ಬೆಂಗಳೂರು: ಸಿಎಂ ಸಿದ್ದರಾಮಯ್ಯ ಅವರನ್ನು ಏಕವಚನದಲ್ಲಿ ಮಾತನಾಡಿರುವ ಸಂಸದ ಅನಂತಕುಮಾರ್ ಹೆಗಡೆಗೆ ಶಾಸಕ ಪ್ರದೀಪ್ ಅವರು ಎಚ್ಚರಿಕೆ ನೀಡಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ದಾರೆ, ನಾಲಿಗೆಯನ್ನು ಬಿಗಿಯಾಗಿ ಇಟ್ಟುಕೊಂಡು ಮಾತನಾಡಿ, ನಮ್ಮ ಎದೆಯಲ್ಲಿ ಕೂಡ ರಾಮ, ಅಂಬೇಡ್ಕರ್ ಇದ್ದಾರೆ ನಿಮಗೆ ಮಾತ್ರ ದೇವರಲ್ಲ, ಹಿಂದೂ ಧರ್ಮ ನಿಮ್ಮ ಅಪ್ಪನ್ನ ಮನೆ ಸ್ವತ್ತಲ್ಲ ಅಂತ ಹೇಳಿದ ಅವರು, ಅಹಿಂದ ನಾಯಕನ ಬಗ್ಗೆ ಮಾತನಾಡುವ ಮುನ್ನ ನಾಲಿಗೆಯನ್ನು ಬಿಗಿಯಾಗಿ ಹಿಡಿದು ಮಾತನಾಡಿ ಅಂತ ಹೇಳಿದರು.