ಹುಬ್ಬಳ್ಳಿ: ಜಿಲ್ಲೆಯಲ ವೀರಾಪುರ ಓಣಿಯಲ್ಲಿ ನಡೆದಿದ್ದಂತ ಯುವತಿ ಅಂಜಲಿ ಅಂಬಿಗೇರಿ ಹತ್ಯೆ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ತಲೆದಂಡವಾಗಿದೆ. ಬೆಂಡಿಗೇರಿ ಠಾಣೆ ಇನ್ಸ್ ಪೇಕ್ಟರ್ ಹಾಗೂ ಮಹಿಳಾ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.
ಹುಬ್ಬಳ್ಳಿಯ ವೀರಾಪುರ ಓಣಿಯಲ್ಲಿನ ಯುವತಿ ಅಂಜಲಿ ಅಂಬಿಗೇರಿಯನ್ನು ವಿಶ್ವ ಎಂಬಾತ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದನು. ಈ ಪ್ರಕರಣದ ನಂತ್ರ ಆರೋಪಿ ವಿಶ್ವ ಪರಾರಿಯಾಗಿದ್ದನು. ಆತನ ಬಂಧನಕ್ಕಾಗಿ ಎರಡು ತಂಡವನ್ನು ರಚಿಸಲಾಗಿದೆ.
ಈ ಬೆನ್ನಲ್ಲೇ ಯುವತಿ ಅಂಜಲಿ ಅಂಬಿಗೇರಿಗೆ ಜೀವ ಬೆದರಿಕೆ ಇದೆ. ರಕ್ಷಣೆ ನೀಡುವಂತೆ ಅಜ್ಜಿ ಬೆಂಡಿಗೇರಿ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಸೂಕ್ತ ಕಾನೂನು ಕ್ರಮ ವಹಿಸಬೇಕಿದ್ದಂತ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಕರ್ತವ್ಯ ಲೋಪ ಎಸಗಿದ್ದರು.
ಈ ಹಿನ್ನಲೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರು, ಬೆಂಡಿಗೇರಿ ಠಾಣೆಯ ಇನ್ಸ್ ಪೆಕ್ಟರ್ ಚಂದ್ರಶೇಖರ ಚಿಕ್ಕೋಡಿ ಹಾಗೂ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ರೇಖಾ ಎಂಬುವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ರಾಜ್ಯದಲ್ಲೊಂದು ‘ದೇವರ ಪವಾಡ’: 10 ವರ್ಷಗಳ ಹಿಂದಿನ ‘ಮಾರಮ್ಮನ ಕಲ್ಲು’ ಹುಡುಕಿಕೊಟ್ಟ ‘ಅಕ್ಕನಾಗಮ್ಮ’
BREAKING : ಮೇ 31ರ ವೇಳೆಗೆ ಕೇರಳಕ್ಕೆ ‘ಮುಂಗಾರು’ ಪ್ರವೇಶ : ‘IMD’ ಮುನ್ಸೂಚನೆ