ಬೆಂಗಳೂರು: ಆರೋಗ್ಯ ವರ್ಲ್ಡ್ ಸಂಸ್ಥೆಯ ವತಿಯಿಂದ 2024 ನೇ ಸಾಲಿನ ಕೆಲಸದ ಸ್ಥಳಗಳಲ್ಲಿ ಸಿಬ್ಬಂದಿಗಳ ಉತ್ತಮ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ, ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಕಲ್ಯಾಣ ಕಾರ್ಯಕ್ರಮಗಳು ಮತ್ತು ಉಪಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಶ್ರೇಷ್ಠತೆಯನ್ನು ಪ್ರದರ್ಶಿಸುವ ಹಿನ್ನೆಲೆಯನ್ನು ಗುರುತಿಸಿ ಬೆಂ.ಮ.ಸಾ.ಸಂಸ್ಥೆಗೆ ಬೆಳ್ಳಿ ಮಟ್ಟದಡಿಯಲ್ಲಿ 2024 Healthy Workplace ಪ್ರಶಸ್ತಿಗೆ ಆಯ್ಕೆ ಮಾಡಲಾಗಿರುತ್ತದೆ.
ಜಾಗತಿಕ ಆರೋಗ್ಯ ಲಾಭೋದ್ದೇಶವಿಲ್ಲದ ಸಂಸ್ಥೆಯಾದ ಆರೋಗ್ಯ ವರ್ಲ್ಡ್ ಆಯೋಜಿಸಿರುವ ಆರೋಗ್ಯಕರ ಕೆಲಸದ ಸ್ಥಳ ಪ್ರಶಸ್ತಿಗಳು, ಸಿಬ್ಬಂದಿಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಸಂಸ್ಥೆಗಳನ್ನು ಅಂಗೀಕರಿಸುವ ಮತ್ತು ಆಚರಿಸುವ ಗುರಿಯನ್ನು ಹೊಂದಿದೆ.
ಈ ಪ್ರಶಸ್ತಿಯು ಸಿಬ್ಬಂದಿಗಳ ಕ್ಷೇಮಕ್ಕೆ ಸಮಗ್ರ ವಿಧಾನವನ್ನು ಉತ್ತೇಜಿಸುವಲ್ಲಿ ಅದರ ಪೂರ್ವಭಾವಿ ಪ್ರಯತ್ನಗಳನ್ನು ಪ್ರತಿಬಿಂಬಿಸುತ್ತದೆ. ಸಮಗ್ರ ಶ್ರೇಣಿಯ ಉಪಕ್ರಮಗಳ ಮೂಲಕ, ಬೆಂ.ಮ.ಸಾ.ಸಂಸ್ಥೆಯು ತನ್ನ ಸಿಬ್ಬಂದಿಗಳ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡಿದೆ, ಆರೋಗ್ಯವಂತ ಸಿಬ್ಬಂದಿಗಳು ಸಾಂಸ್ಥಿಕ ಯಶಸ್ಸಿಗೆ ಪ್ರಮುಖರಾಗಿದ್ದಾರೆ ಎಂದು ಗುರುತಿಸಿದ್ದಾರೆ.
ಸಿಬ್ಬಂದಿ ಕ್ಷೇಮಕ್ಕಾಗಿ ಬದ್ಧತೆಯು ಕೆಲಸದ ಸ್ಥಳವನ್ನು ಮೀರಿ ವಿಸ್ತರಿಸುತ್ತದೆ. ಬೆಂ.ಮ.ಸಾ.ಸಂಸ್ಥೆಯು ಸಾರ್ವಜನಿಕ ಪ್ರಯಾಣಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಸದೃಢ, ಆರೋಗ್ಯಯುತ ಸಿಬ್ಬಂದಿಗಳನ್ನು ಹೊಂದಿದ್ದು, ಕಾಲಕಾಲಕ್ಕೆ ಹೃದಯ ತಪಾಸಣಾ ಶಿಬಿರ, ಕಣ್ಣಿನ ಚಿಕಿತ್ಸಾ ಶಿಬಿರ, ಕ್ಯಾನ್ಸರ್ ತಪಾಸಣಾ ಶಿಬಿರ, ಮಾನಸಿಕ ಆರೋಗ್ಯ ಶಿಬಿರ ಮುಂತಾದವುಗಳನ್ನು ಆಯೋಜಿಸಿ, ಸಿಬ್ಬಂದಿಗಳಲ್ಲಿ ತೃಪ್ತಿ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದಲ್ಲದೆ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಗಾಗಿ ಮಾನದಂಡವನ್ನು ಪಾಲಿಸುತ್ತಿದ್ದೇವೆ.
ಸದರಿ ಪ್ರಶಸ್ತಿ ಕಾರ್ಯಾಕ್ರಮವನ್ನು ಡಿಸೆಂಬರ್-2024ರ ಮಾಹೆಯಲ್ಲಿ ಏರ್ಪಡಿಸಲಾಗಿದೆ.
2024-25 ನೇ ಸಾಲಿನ ಶೈಕ್ಷಣಿಕ ಮಾರ್ಗದರ್ಶಿ ಪುಸ್ತಕ : ಶಾಲಾ ಮುಖ್ಯಸ್ತರಿಗೆ ಶಿಕ್ಷಣ ಇಲಾಖೆಯಿಂದ ಮಹತ್ವದ ಸೂಚನೆ
ಬೆಂಗಳೂರಿನ KSRTC ಕೇಂದ್ರ ಕಚೇರಿಗೆ ಉತ್ತರ ಪ್ರದೇಶ ರಸ್ತೆ ಸಾರಿಗೆ ಸಂಸ್ಥೆ ಹೆಚ್ಚುವರಿ MD, ಅಧಿಕಾರಿಗಳ ತಂಡ ಭೇಟಿ