ಕಲಬುರಗಿ: ಕೇಂದ್ರ ಸರಕಾರದ ಅಸಹಕಾರ ನಡುವೆಯೂ ಅನ್ನಭಾಗ್ಯ ಯೋಜನೆಯಡಿಯಲ್ಲಿ ಬಡವರಿಗೆ ಅಕ್ಕಿ ಕೊಡುವ ಬದಲು ಅಕ್ಕಿ ಖರೀದಿಸಲು ಹಣ ನೇರವಾಗಿ ಅವರ ಖಾತೆಗ ವರ್ಗಾಯಿಸಲಾತ್ತಿದೆ. ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಮುಗುಳುನಾಗಾವಿ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ರಾಧಾಕೃಷ್ಣ ಅವರ ಪರ ಮತಯಾಚಿಸಿ ಅವರು ಮಾತನಾಡುತ್ತಿದ್ದರು.
ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ಕೆಲಸ ಕಾಂಗ್ರೆಸ್ ಮಾಡಿದೆ. ಇದನ್ನು ನೀವು ಮರೆಯಬಾರದು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತರಲು ಪ್ರಯತ್ನಿಸಬೇಕು. ಆ ಮೂಲಕ ಜನಪರ ಆಡಳಿತ ನಡೆಸುವ ಅವಕಾಶ ನೀಡಿ ಎಂದು ಖರ್ಗೆ ಮನವಿ ಮಾಡಿದರು.
ಭಾವನಾತ್ಮಕವಾಗಿ ಯೋಚಿಸದೆ ಅಭಿವೃದ್ದಿಯ ಆಧಾರದ ಮೇಲೆ ಮತ ನೀಡಿ ಎಂದು ಮನವಿ ಮಾಡಿ ಖರ್ಗೆ ಸಾಹೇಬರ ಕೈಗೊಂಡ ಅಭಿವೃದ್ದಿ ಕೆಲಸಗಳನ್ನು ನೋಡಿ ನಮಗೆ ಮತ ನೀಡಿ ರಾಧಾಕೃಷ್ಣ ಅವರಿಗೆ ಮತ ನೀಡಿ ಎಂದರು.
ಗುಲಾಮಗಿರಿ ಎಂದರೆ ಅದು ಮೋದಿ ಗ್ಯಾರಂಟಿ -ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ
ದೇಶದಲ್ಲಿ ಬಿಜೆಪಿ ಸತ್ತು ಹೋಗಿದೆ. ಗುಲಾಮಗಿರಿ ಎಂದರೆ ಅದು ಮೋದಿ ಗ್ಯಾರಂಟಿ. ಕಾಂಗ್ರೇಸ್ ಗ್ಯಾರಂಟಿ ಎಂದರೆ ಅದು ಪಕ್ಕಾ ಗ್ಯಾರಂಟಿಯ ಭರವಸೆಯಾಗಿದೆ ಎಂದು ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಹೇಳಿದರು.
ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ, ರಮೇಶ ಮರಗೋಳ,ಡಾ ಕಾಂತಾ, ರಾಜೇಶ್ ಪಾಟೀಲ್, ನಾಮದೇವ ರಾಠೋಡ ಸೇರಿದಂತೆ ಹಲವರಿದ್ದರು.
‘ಕುಮಾರಸ್ವಾಮಿ’ಯವರೇ ನಿಮ್ಮ ‘ಪೆನ್ ಡ್ರೈವ್’ನಲ್ಲಿನ ರಹಸ್ಯ ಈಗ ಹೊರಬಂದಿದೆಯೇ?- ಕಾಂಗ್ರೆಸ್ ಪ್ರಶ್ನೆ