ಕೆಎನ್‍ಎನ್ ಡಿಜಿಟಲ್ ಡೆಸ್ಕ್ : ಪೇರಳೆ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಪೇರಳೆ ಹಣ್ಣಿನ ರುಚಿ ಅದ್ಭುತವಾಗಿದ್ದು, ಎಲ್ಲರೂ ತುಂಬಾ ಇಷ್ಟಪಟ್ಟು ತಿನ್ನುತ್ತಾರೆ. ಆದ್ರೆ, ಈ ಹಣ್ಣು ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು. ಈ ಹಣ್ಣಿನಲ್ಲಿ ವಿಟಮಿನ್ ಬಿ6, ಕಾರ್ಬೋಹೈಡ್ರೇಟ್, ಪೊಟಾಶಿಯಂ, ವಿಟಮಿನ್ ಸಿ, ಕ್ಯಾಲ್ಸಿಯಂ, ಕಬ್ಬಿಣದಂತಹ ಪ್ರಮುಖ ಪೋಷಕಾಂಶಗಳಿವೆ. ಇವು ನಿಮ್ಮ ಆರೋಗ್ಯಕ್ಕೆ ಪರಿಣಾಮಕಾರಿ. ಪೇರಳೆ ಫೈಟೊನ್ಯೂಟ್ರಿಯೆಂಟ್’ಗಳು, ಆಂಟಿಆಕ್ಸಿಡೆಂಟ್’ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಹೊಟ್ಟೆಯ ಕಾಯಿಲೆಗಳಿಗೆ ಇದು ತುಂಬಾ ಸಹಕಾರಿ. ಪೇರಳೆಯನ್ನ ಪ್ರತಿನಿತ್ಯ ನಿಯಮಿತವಾಗಿ ಸೇವಿಸುವುದರಿಂದ ಹೊಟ್ಟೆಯ ಎಲ್ಲಾ ಕಾಯಿಲೆಗಳಿಗೆ ಪರಿಹಾರ ಸಿಗುತ್ತದೆ. ಮಲಬದ್ಧತೆ ಮತ್ತು ಅಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ.
ಆರೋಗ್ಯ ತಜ್ಞರು ಹೇಳುವಂತೆ ಪೇರಳೆ ಹಣ್ಣು ಹಲವಾರು ಆರೋಗ್ಯ ಸಂಬಂಧಿ ಸಮಸ್ಯೆಗಳನ್ನ ನಿವಾರಿಸುವಲ್ಲಿ ಪರಿಣಾಮಕಾರಿಯಾಗಿದೆ. ಆದ್ರೆ, ನೀವು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದರೆ ಈ ಹಣ್ಣು ನಿಮಗೆ ಜೀವರಕ್ಷಕವಾಗಿದೆ ಮತ್ತು ಆದ್ದರಿಂದ ಇದನ್ನ ನಿಯಮಿತವಾಗಿ ತಿನ್ನಲು ಸೂಚಿಸಲಾಗುತ್ತದೆ.
ಜೀರ್ಣಾಂಗ ವ್ಯವಸ್ಥೆಯನ್ನ ಬಲಪಡಿಸುತ್ತದೆ : ಜೀರ್ಣಾಂಗ ವ್ಯವಸ್ಥೆಯನ್ನ ಬಲಪಡಿಸುವಲ್ಲಿ ಪೇರಳೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ನೀವು ಯಾವಾಗಲೂ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ಪೇರಳೆಯನ್ನ ಸೇವಿಸುವುದರಿಂದ ನಿಮಗೆ ಪ್ರಯೋಜನವಾಗುತ್ತದೆ. ಪೇರಳೆ ಮಾತ್ರವಲ್ಲ, ಅದರ ಎಲೆಗಳು ಜೀರ್ಣಕ್ರಿಯೆಯನ್ನ ಸುಧಾರಿಸುತ್ತದೆ. ಇದರ ಎಲೆಗಳನ್ನ ಅರೆದು ತಿಂದರೆ ಹೊಟ್ಟೆನೋವು ಗುಣವಾಗುತ್ತದೆ.
ಅಜೀರ್ಣಕ್ಕೆ ಒಳ್ಳೆಯದು : ನಿಮಗೆ ಯಾವಾಗಲೂ ಅಜೀರ್ಣ ಸಮಸ್ಯೆ ಇದ್ದರೆ ನಿಮ್ಮ ಆಹಾರದಲ್ಲಿ ಪೇರಳೆ ಸೇರಿಸಿ. ಊಟದ ನಂತರ ಪೇರಳೆವನ್ನ ಸೇವಿಸುವುದರಿಂದ ಅಜೀರ್ಣ ನಿವಾರಣೆಯಾಗುತ್ತದೆ. ಇದಲ್ಲದೆ, ನಿಮ್ಮ ಜೀರ್ಣಕ್ರಿಯೆಯು ಸುಧಾರಿಸುತ್ತದೆ. ಅಲ್ಲದೆ ಬೇಯಿಸಿದ ಪೇರಲ ಅಜೀರ್ಣ ಸಮಸ್ಯೆಯನ್ನ ಹೋಗಲಾಡಿಸಲು ಸಹಾಯ ಮಾಡುತ್ತದೆ.
ಮಲಬದ್ಧತೆಯಲ್ಲಿ ಪರಿಣಾಮಕಾರಿ : ಮಲಬದ್ಧತೆ ಹೊಂದಿರುವ ರೋಗಿಗಳ ಸ್ಥಿತಿಯು ಕೆಟ್ಟದಾಗಿದೆ. ನೀವೂ ಸಹ ಈ ಸಮಸ್ಯೆಯಿಂದ ಬಳಲುತ್ತಿದ್ದರೆ ಇದನ್ನು ನಿಯಂತ್ರಿಸಲು ಬೇಯಿಸಿದ ಪೇರಳೆಯನ್ನ ಸೇವಿಸಿ. ಮೊದಲು ಪೇರಳೆವನ್ನ ಹುರಿಯಿರಿ. ನಂತ್ರ ಅದನ್ನ ತುಂಡುಗಳಾಗಿ ಕತ್ತರಿಸಿ ಅದಕ್ಕೆ ಕಪ್ಪು ಉಪ್ಪನ್ನು ಸೇರಿಸಿ ತಿನ್ನಿರಿ. ಬೇಯಿಸಿದ ಪೇರಳೆಯನ್ನ ತಿನ್ನುವುದರಿಂದ ದೀರ್ಘಕಾಲದ ಕೆಮ್ಮು ಕಡಿಮೆಯಾಗುತ್ತದೆ.
ಆಮ್ಲೀಯತೆಯಲ್ಲಿ ಪರಿಣಾಮಕಾರಿ : ಅಸಿಡಿಟಿ, ಗ್ಯಾಸ್ ರೋಗಿಗಳು ನಿಯಮಿತವಾಗಿ ಪೇರಳೆಯನ್ನ ಸೇವಿಸಬೇಕು. ಪೇರಳೆಯೂ ಆಮ್ಲೀಯ ಹಣ್ಣಾಗಿದ್ದು, ಅದು ಆಮ್ಲೀಯತೆಯನ್ನ ತಟಸ್ಥಗೊಳಿಸುತ್ತದೆ. ಇಂತಹ ಸ್ಥಿತಿಯಲ್ಲಿ ಇದನ್ನ ಸೇವಿಸುವುದರಿಂದ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ದೂರವಾಗುತ್ತದೆ.
“ನಾನು ಕೂಡ ನನ್ನ ಕೆಲಸ ಕಳೆದುಕೊಳ್ಳಬಹುದು” : ‘ಕೃತಕ ಬುದ್ಧಿಮತ್ತೆ’ ಕುರಿತು ‘ಬಿಲ್ ಗೇಟ್ಸ್’ ಕಳವಳ
BREAKING : ಪತ್ನಿಯ ಕೊಲೆ ಪ್ರಕರಣದಿಂದ ಖುಲಾಸೆಗೊಂಡ NFL ಮಾಜಿ ತಾರೆ ‘OJ ಸಿಂಪ್ಸನ್’ ನಿಧನ
SHOCKING : ನದಿ ನೀರಿನಲ್ಲಿ ‘ಕ್ಯಾನ್ಸರ್’ ಉಂಟು ಮಾಡುವ ‘ಫಾರೆವರ್ ಕೆಮಿಕಲ್ಸ್’ ಪತ್ತೆ