ಬೆಂಗಳೂರು: ನಗರದಲ್ಲಿ ಪತ್ನಿಗೆ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ಬೆಂಗಳೂರಲ್ಲಿ ಐಎಸ್ ಡಿ ಡಿವೈಎಸ್ಪಿ ಶಂಕ್ರಪ್ಪ ವಿರುದ್ಧ ಎಫ್ಐಆರ್ ಆಗಿದೆ.
ಕಾಲೇಜಿಗೆ ಹೋಗುತ್ತಿರುವ ಮಗನಿದ್ದರೂ ಬೇರೊಬ್ಬ ಹೆಣ್ಣಿನ ಸಂಪರ್ಕ ಮಾಡಿದ್ದಂತ ಐಎಸ್ ಡಿ ಡಿವೈಎಸ್ಪಿ ಶಂಕ್ರಪ್ಪ, ಪತ್ನಿಗೆ ಹಲ್ಲೆ, ಕಿರುಕುಳ ನೀಡುತ್ತಿದ್ದರು. ಅಲ್ಲದೇ ಮಾನಸಿಕ ಕಿರುಕುಳ ನೀಡಿದ್ದಾರೆ. ವರದಕ್ಷಿಣೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಅಕ್ರಮವಾಗಿ ಬೇರೊಂದು ಹೆಣ್ಣಿನ ಜೊತೆಗೆ ಮದುವೆಯಾಗಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂಬುದಾಗಿ ಅವರ ಪತ್ನಿ ಡಿಜಿ ಮತ್ತು ಐಜಿಪಿಗೆ ದೂರು ನೀಡಿದ್ದಾರೆ.
ನನ್ನ ಸಂಸಾರ ಹಾಳು ಮಾಡಬೇಡಿ ಎಂಬುದಾಗಿಯೂ ಡಿವೈಎಸ್ಪಿ ಪತ್ನಿ ಪರಿ ಪರಿಯಾಗಿ ಬೇಡಿದರೂ ಕೇಳದೇ ಬೆದರಿಕೆ ಹಾಕಿದ್ದಾರೆ ಎಂಬುದಾಗಿಯೂ ಆರೋಪಿಸಿದ್ದಾರೆ. ಈ ದೂರು ಆಧರಿಸಿ ಬೆಂಗಳೂರಿನ ಈಶಾನ್ಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಐಎಸ್ ಡಿ ಡಿವೈಎಸ್ಪಿ ಶಂಕ್ರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದೆ.