ಬೆಂಗಳೂರು: ಬಳ್ಳಾರಿ ಜನರ ಸಮಸ್ಯೆ ಆಲಿಸದ ಜಮೀರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಬೇಜವಾಬ್ದಾರಿ ಉಸ್ತುವಾರಿ ಸಚಿವರ ಬದಲಾವಣೆ ಪಟ್ಟು ಹಿಡಿಯಲಾಗಿದೆ ಎಂಬುದಾಗಿ ಜೆಡಿಎಸ್ ಕಿಡಿಕಾರಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ವಿರುದ್ಧ ಜಿಲ್ಲೆಯ ಮತದಾರರ ಆಕ್ರೋಶದ ಕಟ್ಟೆ ಒಡೆದಿದೆ. ಸೂಟು ಬೂಟು ತೊಟ್ಟು, ಪಟಾಲಂ ಕಟ್ಟಿಕೊಂಡು ಪ್ರತಿ ದಿನ ರೀಲ್ಸ್ ಮಾಡಿಕೊಂಡು ಬಿಲ್ಡಪ್ ಕೊಡುತ್ತಿರುವ, ಬೇಜವಾಬ್ದಾರಿ ಮಂತ್ರಿ ಜಮೀರ್ ವಿರುದ್ಧ ಬಳ್ಳಾರಿ ಜನರು ಸಿಡಿದೆದ್ದಿದ್ದಾರೆ ಎಂದು ತಿಳಿಸಿದೆ.
ರೈತರು, ಜನರ ಸಮಸ್ಯೆಗಳನ್ನು ಆಲಿಸುತ್ತಿಲ್ಲ, ಅಹವಾಲುಗಳನ್ನು ಸ್ವೀಕರಿಸುತ್ತಿಲ್ಲ ಎಂದು ಖುದ್ದು ಸಿಎಂ ಸಿದ್ಧರಾಮಯ್ಯ ಬಳಿಯೇ ಸಾರ್ವಜನಿಕರು ಅಳಲು ತೋಡಿಕೊಂಡಿದ್ದಾರೆ. ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಮಂತ್ರಿ ಜಮೀರ್ ಬದಲಾವಣೆ ಆಗಬೇಕು ಎಂದು ಜನರು ಆಗ್ರಹಿಸಿರುವುದು ಅದಕ್ಷ ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ ಎಂಬುದಾಗಿ ವೀಡಿಯೋ ಸಹಿತ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.
ಬಳ್ಳಾರಿ ಉಸ್ತುವಾರಿ ಸಚಿವ @BZZameerAhmedK ವಿರುದ್ಧ ಜಿಲ್ಲೆಯ ಮತದಾರರ ಆಕ್ರೋಶದ ಕಟ್ಟೆ ಒಡೆದಿದೆ.
ಸೂಟು ಬೂಟು ತೊಟ್ಟು, ಪಟಾಲಂ ಕಟ್ಟಿಕೊಂಡು ಪ್ರತಿ ದಿನ ರೀಲ್ಸ್ ಮಾಡಿಕೊಂಡು ಬಿಲ್ಡಪ್ ಕೊಡುತ್ತಿರುವ, ಬೇಜವಾಬ್ದಾರಿ ಮಂತ್ರಿ ಜಮೀರ್ ವಿರುದ್ಧ ಬಳ್ಳಾರಿ ಜನರು ಸಿಡಿದೆದ್ದಿದ್ದಾರೆ.
ರೈತರು, ಜನರ ಸಮಸ್ಯೆಗಳನ್ನು ಆಲಿಸುತ್ತಿಲ್ಲ,… pic.twitter.com/eYvGlRIQBJ
— Janata Dal Secular (@JanataDal_S) May 17, 2025
ALERT : ಸಾರ್ವಜನಿಕರೇ ಎಚ್ಚರ : ಈ ತಪ್ಪು ಮಾಡಿದ್ರೆ ನಿಮ್ಮ ಹೆಸರಿನಲ್ಲಿ `ಸಿಮ್ ಕಾರ್ಡ್’ ಬಳಸುತ್ತಾರೆ ವಂಚಕರು.!
ಕೇಂದ್ರ ಸಚಿವ HDK ಭೇಟಿಯಾದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ: ಹೆಚ್ಚಿನ ಎಲೆಕ್ಟ್ರಿಕ್ ಬಸ್ ನೀಡಲು ಮನವಿ