ಕಾರವಾರ: ಕೆರೆಗೋಡು ಹನುಮ ಧ್ವಜ ವಿವಾದ ಮಾಸುವ ಮುನ್ನವೇ, ಭಟ್ಕಳದ ತೆಂಗಿನಗುಂಡಿಯಲ್ಲಿ ಇಂದು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ ಅವರು ಹನುಮ ಧ್ವಜವನ್ನು ಹಾರಿಸೋ ಮೂಲಕ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ತೆಂಗಿನಗುಂಡಿ ಗ್ರಾಮದಲ್ಲಿ ಧ್ವಜ ಕಟ್ಟೆ ಮತ್ತು ಸಾವರ್ಕರ್ ನಾಮಫಲಕದ ಬಗ್ಗೆ ವಿವಾದ ಎದ್ದಿತ್ತು. ಈ ಕಾರಣದಿಂದಾಗಿ ತಾಲೂಕು ಆಡಳಿತವು ಆ ಧ್ವಜಕಟ್ಟೆ ಹಾಗೂ ಹನುಮ ಧ್ವಜವನ್ನು ತೆರವು ಮಾಡಿತ್ತು. ಆದ್ರೇ ಇದಕ್ಕೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ವಿರೋಧವನ್ನು ವ್ಯಕ್ತ ಪಡಿಸಿದ್ದರು.
ಈ ಬೆನ್ನಲ್ಲೇ ತೆಂಗಿನಗುಂಡಿ ಗ್ರಾಮಕ್ಕೆ ಬಿಜೆಪಿ ಕಾರ್ಯಕರ್ತರ ಸಭೆಗೆಂದು ಆಗಮಿಸಿದ ವೇಳೆಯಲ್ಲಿ ಸಂಸದ ಅನಂತ್ ಕುಮಾರ್ ಹೆಗಡೆ ಹಾಗೂ ಕಾರ್ಯಕರ್ತರು ಸೇರಿಕೊಂಡು ತೆರವುಗೊಳಿಸಲಾಗಿದ್ದಂತ ಜಾಗದಲ್ಲೇ ಹನುಮಧ್ವಜವನ್ನು ಹಾರಿಸಿದ್ದಾರೆ. ಜೊತೆಗೆ ಸಾವರ್ಕರ್ ನಾಮಫಲಕವನ್ನು ಕೂಡ ಹಾಕಲಾಗಿದೆ.
BREAKING: ಇತಿಹಾಸ ಬರೆದ ‘ಭಾರತೀಯ ಟೇಬಲ್ ಟೆನ್ನಿಸ್’ ಪುರುಷ-ಮಹಿಳೆಯರ ತಂಡ: ‘ಪ್ಯಾರಿಸ್ ಒಲಂಪಿಕ್ಸ್’ಗೆ ಅರ್ಹತೆ
ಬಿಜೆಪಿ ‘Modi ka Parivar’ ಅಭಿಯಾನ ಆರಂಭ : “ಮೋದಿಗೆ ಕುಟುಂಬವಿಲ್ಲ” ಲಾಲು ಹೇಳಿಕೆಗೆ ತಿರುಗೇಟು