ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅಪರೂಪದಲ್ಲಿ ಅಪರೂಪ ಎನ್ನುವಂತೆ ಕಡಲಾಚೆಯ ಪ್ರೇಮಕಥೆಯೊಂದು ಬೆಳಕಿಗೆ ಬಂದಿದೆ. ಚಿಕ್ಕಮಗಳೂರಿನ ಯುವಕನಿಗೆ ಚೀನಾದ ಯುವತಿಯೊಬ್ಬಳು ಜೋಡಿಯಾಗಿದ್ದಾಳೆ.
ಹೌದು ಹೀಗೊಂದು ಕಾಫಿನಾಡಲ್ಲಿ ಕಡಲಾಚೆಯ ಪ್ರೇಮಕಥೆ ಹೊರಬಿದ್ದಿದೆ. ಪ್ರೀತಿ ಎಂಬುದು ದೇಶ, ಭಾಷೆ, ಗಡಿಯನ್ನು ಮೀರಿದ್ದು ಎಂಬುದಕ್ಕೆ ಸಾಕ್ಷಿಯಾಗಿದೆ. ಚಿಕ್ಕಮಗಳೂರಿನ ಹೌಸಿಂಗ್ ಬೋರ್ಡಿನ ಯುವಕನಿಗೆ ಚೀನಾದ ಯುವತಿಯೊಬ್ಬಳು ಜೋಡಿಯಾಗಿದ್ದಾಳೆ. ಇವರಿಬ್ಬರ ವಿವಾಹವನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿಸಲಾಗಿದೆ.
ಚಿಕ್ಕಮಗಳೂರಿನ ಯುವಕ ರೂಪಕ್ ಎಂಬಾತ ಚೀನಾ ಮೂಲದ ಜೇಡ್ ಎಂಬಾಕೆಯನ್ನು ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಕೈ ಹಿಡಿದಿದ್ದಾನೆ. ಯುವತಿಯ ತಂದೆ-ತಾಯಿಯೇ ಚೀನಾದಿಂದ ಪುತ್ರಿಯನ್ನು ಕರೆತಂದು, ಯುವಕನಿಖೆ ಧಾರೆ ಎರೆದುಕೊಟ್ಟು ಅಪರೂಪದ ಮದುವೆಗೆ ಸಾಕ್ಷಿಯಾಗಿ ಗಮನ ಸೆಳೆದರು.
ಆಸ್ಟ್ರೇಲಿಯಾದಲ್ಲಿ ಓದುವಾಗ ರೂಪಕ್ ಹಾಗೂ ಜೇಡ್ ಮಧ್ಯೆ ಪ್ರೇಮಾಂಕುರವಾಗಿತ್ತು. ಈ ವಿಚಾರವನ್ನು ಇಬ್ಬರು ಪರಸ್ಪರ ಕುಟುಂಬಸ್ಥರಿಗೆ ಹೇಳಿಕೊಂಡಿದ್ದರು. ಅಲ್ಲದೇ ಮದುವೆಗೆ ಒಪ್ಪಿಸಿದ್ದರು. ಅಂತಿಮವಾಗಿ ಭಾರತ-ಚೀನಾ ಸಂಪ್ರದಾಯ ಎರಡು ಒಂದೇ ಎನ್ನುವ ರೀತಿಯಲ್ಲಿ ರೂಪಕ್ -ಜೆಡ್ ಹಿಂದೂ ಸಂಪ್ರದಾಯದಂತೆ ಮದುವೆಯಾಗುವ ಮೂಲಕ ದಾಂಪತ್ಯಕ್ಕೆ ಕಾಲಿಟ್ಟಿದದಾರೆ.
ಲೋಕಭವನಕ್ಕೆ ಬಾಂಬ್ ಬೆದರಿಕೆ ಸಂದೇಶ: ದುಷ್ಕರ್ಮಿಗಳ ವಿರುದ್ಧ ಕೇಸ್ ದಾಖಲು
ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೆ ಮುನ್ನವೇ ಕಾಡ್ಗಿಚ್ಚು ನಿಯಂತ್ರಣಕ್ಕೆ ಈ ಖಡಕ್ ಸೂಚನೆ ಕೊಟ್ಟ ಸಚಿವ ಈಶ್ವರ್ ಖಂಡ್ರೆ








