Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಬೆಂಗಳೂರು: ಮಾಜಿ ಕಾರ್ಪೊರೇಟರ್ ವಿರುದ್ಧ ವಂಚನೆ ಆರೋಪ: ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆಗೆ ಯತ್ನ!

10/04/2026 3:31 PM

BIG NEWS : ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಕೋರ್ಟ್​​ ಗ್ರೀನ್​​ ಸಿಗ್ನಲ್​​ : ಆದ್ರೆ ಈ ಷರತ್ತುಗಳು ಅನ್ವಯ

10/04/2026 3:27 PM

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖ್ಯಾತ ನಿರ್ದೇಶಕ ರಂಜಿತ್‌ಗೆ ಜಾಮೀನು ಮಂಜೂರು | Filmmaker Ranjith

10/04/2026 3:24 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಶಿಕ್ಷಣ-ಪೋಷಣೆ ಮೂಲಕ ದೇಶ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ: ನ್ಯಾ.ಸಂತೋಷ್
KARNATAKA

ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳಿಗೆ ಶಿಕ್ಷಣ-ಪೋಷಣೆ ಮೂಲಕ ದೇಶ ಕಟ್ಟುವ ಕೆಲಸದಲ್ಲಿ ತೊಡಗಿದ್ದಾರೆ: ನ್ಯಾ.ಸಂತೋಷ್

By kannadanewsnow0919/09/2024 4:37 PM

ಶಿವಮೊಗ್ಗ : ಮಕ್ಕಳಿಗೆ ಶಿಕ್ಷಣ, ಪೋಷಣೆ ನೀಡುವ ಅಂಗನವಾಡಿ ಕಾರ್ಯಕರ್ತೆಯರು ಒಂದು ರೀತಿಯಲ್ಲಿ ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಸಂತೋಷ್ ಎಂ.ಎಸ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ. ಶಿವಮಗ್ಗ ಹಾಗೂ ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ಆಲ್ಕೊಳದ ಚೈತನ್ಯ ಸಭಾಂಗಣದಲ್ಲಿ ಪೋಷಣ್ ಮಾಸಾಚರಣೆ ಆಯೋಜಿಸಲಾಗಿದ್ದ ಅನೀಮಿಯ ಮುಕ್ತ ಭಾರತ ಕಾರ್ಯಕ್ರಮ ಹಾಗೂ ಪೌಷ್ಟಿಕ ಆಹಾರ ಮತ್ತು ಗ್ರೋಥ್ ಮಾನಿಟರಿಂಗ್ ಕುರಿತು ತರಬೇತುದಾರರ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

3 ರಿಂದ 6 ವರ್ಷದೊಳಗಿನ ಮಕ್ಕಳಿಗೆ ಅಂಗನವಾಡಿಗಳಲ್ಲಿ ಕಲಿಸುವ, ಪೋಷಣೆ ಮಾಡುವ ಅಂಗನವಾಡಿ ಕಾರ್ಯಕರ್ತೆಯರು, ಅಂಗನವಾಡಿ ಸೂಪರ್‌ವೈಸರ್‌ಗಳು ಒಂದು ರೀತಿಯಲ್ಲಿ ತಳಮಟ್ಟದಲ್ಲಿ ದೇಶ ಕಟ್ಟುವ ಕೆಲಸದಲ್ಲಿ ನಿರತರಾಗಿದ್ದು ತಮಗೆ ನೀಡಿದ ಯಾವುದೇ ಕೆಲಸವನ್ನು ಸಮರ್ಪಕವಾಗಿ ಯೋಜನೆ ರೂಪಿಸಿಕೊಂಡು ಮಾಡಬೇಕು. ಆಗಬೇಕಾದ ಕೆಲಸಗಳ ಕುರಿತು ಒಂದೆಡೆ ಬರೆದಿಟ್ಟುಕೊಳ್ಳಬೇಕು. ಕೆಲಸ ಮುಗಿದು ವರದಿ ನೀಡುವವರೆಗೆ, ಅಪ್‌ಡೇಟ್ ಆಗುವವರೆಗೆ ಕಾರ್ಯವೆಸಗಬೇಕು ಎಂದು ಕಿವಿ ಮಾತು ಹೇಳಿದರು.

ಜಿಲ್ಲೆಯಲ್ಲಿ 2563 ಅಂಗನವಾಡಿಗಳು ಇದ್ದು ಹಲವಾರು ಚಟುವಟಿಕೆಗಳು ಯಶಸ್ವಿಯಾಗಿ ನಡೆಯುತ್ತಿವೆ. ಅವುಗಳ ಅಪ್‌ಡೇಟ್ ಸಹ ಸಮರ್ಪಕವಾಗಿ ಆಗಬೇಕು. ‘ಸುಪೋಷಿತ್ ಕಿಶೋರಿ ಮತ್ತು ಸಶಕ್ತ ನಾರಿ’ ನಿರ್ಮಾಣ ಈ ಎಲ್ಲ ಕಾರ್ಯಕ್ರಮಗಳ ಉದ್ದೇಶವಾಗಿದ್ದು ಜಿಲ್ಲೆಯಲ್ಲಿ ಯಶಸ್ವಿಯಾಗಿ ಇಂತಹ ತರಬೇತಿಗಳು ನಡೆಯಲಿ. ಹಾಗೂ ಭವಿಷ್ಯದಲ್ಲಿ ಅಪೌಷ್ಟಿಕತೆಯಿಂದ ಯಾವುದೇ ಜನತೆ ಬಳಲದಂತೆ ಆಗಲಿ ಎಂದು ಆಶಿಸಿದರು.

ವಿಧಾನ ಪರಿಷತ್ ಶಾಸಕರಾದ ಡಾ.ಧನಂಜಯ ಸರ್ಜಿ ಮಾತನಾಡಿ, ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ನಾವೆಲ್ಲ ಶ್ರಮಿಸಬೇಕು. ಆದ್ದರಿಂದ ಅವರು ಚಿಕ್ಕವರಾಗಿದ್ದಾಗಿನಿಂದ ಉತ್ತಮ ಅಡಿಪಾಯ ಅವರಲ್ಲಿ ಹಾಕಬೇಕು. 3 ರಿಂದ 6 ವರ್ಷದ ಮಕ್ಕಳನ್ನು ಸದೃಢವಾಗ ತಯಾರು ಮಾಡಬೇಕು. ಮಕ್ಕಳಲ್ಲಿ ಎಸ್‌ಕ್ಯು3ಆರ್ ಸೂತ್ರವನ್ನು ಅಳವಡಿಸಬೇಕು. ಎಸ್ ಎಂದರೆ ಸ್ಕಿçÃನಿಂಗ್ ಮಕ್ಕಳು ಎಲ್ಲವನ್ನು ಪರಿಶೀಲಿಸುವ, ಕ್ಯು ಎಂದರೆ ಕ್ವೆಷನಿಂಗ್ ಪ್ರಶ್ನಿಸುವ ಮತ್ತು 3 ಆರ್ ಎಂದರೆ ರೀಡ್, ರಿಸೈಟ್, ರಿವೈಸ್ ಮಾಡುವುದನ್ನು ಕಲಿಸಬೇಕು. ಇದರಿಂದ ಅವರಲ್ಲಿ ಓದುವ, ಓದಿದ್ದನ್ನು ನೆನಪಿಟ್ಟುಕೊಳ್ಳುವ ಶಕ್ತಿ ಹೆಚ್ಚುತ್ತದೆ.

ಮಕ್ಕಳಲ್ಲಿ ನಾವು ಮುಖ್ಯವಾಗಿ ಆತ್ಮವಿಶ್ವಾಸವನ್ನು ಬೆಳೆಸಬೇಕು. ಎದ್ದು ನಿಂತು ಪ್ರಶ್ನಿಸುವುದನ್ನು ಉತ್ತೇಜಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಪ್ರತಿಯೊಬ್ಬರಲ್ಲೂ ಒಂದೊAದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಬೇಕು. ಧನಾತ್ಮಕ ಸಲಹೆಗಳನ್ನು ನೀಡತ್ತಾ ಹೋಗಬೇಕು. ಅತಿ ಮುದ್ದಿನಿಂದ ಕೇಳಿದ್ದಕ್ಕೆಲ್ಲ ಯೆಸ್ ಎನ್ನಬಾರದು, ಹಣದ ಮತ್ತು ಹಸಿವಿನ ಮಹತ್ವ ತಿಳಿಸಬೇಕು, ಅವರು ಆಯ್ಕೆ ಮಾಡುವುದಕ್ಕೆ ಅವಕಾಶ ನೀಡಬೇಕು, ಸೇವಾ ಮನೋಭಾವ ಬೆಳೆಸಬೇಕು. ಟಿವಿ ಮೊಬೈಲ್‌ನಿಂದ ಅವರು ಹೊರಬೇಕೆಂದರೆ ಮೊದಲು ಪೋಷಕರು ಅದರಿಂದ ದೂರವಿರಬೇಕು. ಉತ್ತಮ ಆಚಾರ, ವಿಚಾರ, ಸಂಸ್ಕೃತಿ, ಸಂಸ್ಕಾರ ನೀಡಬೇಕು. ಬಂಡೆಯಿಂದ ಉತ್ತಮ ಶಿಲ್ಪ ರೂಪುಗೊಳ್ಳಲು ಪೋಷಕರು, ಗುರುಗಳು ಶ್ರಮಿಸಬೇಕು ಎಂದು ಕಿವಿಮಾತು ಹೇಳಿದ ಅವರು ತರಬೇತುದಾರರೊಂದಿಗೆ ಸಂವಾದ ನಡೆಸಿದರು.

ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ಮಾತನಾಡಿ, ಇಂದು ಇಲ್ಲಿ ತರಬೇತಿ ಪಡೆದ ತರಬೇತುದಾರರು ತಮ್ಮ ಅಧೀನದಲ್ಲಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಬೇಕು. 3 ರಿಂದ 6 ವರ್ಷದೊಳಗಿನ ಮಕ್ಕಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಧನಾತ್ಮಕ ಸಲಹೆಗಳನ್ನು ನೀಡಬೇಕು. ಗುಂಪಿನಲ್ಲಿರುವ ಮಕ್ಕಳಿಗೆ ಸ್ಪಂದಿಸುವ ಬಗೆಯನ್ನು ಅರಿತು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬಿತ್ತಬೇಕು. ಮುಂದಿನ ದಿನಗಳಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ತರಬೇತಿ ನೀಡಲಾಗುವುದು. ತಾವು ಸಹ ವಾರದಲ್ಲಿ ಮೂರು ದಿನ ಕ್ಷೇತ್ರ ಭೇಟಿ ನೀಡುವುದಾಗಿ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೃಷ್ಣಪ್ಪ ಬಿ.ಹೆಚ್ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಟರಾಜ್ ಕೆ.ಎಸ್. ಕಾರ್ಯಕ್ರಮದ ಕುರಿತು ಮಾತನಾಡಿದರು. ಯುನಿಸೆಫ್ ಕನ್ಸಲ್ಟೆಂಟ್‌ಗಳಾದ ಮನೋಜ್ ಸೆಬಾಸ್ಟಿನ್ ಅನೀಮಿಯಾ ಮುಕ್ತ ಭಾರತ ಕುರಿತು ಹಾಗೂ ಕೆ.ವಿಶ್ವನಾಥ್ ಪೌಷ್ಟಿಕ ಆಹಾರ ಹಾಗೂ ಗ್ರೋಥ್ ಮಾನಿಟರಿಂಗ್ ಕುರಿತು ಮಾತನಾಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಾ.ಸಂತೋಷ್ ಕುಮಾರ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಮಲ್ಲಪ್ಪ ಓ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ, ಸಿಡಿಪಿಓ ಗಳು, ಅಂಗನವಾಡಿ ಸೂಪರ್‌ವೈಸರ್‌ಗಳು, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳು ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

BIG NEWS: ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಅಡುಗೆ ಎಣ್ಣೆ ದರ ಹೆಚ್ಚಳ | Cooking Oil Prices Hike

‘ಅಕ್ಸೆಂಚರ್ ಉದ್ಯೋಗಿ’ಗಳಿಗೆ ಬಿಗ್ ಶಾಕ್: 6 ತಿಂಗಳು ಬಡ್ತಿ ವಿಳಂಬ, ಭಾರತದಲ್ಲಿ ವೇತನವೂ ಹೆಚ್ಚಳವಿಲ್ಲ | Accenture Delays Promotions

Share. Facebook Twitter LinkedIn WhatsApp Email

Related Posts

BREAKING: ಬೆಂಗಳೂರು: ಮಾಜಿ ಕಾರ್ಪೊರೇಟರ್ ವಿರುದ್ಧ ವಂಚನೆ ಆರೋಪ: ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆಗೆ ಯತ್ನ!

10/04/2026 3:31 PM1 Min Read

BIG NEWS : ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಕೋರ್ಟ್​​ ಗ್ರೀನ್​​ ಸಿಗ್ನಲ್​​ : ಆದ್ರೆ ಈ ಷರತ್ತುಗಳು ಅನ್ವಯ

10/04/2026 3:27 PM1 Min Read

ತನ್ನ ಪ್ರಾಣ ಕೊಟ್ಟು ಇಬ್ಬರಿಗೆ ಮರುಜನ್ಮ ನೀಡಿದ ಮಹಾದಾನಿ: ಈ ಹುಲಿಕಲ್ ಘಾಟಿಯ ರಿಯಲ್ ಹೀರೋ ಕಥೆ ಓದಿ!

10/04/2026 3:22 PM2 Mins Read
Recent News

BREAKING: ಬೆಂಗಳೂರು: ಮಾಜಿ ಕಾರ್ಪೊರೇಟರ್ ವಿರುದ್ಧ ವಂಚನೆ ಆರೋಪ: ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆಗೆ ಯತ್ನ!

10/04/2026 3:31 PM

BIG NEWS : ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಕೋರ್ಟ್​​ ಗ್ರೀನ್​​ ಸಿಗ್ನಲ್​​ : ಆದ್ರೆ ಈ ಷರತ್ತುಗಳು ಅನ್ವಯ

10/04/2026 3:27 PM

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖ್ಯಾತ ನಿರ್ದೇಶಕ ರಂಜಿತ್‌ಗೆ ಜಾಮೀನು ಮಂಜೂರು | Filmmaker Ranjith

10/04/2026 3:24 PM

ತನ್ನ ಪ್ರಾಣ ಕೊಟ್ಟು ಇಬ್ಬರಿಗೆ ಮರುಜನ್ಮ ನೀಡಿದ ಮಹಾದಾನಿ: ಈ ಹುಲಿಕಲ್ ಘಾಟಿಯ ರಿಯಲ್ ಹೀರೋ ಕಥೆ ಓದಿ!

10/04/2026 3:22 PM
State News
KARNATAKA

BREAKING: ಬೆಂಗಳೂರು: ಮಾಜಿ ಕಾರ್ಪೊರೇಟರ್ ವಿರುದ್ಧ ವಂಚನೆ ಆರೋಪ: ಡೆತ್ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆಗೆ ಯತ್ನ!

By kannadanewsnow0910/04/2026 3:31 PM KARNATAKA 1 Min Read

ಬೆಂಗಳೂರು: ಮಾಜಿ ಕಾರ್ಪೊರೇಟರ್ ಒಬ್ಬರಿಂದ ತನಗೆ ವಂಚನೆಯಾಗಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ಡೆತ್ ನೋಟ್ ಬರೆದಿಟ್ಟು ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ…

BIG NEWS : ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಕೋರ್ಟ್​​ ಗ್ರೀನ್​​ ಸಿಗ್ನಲ್​​ : ಆದ್ರೆ ಈ ಷರತ್ತುಗಳು ಅನ್ವಯ

10/04/2026 3:27 PM

ತನ್ನ ಪ್ರಾಣ ಕೊಟ್ಟು ಇಬ್ಬರಿಗೆ ಮರುಜನ್ಮ ನೀಡಿದ ಮಹಾದಾನಿ: ಈ ಹುಲಿಕಲ್ ಘಾಟಿಯ ರಿಯಲ್ ಹೀರೋ ಕಥೆ ಓದಿ!

10/04/2026 3:22 PM

SHOCKING: ವಾದ ಮಂಡಿಸುತ್ತಿದ್ದಾಗಲೇ ಹೃದಯಾಘಾತದಿಂದ ವಕೀಲ ಸಾವು

10/04/2026 3:18 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.