ಬೆಂಗಳೂರು: ಸಚಿವ ರಾಮಲಿಂಗಾ ರೆಡ್ಡಿ ಅವರ ಇಚ್ಛಾ ಶಕ್ತಿ, ಬದ್ಧತೆಗೆ ಮತ್ತೊಂದು ಸೇರ್ಪಡೆಗೊಂಡಿದೆ. ಅದರಲ್ಲೂ ಮುಜರಾಯಿ ಇಲಾಖೆಯಲ್ಲಿ ಕ್ರಾಂತಿಕಾರಿ ಯೋಜನೆಗಳಿಗೆ ಮುನ್ನುಡಿಯನ್ನು ಬರೆದಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಅವರು, ಮುಜರಾಯಿ ಇಲಾಖೆಯ ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಚಕರು ಮತ್ತು ಸಿಬ್ಬಂದಿಗಳ ಮಕ್ಕಳಿಗೆ ಇದುವರೆಗೂ ಯಾವುದೇ ರೀತಿಯ ವಿದ್ಯಾರ್ಥಿ ಪ್ರೋತ್ಸಾಹ ಧನ ಯೋಜನೆ ಜಾರಿಯಲ್ಲಿರಲಿಲ್ಲ.ದಿನಾಂಕ:27.10.2023 ಈ ಬಗ್ಗೆ ಆದೇಶ ಮಾಡಿ ಯೋಜನೆ ಜಾರಿಗೆ ತರಲಾಗಿದೆ ಎಂದಿದ್ದಾರೆ.
ಈ ಕೆಳಕಂಡ ಕೋರ್ಸ್ ಗಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನ ನೀಡಲು ಪ್ರಾರಂಭಿಸಲಾಯಿತು ಎಂದಿದ್ದಾರೆ.
ಪಿ.ಯು.ಸಿ ರೂ.5,000
ಪದವಿ ರೂ.7,000
ಸ್ನಾತಕೋತ್ತರ ಪದವಿ ರೂ.15,000
ಇಂಜಿನಿಯರಿಂಗ್ ರೂ.25,000
ವೈದ್ಯಕೀಯ/ ಡೆಂಟಲ್ ರೂ.50,000
ಇತರೆ ವೈದ್ಯಕೀಯ ರೂ.25,000
ವಿದೇಶ ವ್ಯಾಸಂಗ ರೂ.1,00,000
ಇಲ್ಲಿಯವರೆಗೆ ಪ್ರೋತ್ಸಾಹಧನ 254 ವಿದ್ಯಾರ್ಥಿಗಳಿಗೆ ರೂ.38.38 ಲಕ್ಷ ಪಾವತಿಸಲಾಗಿದ್ದು, ಇನ್ನು 19 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇದರಲ್ಲಿ ಅರ್ಚಕರ ಮಕ್ಕಳು 230 ,ನೌಕರರ ಮಕ್ಕಳು 24 ಸೇರಿವೆ. ವಿಶೇಷವೆಂದರೆ 5 ವಿದ್ಯಾರ್ಥಿಗಳಿಗೆ ತಲಾ 1 ಲಕ್ಷದಂತೆ 5 ಲಕ್ಷ ವಿದೇಶ ವ್ಯಾಸಂಗಕ್ಕೆ ಮಂಜೂರು ಮಾಡಲಾಗಿದೆ. ಐವರೂ ಕೂಡ ಅರ್ಚಕರ ಮಕ್ಕಳು ಎಂದು ಮಾಹಿತಿ ನೀಡಿದ್ದಾರೆ.
ಮುಂದುವರೆದು, ಮುಜರಾಯಿ ಇಲಾಖೆಯ ಅರ್ಚಕರು/ಸಿಬ್ಬಂದಿಗಳು ಮೃತಪಟ್ಟಲ್ಲಿ ಯಾವುದೇ ಮರಣಾನಂತರ ಉಪಧನದ ವ್ಯವಸ್ಥೆ ಇರಲಿಲ್ಲ. ಈ ಬಗ್ಗೆ ಹೊಸ ಆದೇಶವನ್ನು ದಿನಾಂಕ:27.10.2023 ಹೊರಡಿಸಿ, ಈ ಪ್ರಕರಣಗಳಲ್ಲಿ ಮೃತಾವಲಂಬಿತರ ಕುಟುಂಬಕ್ಕೆ ರೂ.2 ಲಕ್ಷ ಪಾವತಿಸಲು ಕ್ರಮ ತೆಗೆದುಕೊಳ್ಳಲಾಯಿತು.ಅದರಂತೆ ಇಲ್ಲಿಯವರೆಗೆ 28 ಮೃತ ಕುಟುಂಬಗಳಿಗೆ ತಲಾ ರೂ.2 ಲಕ್ಷಗಳಂತೆ ರೂ.56 ಲಕ್ಷಗಳನ್ನು ಪಾವತಿ ಮಾಡಲಾಗಿದೆ. ಜಾತಿ ಜನಗಣತಿ ಸಮೀಕ್ಷೆಯ ಕಾರಣ ಸಿಬ್ಬಂದಿಗಳ ಅಲಭ್ಯತೆಯಿಂದಾಗಿ ಸ್ವೀಕತವಾಗಿರುವ ಉಳಿದ 39 ಅರ್ಜಿಗಳನ್ನು ನವೆಂಬರ್ ಮೊದಲನೇ ವಾರದಲ್ಲಿ ಇತ್ಯರ್ಥಪಡಿಸಿ ಅವಲಂಬಿತರಿಗೆ ಚೆಕ್ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಭಾರತ್ ಗೌರವ್ ಯೋಜನೆ ಅಡಿಯಲ್ಲಿ ಯಾತ್ರಾ ವ್ಯವಸ್ಥೆ:
ಭಾರತ್ ಗೌರವ್ ಯೋಜನೆ ಅಡಿಯಲ್ಲಿ ಇಲಾಖೆ ವತಿಯಿಂದ ಕೈಗೊಳ್ಳಲಾಗುವ ಕಾಶೀ-ಗಯಾ-ಆಯೋದ್ಯೆ ದರ್ಶನ, ದಕ್ಷಿಣ ಕೇತ್ರ ಯಾತ್ರೆ, ದ್ವಾರಕಯಾತ್ರೆಗಳಿಗೆ ದಿನಾಂಕ 22.01.2024 ರಿಂದ ಅರ್ಚಕರ ಹಾಗೂ ಅವರ ಕುಟುಂಬದ ಒಬ್ಬರು ಸದಸ್ಯರು ಭಾಗವಹಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ವರ್ಷದಲ್ಲಿ ಒಟ್ಟು 2,400 ಜನರಿಗೆ ಉಚಿತ ಯಾತ್ರೆ ಸೌಲಭ್ಯ ಕಲ್ಪಿಸಲಾಗಿದೆ. ಇದಕ್ಕೆ ವಾರ್ಷಿಕ ರೂ.8.00 ಕೋಟಿ ವೆಚ್ಚವನ್ನು ಭರಿಸಲಾಗಿದೆ.
2004 ರಿಂದ ಸ್ಥಗಿತಕೊಂಡಿದ್ದ ಘಟಿಕೋತ್ಸವವನ್ನು ಪುನಃ ಪ್ರಾರಂಭಿಸಿ ಒಂದೇ ವರ್ಷದಲ್ಲಿ ಅಂದರೆ 2025 ರಲ್ಲಿ ಒಟ್ಟು 4600 ಅರ್ಚಕರುಗಳಿಗೆ ಪ್ರಮಾಣ ಪತ್ರ ಪ್ರದಾನ ಮಾಡಲಾಗಿದೆ. (ಮೈಸೂರಿನ ಸಮಾರಂಭದಲ್ಲಿ 2000 ಅರ್ಚಕರಿಗೆ, ಬೆಂಗಳೂರಿನಲ್ಲಿ 2600) ಮತ್ತು ಪ್ರಸಕ್ತ ವರ್ಷದ ಪ್ರಮಾಣ ಪತ್ರವನ್ನು ಡಿಸೆಂಬರ್ ನಲ್ಲಿ 1000 ಅರ್ಚಕರಿಗೆ ನೀಡಲಾಗುವುದು.
ಮುಜರಾಯಿ ಇಲಾಖೆ ವ್ಯಾಪ್ತಿಯ ಅರ್ಚಕರು/ ಸಿಬ್ಬಂದಿಗಳ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ ನೀಡುವ ಪ್ರಕ್ರಿಯೆ ಮುಂದುವರೆದ ಭಾಗವಾಗಿ ಅರ್ಜಿಗಳನ್ನು ಸ್ವೀಕರಿಸಲು ನವೆಂಬರ್ 1 ರಿಂದ ಡಿಸೆಂಬರ್ 31 , 2025 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಯೋಜನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳುವಂತೆ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕೋರಿದ್ದಾರೆ.
ಕರ್ನಾಟಕದಲ್ಲಿ ‘ಜಿಯೋ’ಗೆ 2.95 ಲಕ್ಷ ಹೊಸ ಚಂದಾದಾರ ಸೇರ್ಪಡೆ: ಟ್ರಾಯ್ ವರದಿ | Jio User
BIG ALERT : ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ ನಕಲಿ `ENO’ : ಅಸಲಿ ಯಾವುದು ಅಂತ ಜಸ್ಟ್ ಹೀಗೆ ಕಂಡುಹಿಡಿಯಿರಿ.!








