ಉತ್ತರ ಕನ್ನಡ: ಡಿಜಿಟಲ್ ಅರೆಸ್ಟ್ ಭೀತಿಗೆ ವ್ಯಕ್ತಿಯೊಬ್ಬ 89.90 ಲಕ್ಷ ಕಳೆದುಕೊಂಡಿರುವಂತ ಘಟನೆ ಉತ್ತರ ಕನ್ನಡದಲ್ಲಿ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೊಂದು ಡಿಜಿಟಲ್ ಅರೆಸ್ಟ್ ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ವ್ಯಕ್ತಿಯೊಬ್ಬರಿಗೆ ಡಿಜಿಟಲ್ ಅರೆಸ್ಟ್ ಭೀತಿಯಿಂದ 89.90 ಲಕ್ಷ ಸುಲಿಗೆ ಮಾಡಿರುವಂತ ಘಟನೆ ನಡೆದಿದೆ.
ಶಿರಸಿಯ ಪ್ರಗತಿನಗರದ ರವೀಂದ್ರ ಕೃಷ್ಣ ಹೆಗಡೆಗೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚನೆ ಮಾಡಲಾಗಿದೆ. ರವೀಂದ್ರ ಕೃಷ್ಣ ಹೆಗಡೆಗೆ ಕರೆ ಮಾಡಿದ್ದ ಸಂಜಯ್ ಮತ್ತು ಇತರರು ಈ ವಂಚನೆ ಮಾಡಿದ್ದಾರೆ.
ವಾಟ್ಸ್ ಆಪ್ ವೀಡಿಯೋ ಕಾಲ್ ಮಾಡಿ ಮುಂಬೈ ಕೊಲಬಾ ಪೊಲೀಸರು, ಇಡಿ ಎಂಬುದಾಗಿ ಹೆದರಿಸಿದ್ದಾರೆ. ನಿಮ್ಮ ಖಾತೆಯಲ್ಲಿ ಕಪ್ಪು ಹಣ ವರ್ಗಾವಣೆಯಾಗಿದೆ. ನಿಮ್ಮ ವಿರುದ್ಧ ಪಿಎಂಎಲ್ಎ ಕಾಯ್ದೆಯಡಿ ಕೇಸ್ ದಾಖಲಿಸುವುದಾಗಿ ಬೆದರಿಸಿದ್ದಾರೆ.
ಇವರ ಧಮಕಿಗೆ ಹೆದರಿದಂತ ರವೀಂದ್ರ ಕೃಷ್ಣ ಹೆಗಡೆ ಅವರು ಹಂತ ಹಂತವಾಗಿ ಬರೋಬ್ಬರಿ 89.90 ಲಕ್ಷ ವಂಚಕರಿಗೆ ನೀಡಿದ್ದಾರೆ. ಅಂತಿಮವಾಗಿ ತಾನು ಮೋಸ ಹೋಗಿದ್ದೇನೆ. ಡಿಜಿಟಲ್ ಅರೆಸ್ಟ್ ಗೆ ಒಳಗಾಗಿದ್ದೇನೆ ಎಂಬುದಾಗಿ ತಿಳಿದು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಆ.3ಕ್ಕೆ ಸಾಗರದಲ್ಲಿ ‘ಎಸ್.ವೆಂಕಟರಮಣ ಆಚಾರ್ ಪ್ರಾಮಾಣಿಕ ಸರ್ಕಾರಿ ಸೇವಾ ಪ್ರಶಸ್ತಿ’ ಪ್ರದಾನ: ಮ.ಸ.ನಂಜುಂಡಸ್ವಾಮಿ