ಮೈಸೂರು: ಮುಡಾ ಅಕ್ರಮ ಹಗರಣಕ್ಕೆ ಈಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಚಿಕ್ಕಪ್ಪ ತಮ್ಮ ಜಮೀನನ್ನು ಮೋಸದಿಂದ ಮಾರಾಟ ಮಾಡಿದ್ದಾರೆ ಅಂತ ಅಣ್ಣನ ಮಕ್ಕಳೇ ಚಿಕ್ಕಪ್ಪನ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೇ ಸಿಎಂ ಸಿದ್ಧರಾಮಯ್ಯ ಪತ್ನಿಗೆ ಮೋಸದಿಂದ ಜಮೀನು ಮಾರಾಟ ಮಾಡಿರುವಂತ ಗಂಭೀರ ಆರೋಪವನ್ನು ಮಾಡಿದ್ದಾರೆ.
ಇಂದು ಮೈಸೂರಿನ ಅಪರ ಜಿಲ್ಲಾಧಿಕಾರಿಗಳನ್ನು ಶಿವರಾಜ್ ಗೆ ಮಲ್ಲಯ್ಯನ ಮಗ ಜವರಯ್ಯ ಹಾಗೂ ಮೈಲಾರಯ್ಯ ಅವರ ಪುತ್ರ ಮಂಜುನಾಥ್ ದೂರು ನೀಡಿದ್ದಾರೆ. ಅದರಲ್ಲಿ ಸಿಎಂ ಪತ್ನಿ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಅವರು ಮೋಸದಿಂದ ನಮ್ಮ ಜಮೀನು ಮಾರಾಟ ಮಾಡಿದ್ದಾರೆ ಎಂಬುದಾಗಿ ಮಲ್ಲಯ್ಯನ ಅವರ ಪುತ್ರ ಜವರಯ್ಯ, ಮೈಲಾರಯ್ಯ ಅವರ ಪುತ್ರ ಮಂಜುನಾಥ್ ಎಂಬುವರು ದೂರು ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಪತ್ನಿ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಅವರು ಚಿಕ್ಕಪ್ಪ ಅನ್ಯಾಯ ಮಾಡಿ ನಮ್ಮ ಜಮೀನನ್ನು ಮಾರಾಟ ಮಾಡಿದ್ದಾರೆ. ಸಿಎಂ ಪತ್ನಿ ಹೆಸರಲ್ಲಿರುವ ಜಮೀನು ನಮ್ಮದೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ ಜಮೀನಿನ ಮೂಲ ಮಾಲೀಕರು ನಾವು. ನಮಗೆ ಸೂಕ್ತ ನ್ಯಾಯ ಒದಗಿಸಿಕೊಡುವಂತೆ ಸಿಎಂ ಪತ್ನಿಯ ಸಹೋದರ ಮಲ್ಲಿಕಾರ್ಜನ ಸ್ವಾಮಿ ವಿರುದ್ಧವೇ ಅಣ್ಣನ ಮಕ್ಕಳಾದಂತ ಜವರಯ್ಯ ಹಾಗೂ ಮಂಜುನಾಥ್ ಎಡಿಸಿಗೆ ದೂರು ನೀಡಿದ್ದಾರೆ. ಅವರೊಂದಿಗೆ ಬಿಜೆಪಿಯ ಎನ್ ಮಹೇಶ್ ಸೇರಿದಂತೆ ಇತರರು ಹಾಜರಿದ್ದರು.
‘ಫ್ಲೆಕ್ಸ್’ ಅಳವಡಿಕೆಗೆ ಹೊಸ ಜಾಹಿರಾತು ಕಾಯ್ದೆ ಜಾರಿಗೊಳಿಸಿದ ‘BBMP’ : ಕರುಡು ನೀತಿಗೆ ರಾಜ್ಯಸರ್ಕಾರ ಅನುಮೋದನೆ
Viral Video : 32 ಹಲ್ಲುಗಳೊಂದಿಗೆ ಜನಿಸಿದ ಮಗು ; ಕಿಲಕಿಲ ನಗುತ್ತಿರುವ ಕಂದನ ವಿಡಿಯೋ ವೈರಲ್