ಬೆಂಗಳೂರು: ಗೋಹತ್ಯೆ ಶಾಪದಿಂದ ಇಂದಿರಾ, ಸಂಜಯ್ ಗಾಂಧಿ ಸತ್ತದ್ದು ಅಂತ ಹೇಳುವ ಮೂಲಕ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಈಗ ವಿವಾದಕ್ಕೆ ಕಾರಣವಾಗಿದೆ.
ಅವರುಕುಮಟಾದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತ ಈ ಬಗ್ಗೆ ತಿಳಿಸಿದರು. ಇದೇ ವೇಳೆ ಅವರು ಮಾತನಾಡಿ, ಗೋಹತ್ಯೆ ನಿಷೇಧಕ್ಕಾಗಿ ನಡೆದ ಮಹತ್ವದ ಆಂದೋಲನದ ಸಂದರ್ಭದಲ್ಲಿ ಪೂಜ್ಯ ಯತಿ ಕರ್ಪಾತ್ರಿ ಮಹಾರಾಜರ ಶಾಪದ ಫಲವಾಗಿ “ಗೋಪಾಷ್ಟಮಿ ದಿನದಂದು ಇಂದಿರಾ ಗಾಂಧಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು ಎನ್ನುಮಾತು ಹೇಳಿದರು. ಇದಲ್ಲದೇ ವಿಮಾನ ದುರಂತದಲ್ಲಿ ಸಂಜಯ್ ಗಾಂಧಿ ಸತ್ತಿದ್ದು ಗೋಪಾಷ್ಠಮಿಯಂದು, ಇಂದಿರಾಗಾಂಧಿಗೆ ಗುಂಡಿಟ್ಟು ಕೊಂದಿದ್ದು ಗೋಪಾಷ್ಠಮಿಯಂದು. ಬಾಂಬ್ ಬ್ಲಾಸ್ಟ್‍ನಲ್ಲಿ ಸತ್ತಿದ್ದು ಅಂತ ಹೇಳಿದರು. ಶತಮಾನಗಳು ಕಳೆದ ಬಳಿಕವೂ ಹಿಂದೂ ಸಮಾಜ ಒಡೆಯುವ ಕೆಲಸ ಆಗಬಾರದು. ಮತ್ತೆ ನಾವೇ ಪ್ರತ್ನಿಸಿದರೂ ಸಮಾಜ ಒಡೆಯದಂತೆ ಸದೃಢಗೊಳಿಸಬೇಕು ಎಂದು ಕರೆ ನೀಡಿದರು.