ಅಫ್ಘಾನಿಸ್ತಾನ: ಅಫ್ಘಾನಿಸ್ತಾನದಲ್ಲಿ ಕಳೆದ ಒಂದು ದಿನಗಳ ಹಿಂದೆ ಉಂಟಾದಂತ ಭೂಕಂಪದಲ್ಲಿ 1,400 ಮಂದಿ ಸಾವನ್ನಪ್ಪಿದ್ದಾರೆ. ಈ ಬೆನ್ನಲ್ಲೇ ಇಂದು ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆಯಷ್ಟು ಮತ್ತೆ ಭೂಕಂಪನ ಉಂಟಾಗಿದೆ. ಹೀಗಾಗಿ ಅಫ್ಘಾನಿಸ್ತಾನದ ಜನತೆ ಬೆಚ್ಚಿ ಬೀಳುವಂತೆ ಆಗಿದೆ.
ಮಂಗಳವಾರ ಮಧ್ಯಾಹ್ನ 12:29 ಕ್ಕೆ ಅಫ್ಘಾನಿಸ್ತಾನದ ಜಲಾಲಾಬಾದ್‌ನಿಂದ 34 ಕಿ.ಮೀ. ಈಶಾನ್ಯ ದಿಕ್ಕಿನಲ್ಲಿ 5.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
10 ಕಿ.ಮೀ ಆಳದ ಭೂಕಂಪದ ಕೇಂದ್ರ ಬಿಂದು ಆರಂಭದಲ್ಲಿ 34.67 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 70.68 ಡಿಗ್ರಿ ಪೂರ್ವ ರೇಖಾಂಶದಲ್ಲಿತ್ತು ಎಂದು ನಿರ್ಧರಿಸಲಾಗಿತ್ತು.
ಸೋಮವಾರ ಪೂರ್ವ ಅಫ್ಘಾನಿಸ್ತಾನದಲ್ಲಿ ಸಂಭವಿಸಿದ 6.0 ತೀವ್ರತೆಯ ಪ್ರಬಲ ಭೂಕಂಪ ಉಂಟಾಗಿತ್ತು. ಈ ಭೂಕಂಪನದಿಂದಾಗಿ ಈವರೆಗೆ 1,400ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ ಸಾವಿನ ಸಂಖ್ಯೆ ಹೆಚ್ಚಾಗುವ ಮೊದಲೇ ಅಫ್ಘಾನಿಸ್ತಾನದಲ್ಲಿರುವ ವಿಶ್ವಸಂಸ್ಥೆಯು ಪರಿಸ್ಥಿತಿಯಿಂದ “ತೀವ್ರ ದುಃಖಿತವಾಗಿದೆ” ಎಂದು ಹೇಳಿದೆ.
ಎಕ್ಸ್ ಕುರಿತು ಹೇಳಿಕೆಯಲ್ಲಿ, ಯುಎನ್ ತನ್ನ ತಂಡಗಳು ಈಗಾಗಲೇ “ತುರ್ತು ನೆರವು ಮತ್ತು ಜೀವ ಉಳಿಸುವ ಬೆಂಬಲವನ್ನು ನೀಡಲು” ಸ್ಥಳದಲ್ಲಿವೆ ಎಂದು ಹೇಳಿದೆ. “ನಮ್ಮ ಆಲೋಚನೆಗಳು ಪೀಡಿತ ಸಮುದಾಯಗಳೊಂದಿಗೆ ಇವೆ” ಎಂದು ಹೇಳಿಕೆ ಸೇರಿಸಲಾಗಿದೆ.
ಇದರ ನಡುವೆ ಒಂದು ದಿನದ ನಂತ್ರ ಇಂದು ಮತ್ತೆ 5.2 ತೀವ್ರತೆಯಲ್ಲಿ ಭೂಕಂಪನ ಉಂಟಾಗಿದೆ. ಈ ಮೂಲಕ ಅಫ್ಘಾನಿಸ್ತಾನ ಜನತೆಯನ್ನು ಮತ್ತಷ್ಟು ಭೂಕಂಪನದಿಂದ ನಲುಗುವಂತೆ ಮಾಡಿದೆ.
GST ದರ ಸರಳೀಕರಣದಿಂದ ರಾಜ್ಯಕ್ಕೆ ವಾರ್ಷಿಕ 15,000 ಕೋಟಿ ಖೋತಾ: ಸಚಿವ ಕೃಷ್ಣ ಬೈರೇಗೌಡ ಆತಂಕ
BREAKING: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ಪಾಲಿಕೆಗೆ ಆಯುಕ್ತರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ