ಚಿಕ್ಕಮಗಳೂರು: ನಾನು ಅಣ್ಣಾಮಲೈ ಕೊಪ್ಪಗೆ ಬಂದಾಗಲೇ ಅವರಿಗೆ ಖಾಕಿ ತೊರೆದು ಕಾವಿ ತೊಡ್ತಾರೆ ಅಂತ ಹೇಳಿದ್ದೆ. ಈಗ ಅವರು ತಮಿಳುನಾಡಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂಬುದಾಗಿ ವಿನಯ್ ಗುರೂಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ನಡೆದಂತ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ತಮಿಳುನಾಡಿನಲ್ಲಿ ಒಂದು ದಿನ ಅಣ್ಣಾಮಲೈ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅದನ್ನು ನಾನು ನೋಡುತ್ತೇನೆ. ನೀವು ನೋಡುತ್ತೀರಿ. ಇದು ಭವಿಷ್ಯ ಎನ್ನುವುದಕ್ಕಿಂತ ಸಾಮಾನ್ಯ ಜ್ಞಾನ ಎಂದರು.
ಕೊಪ್ಪದ ಬೊಮ್ಲಾಪುರಕ್ಕೆ ಈ ಹಿಂದೆ ಅಣ್ಣಾಮಲೈ ಬಂದಾಗ ನಾನು ಸೇಬು ಹಣ್ಣು ನೀಡಿ ನೀವು ಖಾಕಿ ತೊರೆದು ಖಾದಿ ಹಾಕ್ತೀರಿ ಅಂತ ಹೇಳಿದ್ದೆ. ಜ್ಞಾನ ಚಕ್ಷುವಿನಲ್ಲಿ ಯಾರೇ ಆದರೂ ಧ್ಯಾನ ಮಾಡಿದಾಗ ಅಂತವರಿಗೆ ಕಾಲದ ಒಂದಷ್ಟು ಘಟನೆಗಳನ್ನು ತಿಳಿದುಕೊಳ್ಳೋಕೆ ಆಗುತ್ತದೆ. ಅದು ನನಗಷ್ಟೇ ಅಲ್ಲ. ಸಣ್ಣ ಮಗುವಿಗೂ ಸಾಧ್ಯ ಎಂದರು.