ಬೆಂಗಳೂರು: ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕೇಂದ್ರ ಸಚಿವರ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದನು. ಆದರೇ ಅವರು ಕೇಂದ್ರ ಸಚಿವರು ಅಲ್ಲ ಎಂಬುದಾಗಿ ತನಿಖೆಯಲ್ಲಿ ದೃಢಪಟ್ಟಿತ್ತು. ಹೀಗಾಗಿ ಅಪರಿಚಿತ ವ್ಯಕ್ತಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಎಂಬುದಾಗಿ ಹೇಳಿ ಭಾನುವಾರ ಮಧ್ಯಾಹ್ನ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ 2 ಬಾರಿ ಕರೆ ಮಾಡಲಾಗಿತ್ತು. ಮೊದಲ ಬಾರಿಗೆ ಕರೆ ಮಾಡಿದ್ದಂತ ಅಪರಿಚಿತ ರಾಜ್ಯಪಾಲರ ಆರೋಗ್ಯವನ್ನು ವಿಚಾರಿಸಿದ್ದರೇ, ಕೇಂದ್ರ ಸಚಿವರ ಆರೋಗ್ಯವನ್ನು ರಾಜ್ಯಪಾಲರು ವಿಚಾರಿಸಿದ್ದರು.
ಆರ್ಧ ಗಂಟೆಯ ನಂತ್ರ ಮತ್ತೆ ರಾಜ್ಯಪಾಲರಿಗೆ ಕರೆ ಮಾಡಿದ್ದಂತ ಅಪರಿಚಿತ ವ್ಯಕ್ತಿ, ಅದೇ ರೀತಿ ಮಾತನಾಡಿದ್ದನು. ಈ ವೇಳೆ ಅನುಮಾನಗೊಂಡಂತ ರಾಜ್ಯಪಾಲರು ಆತನ ಬಗ್ಗೆ ವಿಚಾರಿಸಿದಾಗ ಏಕಾಏಕಿ ಕರೆ ಕಡಿತವಾಗಿತ್ತು. ಈ ಬಗ್ಗೆ ಪರಿಶೀಲಿಸಿದಾಗ ಆತ ಕೇಂದ್ರ ಸಚಿವ ಅಲ್ಲ ನಕಲಿ ವ್ಯಕ್ತಿ ಅನ್ನೋದು ತಿಳಿದು ಬಂದಿತ್ತು. ಹೀಗಾಗಿ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದ್ದು, ಎಫ್ಐಆರ್ ದಾಖಲಾಗಿದೆ. ಇದೀಗ ಪೊಲೀಸರ ತನಿಖೆ ನಂತ್ರ ರಾಜ್ಯಪಾಲರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಯಾರು ಎಂಬುದು ತಿಳಿದು ಬರಬೇಕಿದೆ.