ಕೊಪ್ಪಳ: ರಾಜ್ಯದಲ್ಲಿ ಮತ್ತೊಂದು ಮರ್ಯಾದ ಹತ್ಯೆ ಯತ್ನ ಪ್ರಕರಣ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ನಾಲ್ಕು ತಿಂಗಳ ಗರ್ಭಿಣಿ ಪ್ರಾಣಾಪಾಯದಿಂದ ಪಾರಾಗಿರುವಂತ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ತಾಲ್ಲೂಕಿನ ಹಂದ್ರಾಳದಲ್ಲಿ ಮರ್ಯಾದಾ ಹತ್ಯೆಗೆ ಯತ್ನ ನಡೆದಿದೆ. ಕೊಡಲಿಯಿಂದ ಕೊಚ್ಚಿ ಕೊಲೆಗೈಯೋದಕ್ಕೆ 4 ತಿಂಗಳ ಗರ್ಭಿಣಿಯಾಗಿದ್ದಂತ ತಂಗಿಯನ್ನೇ ಸ್ವಂತ ಅಣ್ಣ ಯತ್ನಿಸಿರುವಂತ ಘಟನೆ ನಡೆದಿದೆ.
4 ತಿಂಗಳ ಗರ್ಭಿಣಿಯಾಗಿದ್ದಂತ ಮೀನಾಕ್ಷಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆಗೈಯೋದಕ್ಕೆ ಅಣ್ಣ ಮಂಜುನಾಥ್ ಯತ್ನಿಸಿದ್ದಾನೆ. ಮೀನಾಕ್ಷಿ ಪತಿ ಉದಯ ಸಹೋದರ ಮದುವೆಗೆ ಬಂದಾಗ ಈ ಕೃತ್ಯ ಎಸಗಲಾಗಿದೆ.
2 ವರ್ಷದ ಹಿಂದೆ ಎಸ್ ಟಿ ಯುವಕನನ್ನು ಪ್ರೀತಿಸಿ ಮೀನಾಕ್ಷಿ ಮದುವೆಯಾಗಿದ್ದಳು. ಹಂದ್ರಾಳ ಗ್ರಾಮದ ಉದಯ ಅನ್ನೋ ಯುವಕನನ್ನು ಪ್ರೀತಿಸಿ ಕುರುಬರ ಸಮುದಾಯದ ಮೀನಾಕ್ಷಿ ಮದುವೆಯಾಗಿದ್ದಳು.
ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಚಿತ್ತಾಪೂರ ನಿವಾಸಿ ಮೀನಾಕ್ಷಿ ಹಾಗೂ ಹಂದ್ರಾಳ ಗ್ರಾಮದ ಉದಯ್ ಪ್ರೀತಿಸಿ ಮದುವೆಯಾಗಿದ್ದರು. ಇಂದು ಉದಯ್ ಸಹೋದರನ ಮದುವೆಗೆ ಆಗಮಿಸಿದ್ದಂತ ಮೀನಾಕ್ಷಿ ಅಣ್ಣ ಮಂಜುನಾಥ್ ಕಾದು ಕೊಡಲಿಯಿಂದ ಕೊಚ್ಚಿ ಕೊಲೆಗೈಯ್ಯೋದಕ್ಕೆ ಯತ್ನಿಸಿದ್ದಾನೆ.
ಮೀನಾಕ್ಷಿ ಕೈ ಹಾಗೂ ಬೆನ್ನಿನ ಭಾಗಕ್ಕೆ ಕೊಡಲಿಯಿಂದ ಕೊಚ್ಚಿ ಕೊಲೆಗೆ ಅಣ್ಣ ಮಂಜುನಾಥ್ ಯತ್ನಿಸಿದ್ದಾನೆ. ಅದೃಷ್ಟವಶಾತ್ ಮೀನಾಕ್ಷಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಮಂಜುನಾಥ್ ಅವರನ್ನು ಅಳವಂಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
SSLC, ದ್ವಿತೀಯ PUC ವಿದ್ಯಾರ್ಥಿಗಳ ಗಮನಕ್ಕೆ: ಪರೀಕ್ಷೆ ಗೊಂದಲ ನಿವಾರಣೆಗೆ ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ
ಮದುವೆ ಮಂಟಪದವರು ವಧು-ವರರ ವಯಸ್ಸಿನ ದಾಖಲೆ ಪರಿಶೀಲಿಸಬೇಕೆಂಬ ನಿಯಮಗಳಿಲ್ಲ : ಹೈಕೋರ್ಟ್








