ಬಾಗಲಕೋಟೆ: ರಾಜ್ಯದಲ್ಲಿ ಮತ್ತೊಂದು ಆ್ಯಸಿಡ್ ದಾಳಿ ಪ್ರಕರಣ ನಡೆದಿದೆ. ಮನೆ ಬಾಗಿಲು ತೆರೆಯಲಿಲ್ಲ ಅನ್ನೋ ಒಂದೇ ಒಂದು ಕಾರಣಕ್ಕೆ ಪ್ರಿಯತಮನೊಬ್ಬ ಮಹಿಳೆಯ ಮೇಲೆ ಆ್ಯಸಿಡ್ ಎರಚಿರೋ ಘಟನೆ ಬಾಗಲಕೋಟೆಯ ಗದ್ದನಕೇರಿ ಕ್ರಾಸ್ ನಲ್ಲಿ ನಡೆದಿದೆ.
ಬಾಗಲಕೋಟೆ ತಾಲೂಕಿನ ಗದ್ದನಕೇರಿ ಕ್ರಾಸ್ ನಲ್ಲಿ ಲಕ್ಷ್ಮೀ ಬಡಿಗೇರ ಎಂಬ ಮಹಿಳೆಯ ಮೇಲೆ ಮೌನೇಶ್ ಎಂಬಾತ ಮನೆಯ ಬಾಗಿಲು ತೆಗೆಯ ಒಂದೇ ಒಂದು ಕಾರಣಕ್ಕೆ ಆ್ಯಸಿಡ್ ಮಿಶ್ರಿತ ನೀರನ್ನು ಎರಚಿದ್ದಾನೆ.
ಪ್ರಿಯತಮೆ ಲಕ್ಷ್ಮೀ ಬಡಿಗೇರ್ ಮೇಲೆ ಆ್ಯಸಿಡ್ ದಾಳಿಯಿಂದಾಗಿ ಎಡಗಣ್ಣು, ಮುಖದ ಮೇಲೆ ಗಾಯವಾಗಿದೆ. ಕೂಡಲೇ ಆಕೆಯನ್ನು ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಂದಹಾಗೇ ಕೆಲ ದಿನಗಳ ಹಿಂದೆ ಮೌನೇಶ್ ಹಾಗೂ ಲಕ್ಷ್ಮೀ ಬಡಿಗೇರ ಒಟ್ಟಿಗೆ ಇದ್ದರು. ಆದ್ರೇ ಇಂದು ಮನೆಯ ಬಾಗಿಲು ತೆಗೆಯ ಕಾರಣ ಆ್ಯಸಿಡ್ ದಾಳಿಯನ್ನು ಮಾಡಿರೋದಾಗಿ ತಿಳಿದು ಬಂದಿದೆ.
ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣ: ಕೇಜ್ರಿವಾಲ್ ಆಪ್ತ ‘ಬಿಭವ್ ಕುಮಾರ್’ಗೆ 3 ದಿನ ಪೊಲೀಸ್ ಕಸ್ಟಡಿಗೆ
BREAKING: ‘ಪ್ರಜ್ವಲ್ ರೇವಣ್ಣ’ ಅಶ್ಲೀಲ ವೀಡಿಯೋ ಕೇಸ್: ಏಕಕಾಲಕ್ಕೆ ಹಾಸನ ಜಿಲ್ಲೆಯ 3 ಕಡೆ ‘SIT ದಾಳಿ’