ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವು ದಿನಗಳು ಉಳಿದಿದ್ದು, ಈ ನಡುವೆ ಎಲ್ಲಾ ರಾಜಕೀಯ ಪಾರ್ಟಿಗಳು ತಮ್ಮ ಅಭ್ಯರ್ಥೀಗಳ ಹೆಸರನ್ನು ಬಿಡುಗಡೆ ಮಾಡುತ್ತಿವೆ.ಈ ನಡುವೆ ಬಿಜೆಪಿ ಅದರಲ್ಲೂ ರಾಜ್ಯ ಬಿಜೆಪಿಗೆ ನಿನ್ನೆ ಅಂದರೆ ಬುಧವಾರ ಬಿಡುಗಡೆ ಮಾಡಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಹಲವು ಅಚ್ಚರಿಗಳನ್ನು ಕಾಣಬಹುದಾಗಿದೆ.
ಬೆಂಗಳೂರು ಉತ್ತರದಿಂದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಮೈಸೂರಿನಿಂದ ಪ್ರತಾಪ್ ಸಿಂಹ ಮತ್ತು ದಕ್ಷಿಣ ಕನ್ನಡದಿಂದ ಮಾಜಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಒಂಬತ್ತು ಹಾಲಿ ಸಂಸದರನ್ನು ಪಕ್ಷ ಬದಲಾಯಿಸಿದೆ. ಉಡುಪಿ-ಚಿಕ್ಕಮಗಳೂರಿನಿಂದ ಮರು ನಾಮಕರಣಕ್ಕೆ ಪಕ್ಷದೊಳಗೆ ಸ್ವಲ್ಪ ಪ್ರತಿರೋಧವನ್ನು ಎದುರಿಸುತ್ತಿದ್ದ ಕೇಂದ್ರ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ಪ್ರಸ್ತುತ ಸದಾನಂದ ಗೌಡ ಪ್ರತಿನಿಧಿಸುವ ಬೆಂಗಳೂರು ಉತ್ತರಕ್ಕೆ ಸ್ಥಳಾಂತರಿಸಲಾಗಿದೆ.
ಕರ್ನಾಟಕ ಪಟ್ಟಿಯಲ್ಲಿರುವ 20 ಅಭ್ಯರ್ಥಿಗಳ ಪೈಕಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕಟೀಲ್, ಎರಡು ಬಾರಿ ಮೈಸೂರು ಸಂಸದ ಪ್ರತಾಪ್ ಸಿಂಹ ಸೇರಿದಂತೆ 9 ಸಂಸದರಿಗೆ ಈ ಬಾರಿ ಟಿಕೆಟ್ ನೀಡಲಾಗಿಲ್ಲ. ಅಣ್ಣಾಸಾಹೇಬ್ ಜೊಲ್ಲೆ (ಚಿಕ್ಕೋಡಿ), ಪಿ.ಸಿ.ಗದ್ದಿಗೌಡರ್ (ಬಾಗಲಕೋಟೆ), ರಮೇಶ್ ಜಿಗಜಿಣಗಿ (ಬಿಜಾಪುರ), ಉಮೇಶ್ ಜಾಧವ್ (ಗುಲ್ಬರ್ಗಾ), ಭಗವಂತ ಖೂಬಾ (ಬೀದರ್), ಪ್ರಹ್ಲಾದ್ ಜೋಶಿ (ಧಾರವಾಡ), ಬಿ.ವೈ.ರಾಘವೇಂದ್ರ (ಶಿವಮೊಗ್ಗ), ಪಿ.ಸಿ.ಮೋಹನ್ (ಬೆಂಗಳೂರು ಕೇಂದ್ರ), ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ). ಜಿ.ಎಸ್.ಬಸವರಾಜ್ ಪ್ರತಿನಿಧಿಸುತ್ತಿದ್ದ ತುಮಕೂರಿನಿಂದ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ಟಿಕೆಟ್ ನೀಡಲಾಗಿದ್ದು, ದಾವಣಗೆರೆ ಕ್ಷೇತ್ರದಲ್ಲಿ ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ ಬದಲಿಗೆ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಲಾಗಿದೆ.
BIGG NEWS: ಉತ್ತರಾಖಂಡದ UCC ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ!
ಕೊಪ್ಪಳದಲ್ಲಿ ಕರಡಿ ಸಂಗಣ್ಣ ಬದಲಿಗೆ ಡಾ.ಬಸವರಾಜ್ ಕ್ಯಾವಟರ್, ಬಳ್ಳಾರಿಯಲ್ಲಿ ವೈ.ದೇವೇಂದ್ರಪ್ಪ ಬದಲಿಗೆ ಶ್ರೀರಾಮುಲು, ಹಾವೇರಿಯಲ್ಲಿ ಶಿವಕುಮಾರ ಉದಾಸಿ ಬದಲಿಗೆ ಬೊಮ್ಮಾಯಿ, ಕಟೀಲ್ ಬದಲಿಗೆ ಬ್ರಿಜೇಶ್ ಚೌಟ, ಮೈಸೂರಿನಲ್ಲಿ ಪ್ರತಾಪ್ ಸಿಂಹ ಬದಲಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಚಾಮರಾಜನಗರದಲ್ಲಿ ಶ್ರೀನಿವಾಸ್ ಪ್ರಸಾದ್ ಬದಲಿಗೆ ಎಸ್.ಬಾಲರಾಜ್ ಅವರಿಗೆ ಟಿಕೆಟ್ ನೀಡಲಾಗಿದೆ. ಚಾಮರಾಜನಗರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಮತ್ತು ಹಾವೇರಿ ಸಂಸದ ಶಿವಕುಮಾರ ಉದಾಸಿ ಅವರು ಈಗಾಗಲೇ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಲೋಕಸಭೆ ಚುನಾವಣೆ 2024: ಬಿಜೆಪಿ ಯಾವ ಜಾತಿಗೆ ಎಷ್ಟು ಟಿಕೆಟ್? ಇಲ್ಲಿದೆ ಮಾಹಿತಿ
ಈ ನಡುವೆ ಬಿಡುಗಡೆಯಾಗಿರುವ ಪಟ್ಟಿಯನ್ನು ಗಮನಸಿದರೇ ಈ ವಾರದೊಳಗೆ ಬಿಡುಗಡೆ ಮಾಡಲಿರುವ ಬಿಜೆಪಿ ಮೂರನೇ ಪಟ್ಟಿಯಲ್ಲಿ ಸಂಸದ ಅನಂತ್ ಕುಮಾರ್ ಹೆಗ್ದೆಗೆ ಕೂಡ ಟಿಕೆಟ್ ಟಿಕೆಟ್ ಮೀಸ್ ಆಗಲಿದೆ ಎನ್ನಲಾಗಿದೆ. ವಿವಾದತ್ಮಕ ಹೇಳಿಕೆಯಿಂದಲೇ ಪ್ರಸಿದ್ದಿ ಪಡೆದಿರುವ ಅನಂತ್ ಕುಮಾರ್ ಹೆಗ್ದೆಗೆ ಟಿಕೆಟ್ ನೀಡದೆ ಕಾಗೇರಿಯವರಿಗೆ ಟಿಕೆಟ್ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎನ್ನುತ್ತಿವೆ ರಾಜಕೀಯ ಲೆಕ್ಕಚಾರಗಳು, ಇವೆಲ್ದಕ್ಕೂ ಕೂಡ ಈ ವಾರದೊಳಗೆ ಉತ್ತರ ಸಿಗಲಿದ್ದು, ಅಲ್ಲಿ ತನಕ ಕಾದು ನೋಡಬೇಕಾಗಿದೆ.