ ಅಧಿಕಾರಿಗಳೂ ಈ ಯೋಜನೆ ಯಶಸ್ವಿಯಾಗಲು ಸಹಕರಿಸಬೇಕಿದೆ. ಆ ಮೂಲಕ ರೈತರ ದೀರ್ಘ ಕಾಲದ ಸಮಸ್ಯೆಗಳನ್ನು ಪರಿಹರಿಸಲು ತಮ್ಮಿಂದಾದ ಸಹಕಾರ ನೀಡಬೇಕಿದೆ” ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಮನವಿ ಮಾಡಿದರು.

Another good news for farmers from the state government ಅಕ್ರಮ –ಸಕ್ರಮ : ರಾಜ್ಯ ಸರ್ಕಾರದಿಂದ ರೈತರಿಗೆ ಮತ್ತೊಂದು ಗುಡ್ ನ್ಯೂಸ್
Share. Facebook Twitter LinkedIn WhatsApp Email

Related Posts

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

06/02/2026 10:18 PM3 Mins Read

ಟಿ20 ವಿಶ್ವಕಪ್: ಭಾರತ ತಂಡದಿಂದ ಹರ್ಷಿತ್ ರಾಣಾ ಔಟ್, ಮೊಹಮ್ಮದ್ ಸಿರಾಜ್ ಇನ್

06/02/2026 9:38 PM2 Mins Read

ಋಷಿಮುನಿಗಳೇ ನಮ್ಮ ದೇಶದ ವಿಜ್ಞಾನಿಗಳು: ಇಸ್ರೋ ಡೆಪ್ಯುಟಿ ಡೈರೆಕ್ಟರ್ ಡಾ.ಎಸ್.ವೆಂಕಟೇಶ್ವರ ಶರ್ಮಾ

06/02/2026 9:13 PM2 Mins Read
Recent News

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

06/02/2026 10:18 PM

‘ಕಾಶ್ಮೀರ ಪಾಕಿಸ್ತಾನದ ಭಾಗವಾಗಲಿದೆ’ : ಪ್ರಧಾನಿ ‘ಶೆಹಬಾಜ್ ಷರೀಫ್’ ಉದ್ಧಟತನ

06/02/2026 10:13 PM

ನಕಾರಾತ್ಮಕ ಜನರಿಂದ ದೂರವಿರಿ, ಪ್ರತಿದಿನ ಒಂದು ಗಂಟೆ ಪರಿಷ್ಕರಿಸಿ, 7 ಗಂಟೆ ನಿದ್ರೆ ಮಾಡಿ ; ‘ವಿದ್ಯಾರ್ಥಿಗಳಿಗೆ’ ಪ್ರಧಾನಿ ಮೋದಿ ವಿಶೇಷ ಸಲಹೆ

06/02/2026 10:09 PM

BREAKING : “ಹಲವು ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ” : ವಿಶ್ವಕಪ್ ಗೆಲುವಿನ ಕುರಿತು ಅಂಡರ್-19 ಕ್ರಿಕೆಟ್ ತಂಡಕ್ಕೆ ‘ಪ್ರಧಾನಿ ಮೋದಿ’ ಸಂದೇಶ

06/02/2026 9:41 PM
State News
KARNATAKA

ಹೆಲಿಕಾಪ್ಟರ್, ವಿಮಾನ ಪ್ರಯಾಣಕ್ಕೂ ವ್ಯತ್ಯಾಸವೇನು? ಸಾಗರದ ಜನತೆ ಈ ಸುದ್ದಿ ಓದಿ!

By kannadanewsnow0906/02/2026 10:18 PM KARNATAKA 3 Mins Read

ಶಿವಮೊಗ್ಗ: ಇಂದಿನಿಂದ ಸಾಗರದ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹೆಲಿ ಟೂರಿಸಂ ಆರಂಭಗೊಂಡಿದೆ. ಇಲ್ಲಿದ ನಿಗದಿ ಪಡಿಸಿರುವಂತ ದುಡ್ಡಿಗಿಂತ…

ಟಿ20 ವಿಶ್ವಕಪ್: ಭಾರತ ತಂಡದಿಂದ ಹರ್ಷಿತ್ ರಾಣಾ ಔಟ್, ಮೊಹಮ್ಮದ್ ಸಿರಾಜ್ ಇನ್

06/02/2026 9:38 PM

ಋಷಿಮುನಿಗಳೇ ನಮ್ಮ ದೇಶದ ವಿಜ್ಞಾನಿಗಳು: ಇಸ್ರೋ ಡೆಪ್ಯುಟಿ ಡೈರೆಕ್ಟರ್ ಡಾ.ಎಸ್.ವೆಂಕಟೇಶ್ವರ ಶರ್ಮಾ

06/02/2026 9:13 PM

ಇದು ಕನ್ನಡ ನ್ಯೂಸ್ ನೌ ಸುದ್ದಿ ಎಫೆಕ್ಟ್: ರೀಲ್ಸ್ ನೋಡುತ್ತ KSRTC ಬಸ್ ಚಾಲನೆ ಮಾಡಿದ ಚಾಲಕ ಸಸ್ಪೆಂಡ್

06/02/2026 9:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.