ಹೈದರಾಬಾದ್ : ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕಿರಿಯ ಸಹೋದರ ರಾಮಮೂರ್ತಿ ನಾಯ್ಡು (72) ದೀರ್ಘಕಾಲದ ಅನಾರೋಗ್ಯದಿಂದ ಶನಿವಾರ ಹೈದರಾಬಾದ್’ನಲ್ಲಿ ನಿಧನರಾಗಿದ್ದಾರೆ.
ಹೃದಯ-ಉಸಿರಾಟದ ಸಮಸ್ಯೆಯಿಂದಾಗಿ ರಾಮಮೂರ್ತಿ ನಾಯ್ಡು ಅವರನ್ನ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಮತ್ತು ವೆಂಟಿಲೇಟರ್’ನಲ್ಲಿದ್ದರು.
ನವೆಂಬರ್ 14 ರಂದು ರಾತ್ರಿ 8 ಗಂಟೆಗೆ ಹೃದಯ ಸ್ತಂಭನದ ಸ್ಥಿತಿಯಲ್ಲಿ ಅವರನ್ನು ಹೈದರಾಬಾದ್ನ ಗಚಿಬೌಲಿಯ ಎಐಜಿ ಆಸ್ಪತ್ರೆಗೆ ಕರೆತರಲಾಯಿತು. ನವೆಂಬರ್ 16 ರಂದು ಮಧ್ಯಾಹ್ನ 12.45ಕ್ಕೆ ಅವರು ನಿಧನರಾದರು ಎಂದು ಆಸ್ಪತ್ರೆ ತಿಳಿಸಿದೆ.
ತೆಲುಗು ದೇಶಂ ಪಕ್ಷವನ್ನು (TDP) ಪ್ರತಿನಿಧಿಸಿ 1994 ರ ಚುನಾವಣೆಯಲ್ಲಿ ಚಂದ್ರಗಿರಿ ಕ್ಷೇತ್ರದಿಂದ ಗೆದ್ದ ನಂತರ ರಾಮಮೂರ್ತಿ ನಾಯ್ಡು ಆಂಧ್ರಪ್ರದೇಶ ವಿಧಾನಸಭೆಗೆ ಆಯ್ಕೆಯಾದರು. ಅವರು ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾದ ನಟ ಮತ್ತು ಚಲನಚಿತ್ರ ನಿರ್ಮಾಪಕ ನಾರಾ ರೋಹಿತ್ ಅವರ ತಂದೆ.
Fact Cheak : ಧೋನಿ ಗೌರವಾರ್ಥ RBI ‘₹7 ನಾಣ್ಯ’ ಬಿಡುಗಡೆ ಮಾಡಿದ್ಯಾ? ವೈರಲ್ ಸುದ್ದಿಯ ಸತ್ಯಾಂಶ ಇಲ್ಲಿದೆ!