ಶಿವಮೊಗ್ಗ: ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ನರೇಂದ್ರ ಮೋದಿ ಆರೋಪಗಳ ಸುರಿಮಳೆಗೈದಿದ್ದಾರೆ. ಇಲ್ಲಿ ಲೂಟಿ ಮಾಡಿದ ಹಣವನ್ನು ದೆಹಲಿಗೆ ಕಳುಹಿಸಿಕೊಡಲಾಗುತ್ತದೆ. ಹಾಗಾಗಿ, ಇಲ್ಲಿ ಜನರ ಅಭಿವೃದ್ಧಿಗೆ ದುಡ್ಡು ಇಲ್ಲ. ದೆಹಲಿ ಕಾಂಗ್ರೆಸ್ ವರಿಷ್ಠರಿಗೆ ನೀಡಲು ಎಟಿಎಂ ಆಗಿದೆ. ಇಲ್ಲಿ ಹಲವರು ಸಿಎಂಗಳಿದ್ದು, ದಿಲ್ಲಿಗೆ ಹಣ ತೆಗೆದುಕೊಂಡು ಹೋಗಲು ಕಲೆಕ್ಷನ್ ಮಿನಿಸ್ಟರ್ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಶಿವಮೊಗ್ಗದ ಫ್ರೀಡಂಪಾರ್ಕ್ ನ ಅಲ್ಲಮಪ್ರಭು ಮೈದಾನದಲ್ಲಿ ಏರ್ಪಡಿಸಿದ್ದ ಬಿಜೆಪಿ ವಿಕಸಿತ ಸಂಕಲ್ಪ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದು ಭ್ರಷ್ಟಾಚಾರದಲ್ಲಿ ಮುಳುಗಿದ್ದವರು ಒಂದಾಗಿದ್ದಾರೆ. ಜೂನ್ 4ರಂದು ಎನ್ ಡಿಎ ನಾಲ್ಕು ನೂರು ಸ್ಥಾನಗಳಲ್ಲಿ ಗೆಲ್ಲಿಲಿದೆ. ಕಾಂಗ್ರೆಸ್ ನಲ್ಲಿ ವಿಕಾಸದ ಅಜೆಂಡಾ ಇಲ್ಲ. ಸುಳ್ಳು ಹೇಳುವುದೇ ದೊಡ್ಡ ಅಜೆಂಡಾ ಎಂದು ದೂರಿದರು.
ಸುಳ್ಳು, ದೊಡ್ಡ ಸುಳ್ಳು, ಹಲವು ಬಾರಿ ಸುಳ್ಳು, ಬೆಳಿಗ್ಗೆ ಸಂಜೆಯೂ ಸುಳ್ಳೇ ಸುಳ್ಳ, ತಾವು ಹೇಳಿದ ಸುಳ್ಳನ್ನು ನಂಬಿಸಲು ಮತ್ತೊಂದು ಸುಳ್ಳು, ತಾವು ಮಾಡಿದ ತಪ್ಪು ಬೇರೆಯವರ ಮೇಲೆ ಹೇರಲು ಮತ್ತೊಂದು ಸುಳ್ಳು. ಹಾಗಾಗಿ ಸುಳ್ಳುಗಳ ಸರದಾರರು ಕಾಂಗ್ರೆಸ್ ನವರು. ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಇದೇ ಮಾಡಿತ್ತು. ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸುಳ್ಳುಗಳ ಮೇಲೆ ಸುಳ್ಳು ಹೇಳುತ್ತಿದೆ. ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ. ಮೋದಿ ಮೇಲೂ ಆರೋಪ ಮಾಡುತ್ತಿದೆ. ಮತ್ತೊಂದು ಪಕ್ಷದ ಮೇಲೆ ಟೀಕಾಪ್ರಹಾರ ನಡೆಸುತ್ತಾರೆ. ಕಾಂಗ್ರೆಸ್ ಮನಸ್ಸಿನಲ್ಲಿ ಎಂದಿಗೂ ಜನರ ಪರವಾಗಿ ಇಲ್ಲ. ಜನರ ಹಣ ಲೂಟುವುದೇ ಕಾಂಗ್ರೆಸ್ ನ ಉದ್ದೇಶ ಎಂದು ಆರೋಪಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿದೆ. ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ. ಲೂಟಿದ ಹಣವು ದೆಹಲಿಗೆ ಕಳುಹಿಸಿಕೊಡುವುದರಿಂದ ಪೈಸೆ ಸಹ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಹಲವು ರೀತಿಯ ಮುಖ್ಯಮಂತ್ರಿಗಳಿದ್ದಾರೆ. ಭವಿಷ್ಯದ ಸಿಎಂ, ಶ್ಯಾಡೋ ಸಿಎಂ, ಸೂಪರ್ ಸಿಎಂ ಸೇರಿದಂತೆ ಹಲವು ರೀತಿಯ ಮುಖ್ಯಮಂತ್ರಿಗಳು ಅಧಿಕಾರ ನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ಒಂದು ಸ್ಥಾನವನ್ನೂ ಗೆಲ್ಲಬಾರದು. ಬಿಜೆಪಿ – ಎನ್ ಡಿ ಎ ಮೈತ್ರಿಕೂಟದ 28 ಅಭ್ಯರ್ಥಿಗಳನ್ನು ಗೆಲ್ಲಿಸಿ ಕಳುಹಿಸಿ ಎಂದು ಮನವಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಭಾಷಣ ಆರಂಭ
ಶಿವಮೊಗ್ಗದ ಜನತೆಗೆ ನನ್ನ ನಮಸ್ಕಾರಗಳು. ಸಿಗಂಧೂರು ಚೌಡೇಶ್ವರಿ ತಾಯಿಗೆ ಶ್ರದ್ಧಾಪೂರ್ವಕವಾಗಿ ನಮಸ್ಕರಿಸುತ್ತೇನೆ. ಕರ್ನಾಟಕದ ಮೂಲೆ ಮೂಲೆಯಲ್ಲಿ ಬಿಜೆಪಿ ಪ್ರಜ್ವಲಿಸುತ್ತಿದೆ. ಶಿವಮೊಗ್ಗದ ಮೈದಾನ ಪೂರ್ತಿ ಜನರಿಂದ ತುಂಬಿ ತುಳುಕುತ್ತಿದೆ. ಇದು ಶುಭ ಸಮಾಚಾರ ಎಂದು ಮೋದಿ ಹೇಳಿದರು.
ನಾರಿ ಶಕ್ತಿ ಮುಖ್ಯ. ಮಹಿಳೆಯರು ಮನಸ್ಸು ಮಾಡಿದರೆ ಏನನ್ನೂ ಬೇಕಾದರೂ ಸಾಧಿಸುತ್ತಾರೆ. ಮೋದಿ ಸರ್ಕಾರವು ಮಹಿಳೆಯರ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಭಾರತೀಯ ನಾರಿಯ ಉನ್ನತೀಕರಣಕ್ಕೆ, ಉನ್ನತ ಬದುಕಿಗೆ, ಸಶಕ್ತಿಗಾಗಿ ಬಿಜೆಪಿ ಕೆಲಸ ಮಾಡುತ್ತದೆ. ತಾಯಿ, ತಂಗಿ, ಮಗಳು. ನಾರಿ ಕಲ್ಯಾಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ನಮ್ಮ ಶಕ್ತಿಯನ್ನು ಹೆಚ್ಚಿಸುವ ಕೆಲಸ ನಾವು ಮಾಡುತ್ತೇವೆ ಎಂದು ಮೋದಿ ಹೇಳಿದರು.
BREAKING: ‘ರಾಜ್ಯ ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್: ನಾಳೆ ‘ವಿಶೇಷ ಸಾಂದರ್ಭಿಕ ರಜೆ’ ಮಂಜೂರು
BREAKING: ತುಮಕೂರಲ್ಲಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ‘8 ಲಕ್ಷ’ ಹಣ ಜಪ್ತಿ