ಬೆಂಗಳೂರು: ಮಹಾರಾಷ್ಟ್ರ ಸರ್ಕಾರದಿಂದ ಗಡಿ ಭಾಗದ ಕನ್ನಡ ಮಾಧ್ಯಮ ಶಾಲೆಗಳಿಗೆ ಮರಾಠಿ ಶಿಕ್ಷಕರನ್ನು ನೇಮಕ ಮಾಡಿ, ನಿಯಮ ಉಲ್ಲಂಘಿಸಿ, ಕರ್ನಾಟಕಕ್ಕೆ ಮೋಸ ಮಾಡುತ್ತಿರೋದು ಬೆಳಕಿಗೆ ಬಂದಿದೆ. ಇದನ್ನು ಪ್ರಶ್ನಿಸಿರುವಂತ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದಂತ ಸೋಮಣ್ಣ ಬೇವಿನಮರದ  ಅವರು ಸಿಎಂ ಸಿದ್ಧರಾಮಯ್ಯಗೆ ಪತ್ರ ಬರೆದು ಕೂಡಲೇ ಸಮಸ್ಯೆ ಸರಿ ಪಡಿಸುವಂತೆ ಒತ್ತಾಯಿಸಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಇಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದಂತ ಸೋಮಣ್ಣ ಬೇವಿನಮರದ ಅವರು ಪತ್ರ ಬರೆದಿದ್ದಾರೆ. ಅದರಲ್ಲಿ ಉಲ್ಲೇಖ (1) ರಲ್ಲಿನ ಆದೇಶಗಳಲ್ಲಿ ಕ್ರಮವಾಗಿ ಪ್ರಾಥಮಿಕ ಶಿಕ್ಷಣ ವಿಭಾಗ, ಜಿಲ್ಲಾಪಂಚಾಯತ್ ಸಾಂಗ್ಲಿ ಹಾಗೂ ಸೊಲ್ಲಾಪುರ ಇವರಿಂದ ಜತ್ತ ಮತ್ತು ಅಕ್ಕಲಕೋಟೆ ತಾಲ್ಲೂಕಿನ ಕನ್ನಡ ಮಾಧ್ಯಮ ಶಾಲೆಗಳಿಗೆ ಕ್ರಮವಾಗಿ 7 ಹಾಗೂ 8 ಸಂಖ್ಯೆಯ ಕನ್ನಡ ಬಾಗದ ಶಿಕ್ಷಕರನ್ನು ನೇಮಕಾತಿ ಮಾಡಿ ಆದೇಶ ಹೊರಡಿಸಲಾಗಿರುತ್ತದೆ ಎಂದಿದ್ದಾರೆ.

ಈ ಅನ್ಯಾಯವನ್ನು ವಿರೋಧಿಸಿ ಅಲ್ಲಿನ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸಿರುತ್ತಾರೆ. ಇದೇ ರೀತಿ ಆದರ್ಶ ಕನ್ನಡ ಬಳಗ(ರಿ), ಮಹಾರಾಷ್ಟ್ರ ರವರು ಈ ಕಛೇರಿಯ ಅಧ್ಯಕ್ಷರಿಗೆ ಮನವಿ ಸಲ್ಲಿಸಿ, ಈ ಸಮಸ್ಯೆಯನ್ನು ಬಗೆಹರಿಸಲು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸದಸ್ಯರುಗಳನ್ನು ಒಳಗೊಂಡ ನಿಯೋಗವನ್ನು ರಚಿಸಿ ಮಹಾರಾಷ್ಟ್ರಕ್ಕೆ ಕಳುಹಿಸಿ ವಸ್ತುನಿಷ್ಟವಾದ ಸಮಗ್ರವಾದ ವರದಿಯನ್ನು ಪಡೆದುಕೊಳ್ಳಲು ವಿನಂತಿಸಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಮತ್ತು ಸೊಲ್ಲಾಪುರ ಜಿಲ್ಲೆಗಳಲ್ಲಿ ಸುಮಾರು 40 ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯ ಮಕ್ಕಳು ಕನ್ನಡ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದು, ಈ ಪ್ರದೇಶಗಳಲ್ಲಿ ಸುಮಾರು 300 ಕ್ಕಿಂತಲು ಹೆಚ್ಚಿನ ಕನ್ನಡ ಶಾಲೆಗಳವೆ. ಈ ಶಾಲೆಗಳಿಗೆ ಕೆಲವು ವರ್ಷಗಳಿಂದ ಕನ್ನಡ ಶಿಕ್ಷಕರನ್ನು ನೇಮಕಾತಿ ಮಾಡಿರುವುದಿಲ್ಲ. ಈಗ ಮಹಾರಾಷ್ಟ್ರ ಸರ್ಕಾರವು ಏಕಾಏಕಿ ಸುಮಾರು 15 ಕನ್ನಡ ಬಾರದ ಶಿಕ್ಷಕರನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ನೇಮಕ ಮಾಡಿರುತ್ತಾರೆ. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಾದ ಸಾಂಗ್ಲಿ ಹಾಗೂ ಸೊಲ್ಲಾಪುರ ಜಿಲ್ಲೆಯ ದಕ್ಷಿಣ ಭಾಗ ಜತ್ತ, ಅಕ್ಕಲಕೋಟೆ ತಾಲ್ಲೂಕುಗಳು ಕಡ್ಡಾಯ ಮರಾಠಿ ಭಾಷೆ ಕಲಕೆಯಿಂದ ವಿನಾಯಿತಿ ಪಡೆದಿರುತ್ತವೆ.

“ಭಾರತ ಸಂವಿಧಾನ ಅನುಚ್ಛೇದ 347, 350 ಮತ್ತು 350ಎ ಪ್ರಕಾರ ಭಾಷಾ ಅಲ್ಪಸಂಖ್ಯಾತರ ಪ್ರದೇಶಗಳಲ್ಲಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ತಮ್ಮ ಮಾತ್ರ ಭಾಷೆಯನ್ನು ಕಅಯುವುದನ್ನು ನಿರ್ಬಂಧಿಸುವಂತಿಲ್ಲ ಅಥವಾ ಮಾತೃ ಭಾಷೆ ಹೊರತು ಅನ್ಯ ಭಾಷೆಯನ್ನು ಕಲಿಯಲು ಒತ್ತಾಯಿಸುವಂತಿಲ್ಲ”.

ಉಲ್ಲೇಖ (5) ರಲ್ಲಿನ ಭಾರತ ಸರ್ಕಾರದ ಭಾಷಾ ಅಲ್ಪಸಂಖ್ಯಾತ ಸಚಿವಾಲಯವು ಮಹಾರಾಷ್ಟ್ರ ಸರ್ಕಾರಕ್ಕೆ ಬರೆದಿರುವ ಪತ್ರ ದಿನಾಂಕ:09-09-2021 ರ ಪತ್ರದಲ್ಲಿ ಅಪರ ಮುಖ್ಯಕಾರ್ಯದರ್ಶಿಗಳು, ಮಹಾರಾಷ್ಟ್ರ ಸರ್ಕಾರ ಇವರಿಗೆ ಈ ಕೆಳಕಂಡಂತೆ ವಿವರಣೆಯನ್ನು ನೀಡಿರುತ್ತಾರೆ. “I am to bring to
your kind notice that as per the Constitutional and Consensual Safeguards for Linguistic Minorities, who constitute more than 15% of the local population, the State/Local Government is required to provide Education, important, Government Rules, Notification, Orders, Election Documents, Name/Sign/Display Boards etc, in the minority languages along with the Official Language. Action taken in this regard for the benefit of the Kannada linguistic minorities in the Maharashtra-Karnataka border districts may kindly be informed to this office at the earliest for placing before the Commissioner for Linguistic Minorities”.

ಉಲ್ಲೇಖ (2) ರಲ್ಲಿ ಕೇರಳ ಸರ್ಕಾರದ ಶಿಕ್ಷಣ ಇಲಾಖೆಯ ಅಧಿಕೃತ ಜ್ಞಾಪನ ಪತ್ರದಲ್ಲಿ ತಿಳಿಸಿರುವಂತೆ, ಕಾಸರಗೋಡು ಜಿಲ್ಲೆಯಲ್ಲಿ ಮಲೆಯಾಳಿ ಭಾಷೆಯನ್ನು ಹೊರತುಪಡಿಸಿ ಕೊಂಕಣಿ, ಮರಾಠಿ, ತುಳು ಹಾಗೂ ಇತರೆ ಭಾಷೆಯನ್ನು ಮಾತನಾಡುತ್ತಿದ್ದರೂ ಸಹ ಇವರನ್ನು ಆ ಪ್ರದೇಶದ ಕನ್ನಡ ಭಾಷಿಕರೆಂದೇ
ಪರಿಗಣಿಸಬೇಕೆಂದು ಈ ರೀತಿ ತಿಳಿಸಿರುತ್ತದೆ. “Government wish to clarify that all the people in Kasaragod Taluk except Malayalees will be reckoned as kannadigas for purpose of extending safeguards available to the Linguistic Minorities, irrespective of their household languages”.

ಉಲ್ಲೇಖ (3)ರ ಕೇರಳ ಸರ್ಕಾರದ ಶಿಕ್ಷಣ ಇಲಾಖೆಯ ಆದೇಶದ ದಿನಾಂಕ:30-09-2016 ರಲ್ಲಿ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಾದ ಕೇರಳ ರಾಜ್ಯದ ಹೊಸದುರ್ಗ, ಕನಾನ್‌ಗಾಡ್ ಇತರೆ ಪ್ರದೇಶಗಳಲ್ಲಿನ ಸರ್ಕಾರಿ ಕನ್ನಡ ಶಾಲೆಗಳಿಗೆ ಕನ್ನಡ ಭಾಷಿಕರಲ್ಲದ ಶಿಕ್ಷಕರನ್ನು ನೇಮಕ ಮಾಡಿದರೆ ವಿದ್ಯಾರ್ಥಿ ಮತ್ತು ಶಿಕ್ಷಕರ ಭಾಷಾ ಸಮನ್ವಯತೆಗೆ ತೊಂದರೆಯಾಗಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯಾಗುವುದನ್ನು ತಿಳಿದು, ಕೆಳಕಂಡ ಆದೇಶ ಹೊರಡಿಸಿರುತ್ತದೆ. “Government after having examined the matter in detail and are pleased to order that for appointment as High School Assistant (core subjects) in Kannada/Tamil medium schools, condidates should have the following qualifications along with the B.Ed Degree in the concerned subject conferred or recognized by the Universities in Kerala”.
1. A pass in SSLC/Plus Two/Pre-Degree with Kannada/Tamil as I or II Language.
2. A pass in Degree or Post Graducation in Kannada/Tamil Language.
3. In the absence of the qualifications referred in (1) & (2) above, its equivalent shall also be considered.
ಶ್ರೀ ಸುಬ್ರಮಣ್ಯ ಹಿರಿಯ ಪತ್ರಿಕಾ ಸಂಪಾದಕರ ಅರ್ಜಿ (Kerala Govt, is appointing teachers who don’t know Kannada to Kannada medium Schools). ಸಂಬಂಧಿಸಿದಂತೆ, ಉಲ್ಲೇಖ (4) ದಿ:19-07-2021 ರಲ್ಲಿ ಭಾರತ ಸರ್ಕಾರದ ಭಾಷಾ ಅಲ್ಪಸಂಖ್ಯಾತ ಸಚಿವಾಲಯವು ಕನ್ನಡ ಭಾಷಾ ಪ್ರದೇಶದಲ್ಲಿ ಅನ್ಯ ಭಾಷೆಯ ಶಿಕ್ಷಕರನ್ನು ನೇಮಕ ಮಾಡಿರುವುದನ್ನು ಆಕ್ಷೇಪಿಸಿ ಕೇರಳ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಅಲ್ಪಸಂಖ್ಯಾತ ಇಲಾಖೆಯ ಸಮನ್ವಯ ಅಧಿಕಾರಿಯಿಂದ ವಿವರಣೆ ಕೇಳಿ ಈ ಕೆಳಕಂಡಂತೆ ಸೂಚನೆ ನೀಡಿರುತ್ತಾರೆ.

I, therefore request you to kindly look into the grivances as putforth by the Petitioner and request you to send the action taken to this at the earliest for placing before the Commissioner.

ಉಲ್ಲೇಖ (6) ರ ಪತ್ರ ದಿನಾಂಕ:17-01-2022 ಕೇರಳ ಸರ್ಕಾರವು ಭಾರತ ಸರ್ಕಾರದ ಭಾಷಾ ಅಲ್ಪಸಂಖ್ಯಾತ ಸಚಿವಾಲಯಕ್ಕೆ ಕಾಸರಗೋಡು ಭಾಷಾ ಅಲ್ಪಸಂಖ್ಯಾತ ಕನ್ನಡಿಗರ ಕಳಕಳಿಯ ಬಗ್ಗೆ ಬರೆದಿರುವ ಪತ್ರದಲ್ಲಿ ನೀಡಿರುವ ವಿವರಣೆಯಂತೆ “The District Collector, Kasaragod has also reported that there is a shortage of teachers who are proficient in Kannada Language, in Kannada medium school in the areas bordering Karnataka. It is informed that the Deputy Director of Education has reported that appointment of teachers who do not know Kannada are strictly avoided in such areas”.

ಅಲ್ಲದೇ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾದ ನಾನು ಹಾಗೂ ಕಾರ್ಯದರ್ಶಿ, ಗಡಿ ಪ್ರಾಧಿಕಾರ ಇವರೊಂದಿಗೆ ಸೂಕ್ತ ನಿಯೋಗವನ್ನು ಮಹಾರಾಷ್ಟ್ರದ ಗಡಿ ಭಾಗದ ಕನ್ನಡ ಶಾಲೆಗಳಿಗೆ ತೆಗೆದುಕೊಂಡು ಹೋಗಿ ಅಲ್ಲಿನ ವಸ್ತುನಿಷ್ಟ ಸಮಸ್ಯೆಗಳ ವರದಿಯನ್ನು ತಮಗೆ ಶೀಘ್ರದಲ್ಲೇ ಸಲ್ಲಿಸುತ್ತೇವೆ.

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಈ ಹಿಂದೆ ಕೇರಳ ರಾಜ್ಯದಲ್ಲಿ ಕೇರಳ ಸರ್ಕಾರ ಮಲೆಯಾಗಿ ಶಿಕ್ಷಕರನ್ನು ಕನ್ನಡ ಮಾಧ್ಯಮ ಶಾಲೆಗೆ ನೇಮಕಾತಿ ಮಾಡಿರುವ ಬಗ್ಗೆ ನಡೆದ ಇಂತಹದೇ ಪ್ರಕರಣದಲ್ಲಿ ಸೂಕ್ತ ಕ್ರಮವಹಿಸಲು ಕೇರಳ ಸರ್ಕಾರದ ಶಿಕ್ಷಣ ಸಚಿವರನ್ನು ಹಾಗೂ ಕೇರಳದ ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಮನವಿ ಮಾಡಿದ್ದಲ್ಲದೇ, ಕಾಸರಗೋಡು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ, ಮಲೆಯಾಳಿ ಶಿಕ್ಷಕರನ್ನು ನೇಮಕಾತಿ ಮಾಡಿರುವ ಬಗ್ಗೆ ಆಕ್ಷೇಪಿಸಿ ಪತ್ರ ಬರೆಯಲಾಗಿರುತ್ತದೆ ಹಾಗೂ ಅದರಂತೆ, vodabaan fede Bane’s des Joa:WP (C) No.21835 of 2023, Dated:21-08-2023 ರಲ್ಲಿ ಹೈಕೋರ್ಟ್ ನಿರ್ದೇಶನದ ಮೇರೆಗೆ ಕನ್ನಡ ಬಾರದ ಸಮಾಜ, ವಿಜ್ಞಾನ ಪಾಠ ಮಾಡುವ ಮಲೆಯಾಳಿ ಭಾಷಾ ಶಿಕ್ಷಕಿಯನ್ನು ಕೂಡಲೇ ಕನ್ನಡ ಮಾಧ್ಯಮ ಶಾಲೆಯಿಂದ ತೆರವುಗೊಳಿಸಿ ಆದೇಶಿಸಿರುತ್ತಾರೆ. ಈ ಬಗ್ಗೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಕೂಡ ಸೂಕ್ತ ಕ್ರಮ ಜರುಗಿಸಲು ಅನೇಕ ಪ್ರಯತ್ನಗಳನ್ನು ಮಾಡಿರುತ್ತದೆ. ಈ ಪ್ರಯತ್ನದ ಫಲವಾಗಿ ಕನ್ನಡ ಭಾಷೆಗೊತ್ತಿರುವ ಶಿಕ್ಷಕರನ್ನೇ ನೇಮಕ ಮಾಡುವಂತೆ ಕೇರಳ ಹೈಕೋರ್ಟ್ ಆದೇಶ ನೀಡಿರುತ್ತದೆ.

ಅಲ್ಲದೇ, ಭಾರತ ಸಂವಿಧಾನ ಅನುಚ್ಛೇದ 347, 350 ಮತ್ತು 350ಎ ಪ್ರಕಾರ ಭಾಷಾ ಅಲ್ಪಸಂಖ್ಯಾತರ ಪ್ರದೇಶಗಳಲ್ಲಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಭಾಷಾ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ತಮ್ಮ ಮಾತೃ ಭಾಷೆಯನ್ನು ಕಲಿಯುವುದನ್ನು ನಿರ್ಬಂಧಿಸುವಂತಿಲ್ಲ ಅಥವಾ ಮಾತೃ ಭಾಷೆ ಹೊರತು ಅನ್ಯ ಭಾಷೆಯನ್ನು ಕಲಿಯಲು ಒತ್ತಾಯಿಸುವಂತಿಲ್ಲವೆಂದು ಇರುವುದರಿಂದ, ಮಹಾರಾಷ್ಟ್ರ ರಾಜ್ಯದ ಶೇ.70 ಕ್ಕಿಂತ ಹೆಚ್ಚು ಕನ್ನಡಿಗರು ವಾಸವಿರುವ ಜತ್ತ, ಅಕ್ಕಲಕೋಟೆ, ಮುಂಬೈನ ಕೆಲವು ಕನ್ನಡ ಮಾಧ್ಯಮ ಶಾಲೆಗಳು ಮತ್ತು ದಕ್ಷಿಣ ಸೊಲ್ಲಾಪುರ ತಾಲ್ಲೂಕುಗಳಲ್ಲಿನ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಮಾತೃಭಾಷೆಯಾಗಿ ಮಾತನಾಡುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕಡ್ಡಾಯವಾಗಿ ಕನ್ನಡ ಭಾಷಾ ಮಾಧ್ಯಮದಲ್ಲಿ ಪಾಠ ಮಾಡುವ ಶಿಕ್ಷಕರನ್ನೇ ನೇಮಕಾತಿ ಮಾಡಿಕೊಂಡು ಅಂತಹ ಶಿಕ್ಷಕರನ್ನೇ ಕನ್ನಡ ಮಾಧ್ಯಮ ಶಾಲೆಗಳಿಗೆ ನಿಯೋಜಿಸಲು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಕ್ರಮ ತೆಗೆದುಕೊಳ್ಳಲು ಕೋರಿದೆ ಹಾಗೂ ಉಲ್ಲೇಖ (1) ರಲ್ಲಿನ ಕನ್ನಡ ಬಾರದ ಶಿಕ್ಷಕರನ್ನು ನೇಮಕಾತಿ ಮಾಡಿರುವ ಆದೇಶವನ್ನು ಹಿಂಪಡೆಯಲು ಮಹಾರಾಷ್ಟ್ರ ಸರ್ಕಾರಕ್ಕೆ ಕರ್ನಾಟಕ ಸರ್ಕಾರದಿಂದ ಒತ್ತಾಯಿಸಲು ಮನವಿ ಮಾಡಿದ್ದಾರೆ.

ಜನಸಾಮಾನ್ಯರಿಗೆ ʻದುಬಾರಿ ದುನಿಯಾʼ : ದವಸ, ಧಾನ್ಯಗಳು ಸೇರಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ |

ಎಲ್ಲಾ ಡಿಪ್ಲೋಮಾ ಸೆಮಿಸ್ಟರ್ ಪರೀಕ್ಷೆ ಡಿಪ್ಲೋಮಾ ಫಲಿತಾಂಶ ಪ್ರಕಟ, ಈ ರೀತಿ ರಿಸಲ್ಟ್‌ ನೋಡಿ

Share.
Exit mobile version